ಕೂಡಿಗೆ, ನ. ೮: ರಾಷ್ಟಿçÃಯ ಸೇವಾ ಯೋಜನೆ (ಎನ್.ಎಸ್. ಎಸ್.) ವಿದ್ಯಾರ್ಥಿಗಳಲ್ಲಿ ರಾಷ್ಟಿçÃಯ ಭಾವೈಕ್ಯತೆ, ಸೇವಾ ಮನೋಭಾವ ಬೆಳೆಸುವುದರೊಂದಿಗೆ ಅವರಲ್ಲಿ ಉತ್ತಮ ನಾಯಕತ್ವ ಹಾಗೂ ವ್ಯಕ್ತಿತ್ವವನ್ನು ಬೆಳೆಸಲು ಉತ್ತಮ ಅವಕಾಶ ಕಲ್ಪಿಸುತ್ತದೆ ಎಂದು ರಾಜ್ಯ ಎನ್‌ಎಸ್‌ಎಸ್ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಪೂರ್ಣಿಮಾ ಜೋಗಿ ಹೇಳಿದರು.

ಕುಶಾಲನಗರ ಸ.ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಎನ್.ಎಸ್.ಎಸ್. ಜಿಲ್ಲಾ ಘಟಕದ ವತಿಯಿಂದ ಸರ್ಕಾರಿ ಪ್ರೌಢಶಾಲೆಗಳ ಎನ್‌ಎಸ್‌ಎಸ್ ಘಟಕ ಗಳ ಅನುಷ್ಠಾನಾಧಿಕಾರಿಗಳಿಗೆ ಏರ್ಪಡಿಸಿದ್ದ ಎನ್‌ಎಸ್‌ಎಸ್ ಕಾರ್ಯಾಗಾರವನ್ನು ಉದ್ಘಾಟಿಸಿ ಎನ್‌ಎಸ್‌ಎಸ್ ಕಾರ್ಯ ಚಟುವಟಿಕೆ ಗಳ ಕುರಿತು ಮಾಹಿತಿ ನೀಡಿದರು.

ಎನ್‌ಎಸ್‌ಎಸ್ ಎಂದರೆ ‘ನಾನು ಸೇವೆಗಾಗಿ ಸದಾ ಸಿದ್ಧ’ ಎಂದು. ‘ಎನ್.ಎಸ್.ಎಸ್.ನವರು ದೇಶ ಕಟ್ಟುತ್ತಾರೆ’. ಎನ್.ಎಸ್.ಎಸ್.ನವರದು ‘ಕಟ್ಟುವ ಮತ್ತು ಮೆತ್ತುವ ಕೆಲಸ’. ಇದರಿಂದ ಶ್ರಮದ ಮಹತ್ವ ವಿದ್ಯಾರ್ಥಿಗಳಿಗೆ ತಿಳಿಯುತ್ತದೆ ಎಂದರು.

ಎನ್‌ಎನ್‌ಎಸ್ ಸೇರುವ ಮೂಲಕ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳ ಬೇಕು ಎಂದು ಡಾ ಪೂರ್ಣಿಮಾ ಜೋಗಿ ಹೇಳಿದರು. ಸಂಪನ್ಮೂಲ ವ್ಯಕ್ತಿ ಚಿತ್ರದುರ್ಗದ ಡಾ ತಿಮ್ಮಣ್ಣ, ಚಟುವಟಿಕೆಗಳ ಮೂಲಕ ಗ್ರಾಮೀಣ ಜನಪದ ಕಲೆ, ಸಾಹಿತ್ಯ ಹಾಗೂ ಗ್ರಾಮೀಣ ಸೊಗಡನ್ನು ಪ್ರತಿಬಿಂಬಿಸು ತ್ತವೆ ಎಂದರು. ಹಳ್ಳಿಗಳಲ್ಲಿ ಶೌಚಾಲಯಗಳ ನಿರ್ಮಾಣ, ಜಲ ಸಂರಕ್ಷಣೆ, ಸ್ವಚ್ಛ ಭಾರತ ಅಭಿಯಾನ ಮತ್ತು ನಿಸರ್ಗದ ಕಾಳಜಿ ಸೇರಿದಂತೆ ಅನೇಕ ಜನರಲ್ಲಿ ಅರಿವು ಮೂಡಿಸುವ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸ ಬಹುದು ಎಂದರು.

ಕಾರ್ಯಕ್ರಮದ ಜಿಲ್ಲಾ ನೋಡಲ್ ಅಧಿಕಾರಿ ಡಾ. ಸದಾಶಿವಯ್ಯ ಎಸ್. ಪಲ್ಲೇದ್ ಮಾತ ನಾಡಿ, ಎನ್‌ಎಸ್‌ಎಸ್ ಘಟಕಗಳ ಮೂಲಕ ಶಾಲೆಗಳಲ್ಲಿ ಸಂಘಟಿಸ ಬೇಕಾದ ವಿವಿಧ ಕಾರ್ಯಕ್ರಮಗಳು ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳ ಕುರಿತು ವಿವರಿಸಿದರು.

ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಎಸ್.ಟಿ. ವೆಂಕಟೇಶ್, ಎನ್‌ಎಸ್‌ಎಸ್ ಘಟಕಗಳಲ್ಲಿ ದಾಖಲೆಗಳು ಮತ್ತು ಕಾರ್ಯಕ್ರಮಗಳ ವರದಿ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಉಪ ಪ್ರಾಂಶುಪಾಲ ವೈ.ಎಸ್. ಪರಮೇಶ್ವರಪ್ಪ ಮಾತನಾಡಿದರು. ಕಾರ್ಯಕ್ರಮ ಅಧಿಕಾರಿ ಎ.ಎ. ಲಕ್ಷö್ಮಣ್, ಶಿಕ್ಷಕರಾದ ಎ.ಸಿ. ಮಂಜುನಾಥ್, ಎಂ.ಎಸ್. ಮಹೇಂದ್ರ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಗಾಯಿತ್ರಿ, ಸುಕುಮಾರಿ, ಚಿತ್ರಕಲಾ ಶಿಕ್ಷಕ ಉ.ರಾ. ನಾಗೇಶ್ ಇದ್ದರು.