ಮಡಿಕೇರಿ, ನ. ೬: ಕೊಡಗು ರಕ್ಷಣಾ ವೇದಿಕೆಯ ಮೊಟ್ಟ ಮೊದಲ ಗ್ರಾಮ ಘಟಕದ ಕಚೇರಿ ಕೆದಕಲ್ ಹೊರೂರು ಗ್ರಾಮದಲ್ಲಿ ಉದ್ಘಾಟನೆಗೊಂಡಿತು.

ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಕೊರವೇ ಅಧ್ಯಕ್ಷ ಅಚ್ಚಾಂಡಿರ ಪವನ್ ಪೆಮ್ಮಯ್ಯ, ಗ್ರಾಮ ಮಟ್ಟದಿಂದಲೇ ಸಂಘಟನೆ ಬಲಗೊಳ್ಳುತ್ತಿದ್ದು, ಸಮಸ್ಯೆಗಳ ಪರಿಹಾರಕ್ಕೆ ಹೋರಾಟಗಳನ್ನು ರೂಪಿಸಲಾಗುವುದು ಎಂದರು.

ಜಿಲ್ಲೆಯ ಗ್ರಾಮೀಣ ಪ್ರದೇಶಗಳು ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಗ್ರಾಮಸ್ಥರು ಸಂಘಟಿತರಾಗಬೇಕು. ಜಿಲ್ಲೆಗೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂದು ಕೊರವೇ ಅಭಿಯಾನ ಆರಂಭಿಸಿದ್ದು, ಎಲ್ಲರೂ ಕೈಜೋಡಿಸುವಂತೆ ಕರೆ ನೀಡಿದರು.

ಕೆದಕಲ್ ಹೊರೂರು ಅಧ್ಯಕ್ಷ ಸಮೀರ್, ಉಪಾಧ್ಯಕ್ಷ ಯಂಕನ ಗೋಪಿನಾಥ್ ಗೌರವಾಧ್ಯಕ್ಷ ಕೊರವಂಡ ಅಂಜನ್ ಕುಮಾರ್, ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.