ಮಡಿಕೇರಿ, ನ. ೬: ಲಯನ್ಸ್ ಕ್ಲಬ್ ಮೂರ್ನಾಡು ವತಿಯಿಂದ ವಿಶ್ವ ಶಾಂತಿ ಬಿಂಬಿಸುವ ‘ಲಯನ್ಸ್ ಪೀಸ್ ಪೋಸ್ಟರ್ ಕಂಟೆಸ್ಟ್’ ಅನ್ನು ಮೂರ್ನಾಡು ಲಯನ್ಸ್ ಚಾರಿಟೇಬಲ್ ಟ್ರಸ್ಟ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಸ್ಥಳೀಯ ಮಾರುತಿ ವಿದ್ಯಾಸಂಸ್ಥೆ, ಜ್ಞಾನ ಜ್ಯೋತಿ ವಿದ್ಯಾಸಂಸ್ಥೆ, ಮೂರ್ನಾಡು ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಲಯನ್ಸ್ಕ್ಲಬ್ ಅಧ್ಯಕ್ಷ ಪಳಂಗAಡ ಪ್ರಕಾಶ ಕಾವೇರಿಯಪ್ಪ, ಕಾರ್ಯದರ್ಶಿ ಬಡುವಂಡ ಬಿಂದ್ಯಾ ಗಣಪತಿ, ಖಜಾಂಚಿ ಮುಲ್ಲೆರ ಪಾಪ ಕಾವೇರಪ್ಪ, ಲಯನ್ಸ್ ಸದಸ್ಯರುಗಳಾದ ಪೆಮ್ಮುಡಿಯಂಡ ವೇಣು ಅಪ್ಪಣ್ಣ, ಬಡುವಂಡ ಅರುಣ್ ಅಪ್ಪಚ್ಚು, ಇಂದಿರ ಅಪ್ಪಣ್ಣ ಭಾಗವಹಿಸಿದ್ದರು.