ಮಡಿಕೇರಿ, ನ. ೫: ಮಡಿಕೇರಿ ನಗರಸಭೆ ವ್ಯಾಪ್ತಿಯ ಕಾವೇರಿ ಬಡಾವಣೆ ಹಾಗೂ ರಾಣಿಪೇಟೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಉದ್ಯಾನವನಗಳನ್ನು ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಹಾಗೂ ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ ಅವರುಗಳು ಉದ್ಘಾಟನೆಗೊಳಿಸಿದರು. ಇದರೊಂದಿಗೆ ನಗರದ ಜಲಾಶ್ರಯ ಬಡಾವಣೆಯಲ್ಲಿನ ನೂತನ ಅಂಗನವಾಡಿ ಕೇಂದ್ರವನ್ನೂ ಸಮರ್ಪಣೆಗೊಳಿಸಲಾಯಿತು. ಉದ್ಯಾನವನಗಳು ತಲಾ ರೂ.೫ ಲಕ್ಷ ವೆಚ್ಚದಲ್ಲಿ ತಲೆಎತ್ತಿದರೆ, ಅಂಗನವಾಡಿ ಕೇಂದ್ರವು

(ಮೊದಲ ಪುಟದಿಂದ) ರೂ.೧೬.೫ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ನಗರದ ಕನ್ನಿಕಾ ಬಡಾವಣೆಯಲ್ಲೂ ಉದ್ಯಾನವನ ನಿರ್ಮಿಸಲಾಗಿದ್ದು ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ. ಉದ್ಘಾಟನೆ ಬಳಿಕ ಮಾತನಾಡಿದ ಶಾಸಕ ರಂಜನ್ ಅವರು, ಮಕ್ಕಳಿಗೆ, ಹಿರಿಯರಿಗೆ ವಾಯುವಿಹಾರಕ್ಕಾಗಿ ಉದ್ಯಾನವನ ನಿರ್ಮಾಣವಾಗಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತಾಗಬೇಕೆAದರು. ಈ ಸಂದರ್ಭ ನಗರಸಭೆ ಪೌರಾಯುಕ್ತ ವಿಜಯ, ನಗಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಸದಸ್ಯರಾದ ಮಹೇಶ್ ಜೈನಿ, ಅರುಣ್ ಶೆಟ್ಟಿ, ಅಪ್ಪಣ್ಣ, ಸತೀಶ್, ಉಮೇಶ್ ಸುಬ್ರಮಣಿ, ನಗರ ಬಿ.ಜೆ.ಪಿ ಅಧ್ಯಕ್ಷ ಮನು ಮಂಜುನಾಥ್ ಹಾಗೂ ಸ್ಥಳೀಯರು ಇದ್ದರು. ಉದ್ಯಾನವನದಲ್ಲಿನ ವ್ಯಾಯಾಮ ಪರಿಕರಗಳನ್ನು ರಂಜನ್, ಅನಿತಾ ಪೂವಯ್ಯ ಹಾಗೂ ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ ಅವರುಗಳು ಬಳಕೆ ಮಾಡಿ ಪರಿಶೀಲಿಸಿದರು.

ಮಳೆ ನಿಂತ ತಕ್ಷಣ ರಸೆ ದುರಸ್ತಿ - ರಂಜನ್ ಭರವಸೆ

ಜಿಲ್ಲೆಯ ಹಲವೆಡೆ ರಸ್ತೆ ದುಸ್ಥಿತಿಯಲ್ಲಿದ್ದು, ಇದರ ದುರಸ್ತಿಯನ್ನು ಮಳೆ ಸಂಪೂರ್ಣವಾಗಿ ನಿಂತ ತಕ್ಷಣ ಮಾಡುವುದಾಗಿ ಶಾಸಕ ರಂಜನ್ ಭರವಸೆ ಇತ್ತರು. ಜಿಲ್ಲಾ ಪಂಚಾಯಿತಿ ಅನುದಾನ ಒಟ್ಟು ರೂ.೪೦ ಕೋಟಿಯಲ್ಲಿ ಮಡಿಕೇರಿ ಕ್ಷೇತ್ರಕ್ಕೆ ಹಾಗೂ ವೀರಾಜಪೇಟೆ ಕ್ಷೇತ್ರಕ್ಕೆ ತಲಾ ರೂ.೨೦ ಕೋಟಿ ಹಣ ಬಿಡುಗಡೆಯಾಗಿದೆ. ಲೋಕೋಪಯೋಗಿ ಇಲಾಖೆಗೆ ಬಿಡುಗಡೆಯಾಗಿರುವ ರೂ.೧೦೦ ಕೋಟಿಯಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಹಾಗೂ ಮಡಿಕೇರಿ ಕ್ಷೇತ್ರಕ್ಕೆ ತಲಾ ರೂ.೫೦ ಕೋಟಿ ಹಣ ದೊರಕಿದೆ. ಮಳೆ ನಿಂತ ಬಳಿಕ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವುದಾಗಿ ರಂಜನ್ ಹೇಳಿದರು. ಇದರೊಂದಿಗೆ ನಗರೋತ್ಥಾನ ಯೋಜನೆಯಡಿಯಲ್ಲಿನ ರೂ.೪೦ ಕೋಟಿ ಹಣದಲ್ಲಿ ಒಟ್ಟು ರೂ.೧೬ ಕೋಟಿ ಮಡಿಕೇರಿ ನಗರದ ರಸ್ತೆ-ಚರಂಡಿ ದುರಸ್ತಿಗೆ ಬಳಕೆಯಾಗಲಿದೆ ಎಂದರು.