ಮಡಿಕೇರಿ, ನ. ೬: ಕೂಡಿಗೆಯಲ್ಲಿ ನಡೆದ ಜಿಲ್ಲಾಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಪೊನ್ನಂಪೇಟೆ ಸಂತ ಅಂತೋಣಿ ಪ್ರೌಢಶಾಲೆಯ ಗಣಪತಿ ಬಿ. ಜೆ ೩೦೦೦ ಮೀಟರ್ ಓಟ, ಶಿವಾನ್ ಪೊನ್ನಣ್ಣ ಎ.ಎಂ ೮೦೦ ಮೀಟರ್ ಓಟ, ನಿಶಾಂತ್ ಎಂ ೧೫೦೦ ಮೀಟರ್ ಓಟ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಲ್ಲದೆ ಧನುಷ್ ಹೆಚ್.ಎಸ್. ಹಾಗೂ ಮನ್ವಿತ್ ಎಂ.ವಿ. ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.