(ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ನ. ೫: ಕೊಡವ ಹಾಕಿ ಅಕಾಡೆಮಿ ವತಿಯಿಂದ ಇದೇ ಮೊದಲ ಬಾರಿಗೆ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಟರ್ಫ್ ಮೈದಾನದಲ್ಲಿ, ದಿ. ಪಾಂಡAಡ ಕುಟ್ಟಪ್ಪ ಸ್ಮರಣಾರ್ಥ ನಡೆಯುತ್ತಿರುವ ಕೊಡವ ಕೌಟುಂಬಿಕ ರಿಂಕ್ ಹಾಕಿ ಪಂದ್ಯಾಟ ಅಂತಿಮ ಹೋರಾಟ ತಾ.೬ರಂದು (ಇಂದು) ನಡೆಯಲಿದ್ದು, ಚಾಂಪಿಯನ್ ಪಟ್ಟಕ್ಕಾಗಿ ಪರದಂಡ, ಚೇಂದAಡ, ಕುಪ್ಪಂಡ ಮತ್ತು ನೆಲ್ಲಮಕ್ಕಡ ತಂಡಗಳು ತೀವ್ರ ಸೆಣಸಾಟ ನಡೆಸಲಿವೆ.

ಪ್ರೇಕ್ಷಕರಿಗೆ ಹಾಕಿಯ ರಸದೌತಣ ನೀಡುವ ಮೂಲಕ ಕುತೂಹಲ ಕೆರಳಿಸಿದ್ದ ಮೊದಲನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪರದಂಡ ತಂಡ, ಮಂಡೆಪAಡ ತಂಡವನ್ನು ೯-೮ ಗೋಲುಗಳ ಅಂತರದಿAದ ಸೋಲಿಸುವ ಮೂಲಕ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿತು. ಎರಡೂ ತಂಡಗಳೂ ಪೂರ್ಣಾವಧಿ ಆಟದಲ್ಲಿ ೫-೫ ಗೋಲುಗಳ ಸಮಬಲ ಸಾಧಿಸಿದ್ದವು, ಅಂತಿಮವಾಗಿ ಟೈ ಬ್ರೇಕರ್‌ನಲ್ಲಿ ಪರದಂಡ ತಂಡ ಗೆಲುವಿನ ನಗೆ ಬೀರಿತು.

ಪರದಂಡ ಪ್ರಸಾದ್, ಅಯ್ಯಪ್ಪ, ಕೀರ್ತಿ ಮತ್ತು ಪ್ರಜ್ವಲ್ ತಲಾ ೨, ಚಶ್ವಿನ್ ೧ ಗೋಲು ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮಂಡೆಪAಡ ಗೌತಮ್ ೩, ಮೊಣ್ಣಯ್ಯ, ಸಜನ್ ತಲಾ ೨, ಕೃಪನ್ ೧ ಗೋಲು ಬಾರಿಸಿ ರೋಚಕ ಹೋರಾಟ ನೀಡಿದರು.

ಮತ್ತೊಂದು ಪಂದ್ಯದಲ್ಲಿ ಚೇಂದAಡ ತಂಡ ಚೆಪ್ಪುಡೀರ ತಂಡವನ್ನು ೩- ೧ ಗೋಲಿನಿಂದ ಸೋಲಿಸಿ, ಸೆಮಿ ಫೈನಲ್ ಪ್ರವೇಶ ಪಡೆಯಿತು. ಚೇಂದAಡ ಉತ್ತಪ್ಪ ೩ ಗಳಿಸಿ ಮಿಂಚಿದರು. ಚೆಪ್ಪುಡಿರ ಚಿಣ್ಣಪ್ಪ ೧ಗೋಲು ಗಳಿಸಿದರು.

ಚೇನಂಡ ತಂಡವನ್ನು ಕುಪ್ಪಂಡ ೬-೪ ಗೋಲುಗಳಿಂದ ಮಣಿಸಿ ಸೆಮಿಫೈನಲ್ ಗೆ ದಾಪುಗಾಲಿಟ್ಟಿತು.

ಕುಪ್ಪಂಡ ಸೋಮಯ್ಯ ೫ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರೇ, ನಾಚಪ್ಪ ೧ ಗೋಲು ಹೊಡೆದರು. ಚೇನಂಡ ಮಂದಣ್ಣ, ಸೋಮಯ್ಯ ತಲಾ ೨ ಗೋಲು ಗಳಿಸಿ ಸೋಲಿನ ಅಂತರ ತಗ್ಗಿಸಿದರು.

ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೆಲ್ಲಮಕ್ಕಡ ತಂಡ ಕಲಿಯಂಡ ತಂಡದ ವಿರುದ್ಧ ೮-೦ ಗೋಲುಗಳ ಭರ್ಜರಿ ಜಯಭೇರಿ ಬಾರಿಸಿ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿತು. ನೆಲ್ಲಮಕ್ಕಡ ಪೂವಣ್ಣ ೩, ಸೋಮಯ್ಯ ೨, ಸಚಿನ್, ಅಯ್ಯಪ್ಪ, ಚೆಂಗಪ್ಪ ತಲಾ ೧ ಗೋಲು ಸಿಡಿಸಿದರು.

ಕ್ವಾಟರ್ ಫೈನಲ್ ಪ್ರವೇಶಕ್ಕಾಗಿ ನಡೆದ ದಿನದ ಮೊದಲನೇ ಪಂದ್ಯದಲ್ಲಿ ಪರದಂಡ, ಮಾತಂಡ ವಿರುದ್ಧ ೬-೪ ಗೋಲುಗಳಿಂದ ಜಯಗಳಿಸಿತು. ಪರದಂಡ ಅಯ್ಯಪ್ಪ ೫ ಗೋಲುಗಳಿಸಿ ಮಿಂಚಿದರು. ಪ್ರಜ್ವಲ್ ೧, ಮಾತಂಡ ಗಣಪತಿ ೨, ಸುಬ್ಬಯ್ಯ, ಆರ್ಯನ್ ತಲಾ ೧ ಗೋಲು ಹೊಡೆದರು.

ಮಚ್ಚಂಡ ವಿರುದ್ಧ ಮಂಡೆಪAಡ ೫-೩ ಗೋಲುಗಳ ಜಯಸಾಧಿಸಿತು. ಮಂಡೆಪAಡ ಕಿರಣ್ ೩, ಸಜನ್ , ಗೌತಮ್ ತಲಾ ೧, ಮಚ್ಚಂಡ ಪ್ರಿನ್ಸ್ ೨, ಕರುಂಬಯ್ಯ ೧ ಗೋಲು ಬಾರಿಸಿದರು.

ಕುಲ್ಲೇಟಿರ ವಿರುದ್ಧ ಚೆಪ್ಪುಡಿರ ೪-೨ ಗೋಲುಗಳ ವಿಜಯಸಾಧಿಸಿತು. ಚೆಪ್ಪುಡಿರ ಸೋಮಣ್ಣ ೨, ಕಾರಿಯಪ್ಪ, ಚಿಣ್ಣಪ್ಪ ತಲಾ ೧, ಕುಲ್ಲೇಟಿರ ನಾಚಪ್ಪ, ಶುಭ ತಲಾ ೧ ಗೋಲು ಹೊಡೆದರು.

ಚೇಂದAಡ, ಪೆಮ್ಮಂಡವನ್ನು ೩-೧ ಗೋಲುಗಳಿಂದ ಸೋಲಿಸಿತು. ಬೋಪಣ್ಣ, ಉತ್ತಪ್ಪ, ಅಮೋಘ ತಲಾ ೧, ಪೆಮ್ಮಂಡ ಸುಹಾಸ್ ೧ ಗೋಲು ಹೊಡೆದರು.

ಚೇನಂಡ, ಮಾರ್ಚಂಡ ವಿರುದ್ಧ ೩-೨ ಗೋಲುಗಳ ಜಯಗಳಿಸಿತು. ಚೇನಂಡ ಸೋಮಯ್ಯ ೨, ಮಂದಣ್ಣ ೧, ಮಾರ್ಚಂಡ ಸುಬ್ರಮಣಿ ೧, ನಾಚಪ್ಪ ೧ ಗೋಲು ಹೊಡೆದರು.

ಸೋಮೆಯಂಡ ವಿರುದ್ಧ ಕಲಿಯಂಡ ೫-೪ ಗೋಲುಗಳ ರೋಚಕ ಜಯಪಡೆಯಿತು. ಕಲಿಯಂಡ ಭರತ್ ೩, ಕಿರಣ್ ೧, ಕಾರಿಯಪ್ಪ ೧, ಸೋಮೆಯಂಡ ಅಪ್ಪಚ್ಚು ೩, ಅಪ್ಪಯ್ಯ ೧ ಗೋಲು ಹೊಡೆದರು.

ನೆಲ್ಲಮಕ್ಕಡ, ಕಡೆಮಾಡ ವಿರುದ್ಧ ೬-೧ ಗೋಲುಗಳ ಜಯಗಳಿಸಿತು. ನೆಲ್ಲಮಕ್ಕಡ ಸಚಿನ್ ೨, ಪೂವಣ್ಣ, ಅಪ್ಪಣ್ಣ, ಸೋಮಯ್ಯ ತಲಾ ೧, ಕಡೆಮಾಡ ಚರ್ಮಣ ೧ ಗೋಲು ಗಳಿಸಿದರು.

ಕುಪ್ಪಂಡ, ಚೆಕ್ಕೆರ ವಿರುದ್ಧ ೮-೬ ಗೋಲುಗಳಿಂದ ಜಯಭೇರಿ ಬಾರಿಸಿತು. ಕುಪ್ಪಂಡ ಸೋಮಯ್ಯ ೬ ಗೋಲು ಗಳಿಸಿ ಸಂಚಲನ ಮೂಡಿಸಿದರು. ನಾಚಪ್ಪ, ಪ್ರಧಾನ್ ತಲಾ ೧, ಚೆಕ್ಕೆರ ಆದರ್ಶ್ ೩, ಆಕಾಶ್ ೨, ಸೋಮಯ್ಯ ೧ ಗೋಲು ಹೊಡೆದರು.