ಮಡಿಕೇರಿ: ತಾ. ೨೯ ರಂದು ಕಡಗದಾಳು ಗ್ರಾಮ ಪಂಚಾಯಿತಿಗೆ ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ನಿರ್ಮಾಣದ ಅಂಗವಾಗಿ ಪವಿತ್ರ ಮೃತ್ತಿಕೆಯನ್ನು ಸಂಗ್ರಹಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಅಪ್ಪಚ್ಚುರಂಜನ್, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ವಿವಿಧ ಸಂಘಟನೆಗಳ ಪ್ರಮುಖರು ಹಾಜರಿದ್ದರು.
ಬಿಟ್ಟಂಗಾಲ ಗ್ರಾಮ: *ಗೋಣಿಕೊಪ್ಪ: ಕೆಂಪೇಗೌಡರು ಒಂದು ವರ್ಗಕ್ಕೆ ಮಾತ್ರ ಸೀಮಿತವಾದ ವ್ಯಕ್ತಿ ಅಲ್ಲ, ದೇಶಕ್ಕೆ ಸೇರಿದ ವ್ಯಕ್ತಿ ಅವರ ಪ್ರತಿಮೆ ನಿರ್ಮಾಣ ನಮ್ಮ ಜೀವಿತಾವಧಿಯಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಚಾರ ಎಂದು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧÀ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ಬಿಟ್ಟಂಗಾಲ ಗ್ರಾಮದ ಮೃತ್ತಿಕಾ ಸಂಗ್ರಹ ಅಭಿಯಾನದಲ್ಲಿ ಶ್ರೀ ಪ್ರಾರ್ಥನ ಮಡಪೂರ ಮುತ್ತಪ್ಪ ದೇವಸ್ಥಾನದ ಮುಂಭಾಗದಲ್ಲಿ ಗ್ರಾಮಸ್ಥರಿಂದ ಪವಿತ್ರ ಮಣ್ಣನ್ನು ಸಂಗ್ರಹಿಸಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಮಡಿಕೇರಿ ಶಾಸಕ ಮಂಡೇಪAಡ ಅಪ್ಪಚ್ಚು ರಂಜನ್, ಕಾರ್ಯ ನಿರ್ವಾಹಕಾಧಿಕಾರಿ ಕೊಣಿಯಂಡ ಅಪ್ಪಣ, ತಾಲೂಕು ಅಕ್ರಮ ಸಕ್ರಮ ಸಮಿತಿ ಅದ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಬಿ.ಜೆ.ಪಿ. ಜಿಲ್ಲಾ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ತಾಲೂಕು ಬಿಜೆಪಿ ಮಂಡಳ ಅಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ಕಾರ್ಯದರ್ಶಿ ಅಜ್ಜಿಕುಟ್ಟಿರ ಪ್ರವೀಣ್, ಕುಪ್ಪಂಡ ಗಿರಿ ಪೂವಣ್ಣ, ಸಿ.ಕೆ. ಬೋಪಣ್ಣ, ಬಿಟ್ಟಂಗಾಲ ಶಕ್ತಿ ಕೇಂದ್ರದ ಪ್ರಮುಖ್ ಅಪ್ಪಂಡೇರAಡ ದಿನೇಶ್, ಬಿಟ್ಟಂಗಾಲ ಗ್ರಾ.ಪಂ. ಅಧ್ಯಕ್ಷೆ ಸರಸು, ಪಿಡಿಓ ವಿಶ್ವನಾಥ್, ಸದಸ್ಯರು ಸೇರಿದಂತೆ ಗ್ರಾಮಸ್ಥರು ಇದ್ದರು.ಕಾಕೋಟುಪರಂಬು ಗ್ರಾಮ: *ಗೋಣಿಕೊಪ್ಪ: ಕೊಡಗಿನ ೫ಲಕ್ಷಕ್ಕೂ ಹೆಚ್ಚು ಜನ ಬದುಕು ಆಶ್ರಯ ಕಂಡುಕೊAಡ ಬೆಂಗಳೂರಿನಲ್ಲಿ ಕೆಂಪೇಗೌಡರ ಪ್ರತಿಮೆಯನ್ನು ಅನಾವರಣಗೊಳಿಸಲಾಗುತ್ತಿದೆ. ಅಂತಹ ಸಂದರ್ಭದಲ್ಲಿ ಕೊಡಗಿನಿಂದ ಮಣ್ಣು ಸಂಗ್ರಹಿಸಿ ಕಳುಹಿಸುತ್ತಿರುವುದು ಅವಿಸ್ಮರಣೀಯ ಎಂದು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ಕಾಕೋಟುಪರಂಬು ಗ್ರಾಮದ ಆವರಣದಿಂದ ಸಂಗ್ರಹಿಸಿದ್ದ ಮಣ್ಣನ್ನು ಪೂಜೆ ಸಲ್ಲಿಸಿ ಕೆಂಪೇಗೌಡ ರಥಕ್ಕೆ ತುಂಬುವ ಕಾರ್ಯದಲ್ಲಿ ಮಾತನಾಡಿದರು. ಅಭಿವೃದ್ಧಿಯ ಹರಿಕಾರ ಕೆಂಪೇಗೌಡರು ರಾಜ್ಯಕ್ಕೆ ಮಾದರಿ ನಡೆಯನ್ನು ನೀಡುವ ಮೂಲಕ ಉದ್ಯೋಗ ಮತ್ತು ನೆಲೆಯನ್ನು ಕಲ್ಪಿಸಿದ್ದಾರೆ. ಇವರ ಮುಂದಾಲೋಚನೆ ಇತಿಹಾಸದ ಸ್ಮರಣೆ ಎಂದು ತಿಳಿಸಿದರು.
ಮಡಿಕೇರಿ ಶಾಸಕ ಮಂಡೇಪAಡ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಕಾರ್ಯನಿರ್ವಾಹಕಾಧಿಕಾರಿ ಕೊಣಿಯಂಡ ಅಪ್ಪಣ್ಣ, ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಬಿ.ಜೆ.ಪಿ. ಜಿಲ್ಲಾ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ಕಾಕೋಟುಪರಂಬು ಅಧ್ಯಕ್ಷ ಗಿರೀಶ್ ಬೋಪಣ್ಣ, ಉಪಾಧ್ಯಕ್ಷೆ ರೇವತಿ, ಪಿಡಿಓ ಮಂಜುಳ, ಗ್ರಾ.ಪಂ. ಸದಸ್ಯರು ಸೇರಿದಂತೆ ಗ್ರಾಮಸ್ಥರು ಇದ್ದರು.ಪೊನ್ನಂಪೇಟೆ ತಾಲೂಕಿನಲ್ಲಿ: *ಗೋಣಿಕೊಪ್ಪ: ನಾಡಪ್ರಭು ಕೆಂಪೇಗೌಡ ಅವರ ೧೦೮ ಅಡಿ ಎತ್ತರದ ಕಂಚಿನ ಪ್ರತಿಮೆ ಬೆಂಗಳೂರಿನಲ್ಲಿ ಉದ್ಘಾಟನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮೃತ್ತಿಕೆ ಸಂಗ್ರಹ ಅಭಿಯಾನಕ್ಕೆ ವೀರಾಜಪೇಟೆ, ಪೊನ್ನಂಪೇಟೆ ತಾಲೂಕಿನಾದ್ಯಂತ ರಥ ಸಂಚಾರ ನಡೆಯಿತು.
ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ಸಮಿಪದಲ್ಲಿ ರಥವನ್ನು ಮಹಿಳೆಯರು ಪೂರ್ಣ ಕುಂಭ ಹಿಡಿದು ಮಕ್ಕಳು ಬ್ಯಾಂಡ್ ನಾದದೊಂದಿಗೆ ಭವ್ಯ ಸ್ವಾಗತ ಕೋರಿದರು.
ಚೆಂಬೆಬೆಳ್ಳೊರು ಗ್ರಾಮದ ದೇವಣಿಗೆರೆ ಬಿ.ಸಿ. ಪ್ರೌಢಶಾಲೆ ಮತ್ತು ಭದ್ರಕಾಳಿ ದೇವಸ್ಥಾನ ಆವರಣದಿಂದ ಸಂಗ್ರಹಿಸಿದ್ದ ಮಣ್ಣನ್ನು ಪೂಜೆ ಸಲ್ಲಿಸಿ ಕೆಂಪೇಗೌಡ ರಥಕ್ಕೆ ತುಂಬಲಾಯಿತು.
ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ, ಮಡಿಕೇರಿ ಶಾಸಕ ಮಂಡೇಪAಡ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಮಂಡೆಪAಡ ಸುಜಾ ಕುಶಾಲಪ್ಪ, ವೀರಾಜಪೇಟೆ ತಾಲೂಕು ತಹಶೀಲ್ದಾರ್ ಅರ್ಚನ್ ಭಟ್, ಕಾರ್ಯನಿರ್ವಾಹಕ ಅಧಿಕಾರಿ ಕೊಣಿಯಂಡ ಅಪ್ಪಣ, ಮಹಿಳಾ ಮಕ್ಕಳ ಅಭಿವೃದ್ಧಿ ತಾಲೂಕು ಅಧಿಕಾರಿ ರಾಜೇಶ್, ತಾಲೂಕು ಅಕ್ರಮ ಸಕ್ರಮ ಸಮಿತಿ ಅಧÀ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಜಿ.ಪಂ. ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮುಕೊಂಡ ಶಶಿ ಸುಬ್ರಮಣಿ, ಬಿ.ಜೆ.ಪಿ. ಜಿಲ್ಲಾ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ತಾಲೂಕು ಯುವ ಮೋರ್ಚ ಅಧ್ಯಕ್ಷ ಸೋಮಯ್ಯಂಡ ಕವನ್ ಕಾರ್ಯಪ್ಪ, ಚೆಂಬೆಬೆಳ್ಳೂರು ಅಧ್ಯಕ್ಷರು ಬೋಜಿ ಪಿ.ಬಿ., ಉಪಾಧ್ಯಕ್ಷ ಮೂಕೊಂಡ ಉಮೇಶ್, ಸದಸ್ಯರು ಡಾಲಿ, ವಾಸು, ವೀಣಾ ಸೇರಿದಂತೆ ಗ್ರಾಮಸ್ಥರು ಇದ್ದರು.ಹಾತೂರಿನಲ್ಲಿ ಸ್ವಾಗತ: *ಗೋಣಿಕೊಪ್ಪ: ಹಾತೂರು ಗ್ರಾಮದ ಪವಿತ್ರ ಮಣ್ಣನ್ನು ಕೆಂಪೇಗೌಡ ಮಣ್ಣಿನ ಸಂಗ್ರಹ ರಥಕ್ಕೆ ಹಾತೂರು ಪಂಚಾಯಿತಿ ಅಧ್ಯಕ್ಷ ಗುಮ್ಮಟೀರ ದರ್ಶನ್ ನಂಜಪ್ಪ ಹಾಗೂ ಸದಸ್ಯರುಗಳು, ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ, ಮಡಿಕೇರಿ ಶಾಸಕ ಮಂಡೇಪAಡ ಅಪ್ಪಚ್ಚು ರಂಜನ್ ಅವರ ಸಮ್ಮುಖದಲ್ಲಿ ಸ್ವಾಗತ ಕೋರಲಾಯಿತು.
ಮಹಿಳೆಯರು ಪೂರ್ಣ ಕುಂಭದೊAದಿಗೆ ಸ್ವಾಗತಿಸಿ, ರಥಕ್ಕೆ ಪೂಜೆ ನೆರವೇರಿಸಿ ಭಕ್ತಿ ಅಭಿಮಾನದಿಂದ ಕೆಂಪೇಗೌಡರನ್ನ ಸ್ಮರಿಸಿದರು. ಕಾರ್ಯನಿರ್ವಾಹಕಾಧಿಕಾರಿ ಕೊಣಿಯಂಡ ಅಪ್ಪಣ್ಣ, ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಬಿ.ಜೆ.ಪಿ. ಜಿಲ್ಲಾ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ಕಾರ್ಯದರ್ಶಿ ಅಜ್ಜಿಕುಟ್ಟಿರ ಪ್ರವೀಣ್, ಕುಪ್ಪಂಡ ಗಿರಿ ಪೂವಣ್ಣ, ಸಿ.ಕೆ. ಬೋಪಣ್ಣ, ಗ್ರಾ.ಪಂ. ಸದಸ್ಯರು, ಗ್ರಾಮಸ್ಥರು ಇದ್ದರು.ಕದನೂರು ಗ್ರಾಮದಲ್ಲಿ: *ಗೋಣಿಕೊಪ್ಪ: ಕದನೂರು ಗ್ರಾಮದ ಆವರಣದಿಂದ ಸಂಗ್ರಹಿಸಿದ್ದ ಮಣ್ಣನ್ನು ಪೂಜೆ ಸಲ್ಲಿಸಿ ಕೆಂಪೇಗೌಡ ರಥಕ್ಕೆ ತುಂಬುವ ಕಾರ್ಯ ನಡೆಯಿತು.
ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ, ಮಡಿಕೇರಿ ಶಾಸಕ ಮಂಡೇಪAಡ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಕಾರ್ಯನಿರ್ವಾಹಕಾಧಿಕಾರಿ ಕೊಣಿಯಂಡ ಅಪ್ಪಣ್ಣ, ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ಕದನೂರು ಗ್ರಾ.ಪಂ. ಅಧ್ಯಕ್ಷೆ ಎ.ಎಲ್. ಪುಷ್ಪಲತಾ, ಉಪಾಧ್ಯಕ್ಷೆ ಎನ್.ವಿ. ಮಮತಾ, ಪಿಡಿಓ ಮಂಜುಳ, ಗ್ರಾ.ಪಂ. ಸದಸ್ಯರು ಸೇರಿದಂತೆ ಗ್ರಾಮಸ್ಥರು ಇದ್ದರು.ಮಾಲ್ದಾರೆ ಗ್ರಾಮ ಪಂಚಾಯಿತಿ: ಸಿದ್ದಾಪುರ: ನಾಡಪ್ರಭು ಕೆಂಪೇಗೌಡರ ೧೦೮ ಅಡಿ ಎತ್ತರದ ಭವ್ಯ ಕಂಚಿನ ಪ್ರಗತಿಯ ಪ್ರತಿಮೆ ಅನಾವರಣ ಪ್ರಯುಕ್ತ ವೀರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪವಿತ್ರ ಮೃತ್ತಿಕೆ ಸಂಗ್ರಹಣೆ ಮಾಡಲಾಯಿತು.
ಗ್ರಾಮದ ಸಂಘ ಸಂಸ್ಥೆಯ ಮಹಿಳೆಯರು ಆಶಾ ಕಾರ್ಯಕರ್ತರು ಅಂಗನವಾಡಿ ಶಿಕ್ಷಕರು ಪಂಚಾಯಿತಿ ಮಹಿಳಾ ಸದಸ್ಯರು ಕಳಸ ಹೊತ್ತು ಪವಿತ್ರ ಮಣ್ಣನ್ನು ಸಂಗ್ರಹಿಸುವ ವಾಹನವನ್ನು ಬರಮಾಡಿಕೊಂಡರು. ನಂತರ ಪವಿತ್ರ ಮೃತ್ತಿಕೆ ಪೂಜೆ ಸಲ್ಲಿಸಿದರು. ಬೆಂಗಳೂರನ್ನು ೪೦೦ ವರ್ಷಗಳ ಹಿಂದೆ ಕಟ್ಟಿ ಬೆಳೆಸಿದ ಮಹಾನ್ ನಾಯಕ ನಾಡಪ್ರಭು ಕೆಂಪೇಗೌಡರ ಹೆಸರು ಶಾಶ್ವತವಾಗಿ ಉಳಿಯಲು ೧೦೮ ಅಡಿ ಕಂಚಿನ ಪ್ರತಿಮೆ ಸ್ಥಾಪನೆಯ ಚಿಂತನೆಯೊAದಿಗೆ ‘ಪ್ರಗತಿಯ ಪ್ರತಿಮೆ’ ಮತ್ತು ಕೆಂಪೇಗೌಡ ಥೀಮ್ ಪಾರ್ಕಿನ ಉದ್ಘಾಟನಾ ಕಾರ್ಯಕ್ರಮವನ್ನು ತಾ. ೧೧ ರಂದು ಪ್ರಧಾನಿಗಳು ನೆರವೇರಿಸಲಿದ್ದಾರೆ.
ಕಾರ್ಯಕ್ರಮ ಸರ್ಕಾರ ಬೆಂಗಳೂರು ಜನತೆಗೆ ಸೀಮಿತವಾಗಬಾರದು ಎಂಬ ದೃಷ್ಟಿಯಿಂದ ರಾಜ್ಯದ ಗ್ರಾಮ ಮಟ್ಟದಲ್ಲಿ ಪವಿತ್ರ ಮೃತ್ತಿಕೆ ಸಂಗ್ರಹಣ ಅಭಿಯಾನ ಆರಂಭವಾಗಿದೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು. ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಸಮೀರ್, ಉಪಾಧ್ಯಕ್ಷೆ ಪುಷ್ಪ, ಕಂದಾಯ ನಿರೀಕ್ಷಕರು ಅನಿಲ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಕೆ. ರಾಜೇಶ್, ಗ್ರಾ.ಪಂ. ಸದಸ್ಯರು ಹಾಗೂ ಅಧಿಕಾರಿಗಳು, ಗ್ರಾಮಸ್ಥರು, ಮಹಿಳೆಯರು ಹಾಜರಿದ್ದರು.