ಮಡಿಕೇರಿ, ನ. ೫: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಸುಮಾರು ರೂ. ೨.೫೦ ಲಕ್ಷ ವೆಚ್ಚದ ಒಲಂಪಿಕ್ ಮಾದರಿಯ ಬಿಲ್ಲುಗಾರಿಕೆ ಕಿಟ್ನ್ನು ತಿತಿಮತಿ ಗ್ರಾಮದ ಪಿ.ಎಸ್. ರಾಜೇಂದ್ರ ಅವರಿಗೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ವಿತರಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕÀ ಜಿ.ಎಸ್.ಗುರುಸ್ವಾಮಿ ಈ ಸಂದರ್ಭದಲ್ಲಿ ಇದ್ದರು.
ರಾಜೇಂದ್ರ ಅವರು ೨೦೧೫ ರಲ್ಲಿ ವನವಾಸಿ ಕಲ್ಯಾಣ ಬಿಲ್ಲುಗಾರಿಕೆ ಕ್ರೀಡಾಕೂಟದಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದರು. ಮಧ್ಯಪ್ರದೇಶದ ಬೋಪಾಲ್ನಲ್ಲಿ ೨೦೧೭ ರಲ್ಲಿ ನಡೆದ ವನವಾಸಿ ಕಲ್ಯಾಣ ಬಿಲ್ಲುಗಾರಿಕೆ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ಹಾಗೆಯೇ ೨೦೧೯ ರಲ್ಲಿ ವನವಾಸಿ ಕಲ್ಯಾಣ ಬಿಲ್ಲುಗಾರಿಕೆ ಕ್ರೀಡಾಕೂಟದಲ್ಲಿ ಸ್ಕೋರರ್ ಆಗಿ ಕಾರ್ಯನಿರ್ವಹಿಸಿದ್ದಾರೆ.