ಸೋಮವಾರಪೇಟೆ, ನ. ೬: ಅಬಕಾರಿ ಇಲಾಖೆ, ತಥಾಸ್ತು ಸಾತ್ವಿಕ ಸಂಸ್ಥೆ ಸೋಮವಾರಪೇಟೆ, ಮಡಿಕೇರಿ ರಕ್ತನಿಧಿ ಘಟಕ, ಜಿಲ್ಲಾ ಎಚ್.ಐ.ವಿ.ನಿಯಂತ್ರಣ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ತಾ. ೭ ರಂದು (ಇಂದು) ರಕ್ತದಾನ ಶಿಬಿರ ಮತ್ತು ಅಂಗಾAಗ ದಾನ ಹಾಗೂ ಏಡ್ಸ್ ಕುರಿತ ಮಾಹಿತಿ ಅರಿವು ಕಾರ್ಯಾಗಾರ ಮಹಿಳಾ ಸಮಾಜದಲ್ಲಿ ಬೆಳಿಗ್ಗೆ ೧೦ಗಂಟೆಗೆ ನಡೆಯಲಿದೆ ಎಂದು ಅಬಕಾರಿ ನಿರೀಕ್ಷಕರಾದ ಲೋಕೇಶ್ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.