ಮಡಿಕೇರಿ, ನ. ೫ : ಗ್ರಾಮಾಂತರ ಪ್ರದೇಶವಾಗಿರುವ ಮರಗೋಡಿನಲ್ಲಿ ಸಂಭ್ರಮದ ವಾತಾವರಣ., ಪುಟಾಣಿಗಳಿಂದ ಹಿಡಿದು ವಯೋವೃದ್ಧರಾದಿಯಾಗಿ ಎಲ್ಲರೂ ಒಂದೇ ಕಡೆಯಲ್ಲಿ ಬೆರೆತು ಆಡಿ., ಓಡಿ ನಲಿಯುವ ಅಪರೂಪದ ಕ್ಷಣ., ಗೆದ್ದವರ ಸಂಭ್ರಮ ಒಂದೆಡೆಯಾದರೆ, ಸೋತರೂ ತಾವೂ ಗೆದ್ದೆವೆಂಬ ಸಮಾಧಾನಿತರ ಕೂಟ ಮತ್ತೊಂದೆಡೆ., ಜಾತಿ, ಮತ, ಬೇಧವಿಲ್ಲದೆ ಎಲ್ಲರೂ ಒಂದೇ ವೇದಿಕೆಯಡಿ ಕೂಡಿಯಾಡುವ ಸಂತಸ ಗ್ರಾಮದೆಲ್ಲೆಡೆ ಪಸರಿಸಿದೆ.

ಈ ಒಂದು ಅಪರೂಪದ ವೇದಿಕೆಗೆ ಸಾಕ್ಷಿಯಾಗಿರುವದು ಮರಗೋಡು ಸ್ಪೋರ್ಟ್ಸ್ ಅಂಡ್ ರಿಕ್ರಿಯೇಶನ್ ಕ್ಲಬ್.., ಕ್ಲಬ್‌ನ ವತಿಯಿಂದ ಏರ್ಪಡಿಸಲಾಗಿರುವ ಅಂತರ ಗ್ರಾಮ ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ ಸುತ್ತಮುತ್ತಲಿನ ಮರಗೋಡು, ಹೊಸ್ಕೇರಿ, ಕಟ್ಟೆಮಾಡು, ಐಕೊಳ ಹಾಗೂ ಅರೆಕಾಡು ಗ್ರಾಮಗಳ ಗ್ರಾಮಸ್ಥರು ಪಾಲ್ಗೊಂಡಿರುವ ಕ್ರೀಡಾಕೂಟ ಪರಸ್ಪರ ಒಗ್ಗಟ್ಟಿನ ಹಾದಿಗೆ ನಾಂದಿ ಹಾಡಿತು.

ಪ್ರತಿಭೆಗಳು ಬೆಳಕಿಗೆ

ಕ್ರೀಡಾಕೂಟದ ಸಮಾರಂಭ ವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಕೋಚನ ಶ್ರೀನಿವಾಸ್, ಇದೊಂದು ಎಲ್ಲರನ್ನೂ ಒಗ್ಗೂಡಿಸುವ ಕಾರ್ಯಕ್ರಮವಾಗಿದೆ. ಯಾವದೇ ಜಾತಿ, ಮತ, ಬೇಧ ಭಾವನೆಯಿಲ್ಲದಿರುವ ಕ್ಷೇತ್ರವೆಂದರೆ ಅದು ಕ್ರೀಡಾಕ್ಷೇತ್ರ. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಒಲಂಪಿಕ್ಸ್ನ್ನು ಎಲ್ಲ ರಾಷ್ಟçದವರು ಒಂದಾಗಿ ಶಾಂತಿ,

(ಮೊದಲ ಪುಟದಿಂದ) ಸೌಹಾರ್ದತೆಯಿಂದ ಬೆರೆಯಲೆಂಬ ಉದ್ದೇಶದೊಂದಿಗೆ ನಡೆಸಲಾಗುತ್ತದೆ. ರಾಷ್ಟçಕವಿ ಕುವೆಂಪು ಕೂಡ ಇದೇ ಮಾತನ್ನ ಹೇಳಿದ್ದಾರೆ ಎಂದು ಹೇಳಿದರು. ಇಂತಹ ಕ್ರೀಡಾಕೂಟಗಳಿಂದ ಎಲೆಮರೆಯಲ್ಲಿರುವ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ಸಹಕಾರಿಯಾಗಲಿದೆ ಎಂದರು.

ಒಗ್ಗೂಡಿಸುವ ಕೆಲಸ

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ; ಗ್ರಾಮಾಂತರ ಪ್ರದೇಶದಲ್ಲಿ ಇದೊಂದು ಎಲ್ಲ ಗ್ರಾಮದವರನ್ನು ಒಗ್ಗೂಡಿಸುವ ಕೆಲಸವಾಗಿದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಅಡಗಿರುವ ಪ್ರತಿಭೆಗಳ ವಿಕಸನಗೊಳಿಸುವ ಕಾರ್ಯವಾಗಲಿದೆ ಎಂದು ಹೇಳಿದರು. ಆರೋಗ್ಯವೇ ಭಾಗ್ಯವಾಗಿದ್ದು, ಆರೋಗ್ಯ ಚೆನ್ನಾಗಿದ್ದರೆ ಮನುಷ್ಯ ಲವಲವಿಕೆಯಿಂದಿರಲು ಸಾಧ್ಯ. ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ವ್ಯಾಯಾಮ, ಯೋಗ, ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಆರೋಗ್ಯ ಕೆಟ್ಟ ಮೇಲೆ ವೈದ್ಯರಲ್ಲಿಗೆ ಹೋಗುವ ಬದಲಿಗೆ ಆರೋಗ್ಯ ಕೆಡದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಕಿವಿಮಾತು ಹೇಳಿದರು. ಕ್ರೀಡೆ ಆರೋಗ್ಯ ವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ಕ್ರೀಡಾಪಟುಗಳು ಎಂದಿಗೂ ಆರೋಗ್ಯವಂತರಾಗಿರುತ್ತಾರೆ; ತಾವೂ ಕೂಡ ಶಾಸಕರ ಕ್ರೀಡಾಕೂಟದಲ್ಲಿ ಚಾಂಪಿಯನ್ ಆಗಿದ್ದನ್ನು ನೆನಪಿಸಿಕೊಂಡರಲ್ಲದೆ, ರಾಜ್ಯದ ಶಾಸಕರು ತಮ್ಮ ವೈದ್ಯಕೀಯ ನಿಧಿಯಡಿ ಕೋಟಿಗಟ್ಟಲೆ ವೆಚ್ಚ ಬರಿಸಿಕೊಳ್ಳುತ್ತಿದ್ದು, ತಾವು ಇದುವರೆಗೆ ಒಂದು ರೂಪಾಯಿ ಕೂಡ ಪಡೆದುಕೊಂಡಿಲ್ಲ, ಇದಕ್ಕೆ ಯೋಗ ಹಾಗೂ ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವದೇ ಕಾರಣವೆಂದು ಉದಾಹರಿಸಿದರು.

ಸಂಬAಧಕ್ಕೆ ನಾಂದಿ

ಮತ್ತೋರ್ವ ಅತಿಥಿ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ಕೆ.ವಿ. ರೇಣುಕಾಪ್ರಸಾದ್ ಮಾತನಾಡಿ; ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕ್ರೀಡಾಕೂಟ ಏರ್ಪಡಿಸುವದರಿಂದ ಎಲ್ಲರನ್ನೂ ಒಗ್ಗೂಡಿಸಲು ಸಾಧ್ಯವಾಗಲಿದೆ. ಎಲ್ಲರಿಗೂ ಚಟುವಟಿಕೆಯಿಂದಿರಲು ಪ್ರೇರಣೆಯಾಗುತ್ತದೆ. ಪರಸ್ಪರ ಗೆಳೆತನ, ಐಕ್ಯತೆ, ಸಂಬAಧಗಳನ್ನು ಬೆಳೆಸಲು ನಾಂದಿಯಾಗಲಿದೆ ಎಂದು ಹೇಳಿದರು.

ಆಕರ್ಷಕ ಪಥ ಸಂಚಲನ

ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ವಿವಿಧ ಗ್ರಾಮಗಳ ಕ್ರೀಡಾಪಟುಗಳು ಪಥಸಂಚಲನ ನಡೆಸಿದರು. ಒಲಂಪಿಕ್ಸ್ ಕ್ರಿಡಾಕೂಟದಲ್ಲಿ ನಡೆಸುವ ಪಥಸಂಚಲನದAತೆ ಆಕರ್ಷಣೀಯವಾಗಿದ್ದ ಪಥ ಸಂಚಲನದ ಗೌರವ ವಂದನೆಯನ್ನು ಮುಖ್ಯ ಅತಿಥಿ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾಪ್ರಸಾದ್ ಸ್ವೀಕಾರ ಮಾಡಿದರು. ಇದಕ್ಕೂ ಮುನ್ನ ಅವರು ಕ್ರೀಡಾಕೂಟದ ಧ್ವಜಾರೋಹಣ ಕೂಡ ನೆರವೇರಿಸಿದರು. ಅಂತರರಾಷ್ಟಿçÃಯ ಮೆರಾಥಾನ್ ಓಟಗಾರ ಹೊಸೊಕ್ಲು ಚಿಣ್ಣಪ್ಪ ಅವರು ಗ್ರಾಮದ ಕ್ರೀಡಾಪಟುಗಳೊಂದಿಗೆ ಕ್ರೀಡಾಜ್ಯೋತಿ ಬೆಳಗಿಸಿದರು.

ಕ್ಲಬ್‌ನ ಅಧ್ಯಕ್ಷ ಕೋಚನ ಅನೂಪ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮರಗೋಡು ಗ್ರಾ.ಪಂ. ಅಧ್ಯಕ್ಷೆ ಅಯ್ಯಂಡ್ರ ಪೂರ್ಣಿಮಾ, ಉದ್ಯಮಿ ಬಿದ್ರುಪಣೆ ಗಣೇಶ್, ಜಿಲ್ಲಾ ಒಕ್ಕಲಿಗರ ವೇದಿಕೆ ಅಧ್ಯಕ್ಷ ಗಿರೀಶ್ ಮಲ್ಲಪ್ಪ, ನಿರ್ದೇಶಕ ಡಿ.ಕೆ.ಅರುಣ್, ಉದ್ಯಮಿ ಹಸೈನಾರ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಾಂಗೀರ ಸತೀಶ್ ಉಪಸ್ಥಿತರಿದ್ದರು. ಸ್ಮಿತಾ ಮತ್ತು ತಂಡದವರು ಪ್ರಾರ್ಥಿಸಿದರು, ಕಟ್ಟೆಮೆನೆ ಸೋನಾಜಿತ್ ಹಾಗೂ ಮಳ್ಳಂದಿರ ಕೃಷ್ಣರಾಜು ನಿರೂಪಣೆ ಮಾಡಿದರು, ಕೋಚನ ಡೀನಾ ಅನೂಪ್ ವಂದಿಸಿದರು.

ಕ್ರೀಡಾಕೂಟಗಳು

ಮರಗೋಡು, ಕಟ್ಟೆಮಾಡು, ಅರೆಕಾಡು, ಹೊಸ್ಕೇರಿ ಮತ್ತು ಐಕೊಳ ಗ್ರಾಮಸ್ಥರು ಪಾಲ್ಗೊಂಡಿರುವ ಮೊದಲ ದಿನದ ಕ್ರೀಡಾಕೂಟದಲ್ಲಿ ಪುರುಷರಿಗೆ ವಾಲಿಬಾಲ್, ಕಬಡ್ಡಿ, ಹಗ್ಗಜಗ್ಗಾಟ ಮತ್ತು ಫುಟ್ಬಾಲ್ ಪಂದ್ಯಾಟಗಳು ನಡೆದವು. ಮಹಿಳೆಯರ ಥ್ರೋಬಾಲ್ ಪಂದ್ಯಾಟದಲ್ಲಿ ಕಟ್ಟೆಮಾಡು ತಂಡ ಮರಗೋಡು ತಂಡವನ್ನ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿತು. ಪುರುಷರ ವಾಲಿಬಾಲ್‌ನಲ್ಲಿ ಹೊಸ್ಕೇರಿ ತಂಡವನ್ನು ಮಣಿಸಿದ ಅರೆಕಾಡು ಪ್ರಥಮಸ್ಥಾನ ಪಡೆಯಿತು. ಮಹಿಳೆಯರಿಗೆ ಕಬಡ್ಡಿ ಮತ್ತು ಹಗ್ಗಜಗ್ಗಾಟ ಸ್ಪರ್ಧೆಗಳು ನಡೆದವು. ಕ್ರೀಡಾಕೂಟದ ಎರಡನೆಯ ದಿನ ಅಂದರೆ ತಾ. ೬ ರಂದು (ಇಂದು) ವಿವಿಧ ಟ್ರ‍್ಯಾಕ್ ಮತ್ತು ಫೀಲ್ಡ್ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ.

? ಕುಡೆಕಲ್ ಸಂತೋಷ್