ಮಡಿಕೇರಿ, ನ. ೭: ರಾಷ್ಟಿçÃಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ೩ನೇ ಸುತ್ತಿನ ಕಾಲುಬಾಯಿ ಜ್ವರ ರೋಗ ನಿರೋಧಕ ಲಸಿಕಾ ಕಾರ್ಯಕ್ರಮಕ್ಕೆ ಗೋಪೂಜೆ ನೆರವೇರಿಸಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸೋಮವಾರಪೇಟೆ ತಾಲೂಕಿನ ಕುಂಬೂರು ಗ್ರಾಮದಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಾಸಕರು, ಕೃಷಿಕರಿಗೆ ಜಾನುವಾರುಗಳು ಆರ್ಥಿಕ ಚಟುವಟಿಕೆಗೆ ಸಹಕಾರಿಯಾಗಿದ್ದು, ಜಾನುವಾರುಗಳ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು. ಆ ನಿಟ್ಟಿನಲ್ಲಿ ೪ ತಿಂಗಳು ಮೇಲ್ಪಟ್ಟ ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಕೊಡಿಸಬೇಕು ಎಂದು ಸಲಹೆ ಮಾಡಿದರು.
ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಬಾದಾಮಿ, ಹಿರಿಯ ಪಶುವೈದ್ಯ ಪರಿವೀಕ್ಷಕ ಸತ್ತಾರ್ ಖಾನ್ ಇತರರು ಇದ್ದರು.
ಕಾರ್ಯಕ್ರಮದ ವಿವರ: ತಾ. ೮ ರಂದು (ಇಂದು) ಮಡಿಕೇರಿ ತಾಲೂಕಿನ ಚೆಂಬು, ಕೊಳಕೇರಿ, ಮದೆನಾಡು ಮತ್ತು ತಣ್ಣಿಮಾನಿ, ವೀರಾಜಪೇಟೆ ತಾಲೂಕಿನ ಹೆಗ್ಗಳ, ಅರಮೇರಿ, ಕುಂಜಿಲಗೇರಿ, ಬಿಳುಗುಂದ ಮತ್ತು ಗುಹ್ಯ, ಸೋಮವಾರಪೇಟೆ ತಾಲೂಕಿನ ಕುಂಬೂರು, ಕುಸುಬೂರು, ಬಳಗುಂದ, ಹಾರೋಹಳ್ಳಿ, ನಿಡ್ತ, ಬೆಳ್ಳಾರಳ್ಳಿ, ಊರುಗುತ್ತಿ, ಕುಶಾಲನಗರ ತಾಲೂಕಿನ ಕೂಡುಮಂಗಳೂರು ಮತ್ತು ಉಲುಗುಲಿ, ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ, ಮತ್ತೂರು, ಹೈಸೊಡ್ಲೂರು ಮತ್ತು ಬಾಳೆಲೆಗಳಲ್ಲಿ ೩ನೇ ಸುತ್ತಿನ ಕಾಲು ಬಾಯಿ ಜ್ವರ ರೋಗ ನಿರೋಧಕ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದೆ.
ತಾ. ೯ ರಂದು ಮಡಿಕೇರಿ ತಾಲೂಕಿನ ಭಾಗಮಂಡಲ (ತಾವೂರು), ಚೆಂಬು, ಕಾಟಕೇರಿ, ಕೊಳಕೇರಿ, ಮದೆನಾಡು, ಸಂಪಾಜೆ ತಣ್ಣಿಮಾನಿ, ವೀರಾಜಪೇಟೆ ತಾಲೂಕಿನ ಹೆಗ್ಗಳ, ಬೇಟೋಳಿ, ಅರಮೇರಿ, ಕುಂಜಿಲಗೇರಿ, ಬಿಳುಗುಂದ, ಗುಹ್ಯ, ಬಾಳುಗೋಡು. ಸೋಮವಾರಪೇಟೆ ತಾಲೂಕಿನ ಚೌಡ್ಲು, ಸೋಮವಾರಪೇಟೆ, ಗರಗಂದೂರು, ಹಾರೋಹಳ್ಳಿ, ಗೋಪಾಲಪುರ, ಬಿದರೂರು, ಊರುಗುತ್ತಿ. ಕುಶಾಲನಗರ ತಾಲೂಕಿನ ಕೂಡುಮಂಗಳೂರು, ಹೊರೂರು, ಪೊನ್ನಂಪೇಟೆ ತಾಲೂಕಿನ ಕೆ.ಬಾಡಗ, ಮತ್ತೂರು, ಹೈಸೊಡ್ಲೂರು, ದೇವನೂರು.