ಮಡಿಕೇರಿ, ನ. ೫: ಹಲವಾರು ಸ್ಥಿತ್ಯಂತರಗಳನ್ನು ಹಾದು ಬಂದಿರುವ ಪತ್ರಿಕಾ ಕ್ಷೇತ್ರ ಯಾವತ್ತೂ ಜನಸಮುದಾಯಕ್ಕೆ ಉತ್ತರದಾಯಿತ್ವವನ್ನು ಹೊಂದಿರಬೇಕು ಮತ್ತು ಪತ್ರಕರ್ತರು ಸದಾ ಜನರ ಭಾವನೆಗಳಿಗೆ ಸ್ಪÀಂದಿಸಿ ಕಾರ್ಯನಿರ್ವಹಿಸುವ ಮನೋಭಾವವನ್ನು ಹೊಂದಿರುವುದು ಇಂದಿನ ಅಗತ್ಯತೆಯಾಗಿದೆ ಎಂದು ಬೆಂಗಳೂರಿನ ಹೊಸತು ಪತ್ರಿಕೆಯ ಸಂಪಾದಕರು ಹಾಗೂ ಸಾಹಿತಿಗಳಾದ ಡಾ.ಸಿದ್ದನಗೌಡ ಪಾಟೀಲ್ ಅಭಿಪ್ರಾಯಿಸಿದರು.

ನಗರದ ಪತ್ರಿಕಾ ಭವನ ಸಭಾಂಗಣದಲ್ಲಿ ಕೊಡಗು ಪತ್ರಿಕಾಭವನ ಟ್ರಸ್ಟ್ ವತಿಯಿಂದ ಆಯೋಜಿತ ‘ಕೊಡಗು ಪತ್ರಿಕಾ ಭವನದ ೨೧ನೇ ವಾರ್ಷಿಕೋತ್ಸವ’ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಕೆಲವು ಮಾಧ್ಯಮಗಳು ಕಾರ್ಪೋರೇಟ್ ಉದ್ಯಮಿಗಳ ವಶವಾಗುತ್ತಿದ್ದು, ಇದರಿಂದಾಗಿ ಸ್ಥಳೀಯ ಪತ್ರಿಕೆಗಳಿಗೆ ಆತಂಕದ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿ, ಇಂತಹ ದಿನಮಾನಗಳಲ್ಲಿ ಪತ್ರಕರ್ತರ ಕಾರ್ಯ ಅತ್ಯಂತ ಕ್ಲಿಷ್ಟಕರ. ಹೀಗಿದ್ದೂ ಪತ್ರಕರ್ತರು ಈ ನೆಲದ ಮಣ್ಣಿನ ಮಗನಾಗಿರುವುದನ್ನು ಮರೆಯದೆ,ಜನರ ಭಾವನೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸು ವಂತಾಗಲಿ ಎಂದು ಆಶಿಸಿದರು.

ಸ್ವಾತಂತ್ರö್ಯ ಪೂರ್ವದಲ್ಲಿ ಪತ್ರಿಕಾ ರಂಗ ಉದ್ಯಮ ಆಗಿರಲಿಲ್ಲ. ಪತ್ರಕರ್ತ ಜನ ಸಮೂಹಕ್ಕೆ ಉತ್ತರದಾಯಿಯಾಗಿ ಕಾರ್ಯನಿರ್ವಹಿಸುತ್ತಿದ್ದು,

೧೯೫೩ರ ಭಾರತೀಯ ಕಾಯಿದೆ ಪ್ರಕಾರ ಭಾರತೀಯ ಪತ್ರಿಕಾರಂಗ ಕಾರ್ಮಿಕ ವರ್ಗಕ್ಕೆ ಸೇರುತ್ತದೆ. ೬೦ರ ದಶಕದಿಂದ ೯೦ರ ದಶಕಗಳವರೆಗೆ ಪತ್ರಿಕೋದ್ಯಮ ಜನಾಂದೋಲನದ ಧ್ವನಿಯಾಗಿ ಕಾರ್ಯನಿರ್ವಹಿಸಿದೆ. ಆ ಕಾಲಘಟ್ಟದ ಪತ್ರಿಕೋದ್ಯಮ ಜನಪರ ನಿಲುವನ್ನು ಸಾಬೀತುಪಡಿಸಿದ

(ಮೊದಲ ಪುಟದಿಂದ) ಹಲವು ನಿದರ್ಶನಗಳಿವೆ ಎಂದರು. ಭವಿಷ್ಯದ ದಿನಗಳಲ್ಲಿ ಜಾಗತೀಕರಣ ಮೊದಲಾದ ವ್ಯವಸ್ಥೆಗಳಿಂದ ವಿದೇಶಿ ಸಂಸ್ಥೆಗಳು ಇಲ್ಲಿನ ಪತ್ರಿಕಾ ಕ್ಷೇತ್ರವನ್ನು ಪ್ರವೇಶಿಸುವುದನ್ನು ಅಲ್ಲಗಳೆಯಲಾಗದು. ಇಂತಹ ಸಂದರ್ಭದಲ್ಲು ನಮ್ಮತನವನ್ನು ನಾವು ಮರೆಯದೆ, ಜನಸಮೂಹಕ್ಕೆ ಬದ್ಧವಾಗಿ ಕಾರ್ಯನಿರ್ವಹಿಸುವ ಅಗತ್ಯತೆ ಇರುವುದಾಗಿ ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಹಾಯಕ ಸಂಪಾದಕ ಕೆ.ವಿ. ಪರಮೇಶ್ ಮಾತನಾಡಿ ಪ್ರಸ್ತುತ ಪತ್ರಿಕಾ ರಂಗವೂ ಒಂದು ಉದ್ಯಮವಾಗಿದ್ದು ಅದು ಅನಿವಾರ್ಯ. ಆದರೆ ಉದ್ಯಮದ ಹೆಸರಿನಲ್ಲಿ ಪತ್ರಿಕಾರಂಗವನ್ನು ಖರೀದಿಸುವ ಪ್ರಕ್ರಿಯೆ ನಡೆಯುತ್ತಿರುವುದು ಅಪಾಯಕಾರಿ. ನಗದು ಸರಬರಾಜು ಮೂಲಕ ಪತ್ರಕರ್ತರನ್ನು ಭ್ರಷ್ಟರನ್ನಾಗಿಸುವ ಕೆಲಸಗಳು ಕೂಡ ಆಡಳಿತಶಾಹಿ ವ್ಯವಸ್ಥೆಯಿಂದ ಆಗುತ್ತಿದ್ದು ಇದನ್ನು ಎದುರಿಸಲು ಪತ್ರಕರ್ತ ಸಂಘಟನೆಗಳು ಕಾರ್ಯಪ್ರವೃತ್ತರಾಗಬೇಕೆಂದು ತಿಳಿಸಿ, ಪೈಪೋಟಿಯ ವರದಿಗಾರಿಕೆಯ ಅಪಾಯದ ಬಗ್ಗೆಯೂ ವಿವರಿಸಿದರು.

ಮುಖ್ಯ ಅತಿಥಿಯಾಗಿದ್ದ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ ಮುರಳೀಧರ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಿಕಾ ಭವನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ ಕೇಶವ ಕಾಮತ್ ಮಾತನಾಡಿ, ಪತ್ರಕರ್ತ ಕುಟುಂಬ ಒಂದಾಗಿ ಸೇರಲು ನೂತನ ಸಭಾಭವನ ನಿರ್ಮಿಸುವ ಯೋಜನೆ ಇದ್ದು ಅದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ. ರಮೇಶ್ ಪ್ರ‍್ರಾಸ್ತಾವಿಕ ನುಡಿಗಳನ್ನಾಡಿದರು. ವಾರ್ಷಿಕೋತ್ಸವದ ಪ್ರಯುಕ್ತ ಪತ್ರಕರ್ತರಿಗೆ ಆಯೋಜಿಸಲಾಗಿದ್ದ ಒಳಾಂಗಣ ಕ್ರೀಡಾಕೂಟದ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಪತ್ರಕರ್ತ ಕೌಸರ್ ರಚಿಸಿದ ಪತ್ರಿಕಾಭವನ ಮ್ಯಾನೆಜಿಂಗ್ ಟ್ರಸ್ಟಿಯಾಗಿದ್ದ ದಿ. ಮನುಶೆಣೈ ಅವರ ಡಿಜಿಟಲ್ ಭಾವಚಿತ್ರವನ್ನು ಕೌಸರ್ ಹಾಗೂ ರಂಜಿತ್ ಕವಲಪಾರ ಪತ್ರಿಕಾಭವನ ಟ್ರಸ್ಟ್ಗೆ ಹಸ್ತಾಂತರಿಸಿದರು. ಮನುಶೆಣೈ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಕೊಡಗು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಉಜ್ವಲ್‌ರಂಜಿತ್ ಪ್ರಾರ್ಥಿಸಿ ಪತ್ರಿಕಾಭವನ ಟ್ರಸ್ಟ್ ಖಜಾಂಚಿ ತಿಮ್ಮಪ್ಪ ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ಎಸ್. ಜಿ. ಉಮೇಶ್ ಸ್ವಾಗತಿಸಿದರು. ಟ್ರಸ್ಟಿ ಎಚ್.ಟಿ. ಅನಿಲ್ ವಂದಿಸಿದರು.