ಕೂಡಿಗೆ, ನ. ೬: ಕಾವಲುಪಡೆ ರಾಜ್ಯ ಅಧ್ಯಕ್ಷ ಮೋಹನ ಕುಮಾರ್ ಗೌಡರ ೫೦ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಮತ್ತು ಕನ್ನಡ ರಾಜ್ಯೋತ್ಸವ ಅಂಗವಾಗಿ ಕರ್ನಾಟಕ ಕಾವಲುಪಡೆ ಕೊಡಗು ಜಿಲ್ಲಾ ಘಟಕ ವತಿಯಿಂದ ಮುಳ್ಳುಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲೆಯ ಬ್ಯಾಗ್‌ಗಳನ್ನು ಕೊಡಗು ಜಿಲ್ಲಾ ಕರ್ನಾಟಕ ಕಾವಲು ಪಡೆಯ ಜಿಲ್ಲಾಧ್ಯಕ್ಷ ಎಂ. ಕೃಷ್ಣ ವಿತರಣೆ ಮಾಡಿದರು. ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಇಂದಿರಾ, ಮುಖ್ಯೋಪಾಧ್ಯಾಯಿನಿ ಭಾಗ್ಯ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹರೀಶ್, ಸದಸ್ಯರಾದ ಧರ್ಮರಾಜ್, ಮಮತ, ಭಾಗ್ಯಶ್ರೀ, ಸಹ ಶಿಕ್ಷಕರಾದ ಶಿವಲಿಂಗು, ರಾಗಿಣಿ, ವಿಜಯ, ಮೇರಿ ವಾಣಿ ಭಾಗವಹಿಸಿದ್ದರು.