ಮಡಿಕೇರಿ, ನ. ೬: ಮೂರ್ನಾಡಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಂಬೈನ ಫೋರಂ ಆಫ್ ಫ್ರೀ ಎಂಟರ್‌ಪ್ರೆöÊಸ್ ಆ್ಯಂಡ್ ಎಂಆರ್‌ಪೈ ಫೌಂಡೇಷನ್ ರವರ ವತಿಯಿಂದ ೫೬ನೇ ಎ.ಡಿ. ಶ್ರಾಫ್ ಸ್ಮರಣಾರ್ಥ ಭಾಷಣ ಸ್ಪರ್ಧೆ ನಡೆಯಿತು. ಐಕ್ಯೂಎಸಿ ವತಿಯಿಂದ ಈ ಸ್ಪರ್ಧೆಯನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಮೂರ್ನಾಡಿನ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಉಪನ್ಯಾಸಕಿ ರೋಹಿಣಿ ಹಾಗೂ ಅರ್ಥಶಾಸ್ತç ಉಪನ್ಯಾಸಕಿ ಕಾವೇರಮ್ಮ ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೂರ್ನಾಡು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪೆಮ್ಮುಡಿಯಂಡ ವೇಣು ಅಪ್ಪಣ್ಣ, ಕಾಲೇಜಿನ ಐಕ್ಯೂಎಸಿ ಸಂಯೋಜಕಿ ವಿಲ್ಮ, ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.