ಮಡಿಕೇರಿ, ನ. ೬: ವಿಶ್ವ ಹಿಂದೂ ಪರಿಷತ್ ವತಿಯಿಂದ ದೇಶದಾದ್ಯಂತ ಹಿತಚಿಂತಕ ಅಭಿಯಾನ -೨೦೨೨ ಅಂಗವಾಗಿ ಇಂದು ಜಿಲ್ಲಾ ವಿಶ್ವ ಹಿಂದೂ ಪರಿಷತ್‌ನಿಂದ ಮಡಿಕೇರಿ ಓಂಕಾರೇಶ್ವರ ದೇವಾಲಯದಲ್ಲಿ ಪೂಜೆಯ ಬಳಿಕ ಈ ಕಾರ್ಯಕ್ರಮ ನಡೆಯಿತು.
‘ಶಕ್ತಿ’ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು ಹಿತಚಿಂತಕ ಸದಸ್ಯತ್ವ ಪುಸ್ತಕವನ್ನು ವಿಶ್ವ ಹಿಂದೂ ಪರಿಷತ್ತಿಗೆ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿ.ಹಿಂ.ಪ. ಅಧ್ಯಕ್ಷ ಕೃಷ್ಣಮೂರ್ತಿ, ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ, ನಗರಾಧ್ಯಕ್ಷ ಶ್ರೀನಿವಾಸ್ ಮೂರ್ತಿ, ಕಾರ್ಯದರ್ಶಿ ಲೋಕೇಶ್, ಭಜರಂಗದಳ ನಗರ ಸಂಚಾಲಕ ಸುಧೀಂದ್ರ, ತಾಲೂಕು ಸಂಚಾಲಕ ವಿನೋದ್ ಕಾಂಗೇರಿ, ನಗರಸಭಾ ಸದಸ್ಯ ಕವನ್ ಕಾವೇರಪ್ಪ., ಮೊಗೇರ ಸಮಾಜದ ಅಧ್ಯಕ್ಷ ಪಿ.ಎಂ. ರವಿ ಸೇರಿದಂತೆ ಇನ್ನಿತರರು ಹಾಜರಿದ್ದರು.