ಕುಶಾಲನಗರ, ನ. ೫: ಮನೆಗಳಲ್ಲಿ ಉತ್ಪತ್ತಿಯಾಗುವ ಹಾಗೂ ಸಂಗ್ರಹವಾಗುವ ತ್ಯಾಜ್ಯಗಳನ್ನು ಹಸಿ ಕಸ, ಒಣ ಕಸ ಎಂದು ಬೇರ್ಪಡಿಸಿ ಅದನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ ಮರುಬಳಕೆ ಮಾಡುವ ಯೋಜನೆಯನ್ನು ಪಟ್ಟಣ ಪಂಚಾಯಿತಿ ಹಾಗೂ ಅಳಿಲು ಸೇವಾ ಟ್ರಸ್ಟ್ ಮಾಡುತಿದ್ದು, ೭ನೇ ವಾರ್ಡ್ನಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಸುರೇಶ್, ಆರೋಗ್ಯ ಅಧಿಕಾರಿ ಉದಯಕುಮಾರ್ ಹಾಗೂ ಪೌರಕಾರ್ಮಿಕರು, ಪಟ್ಟಣ ಪಂಚಾಯಿತಿ ಸದಸ್ಯರು, ಅಳಿಲು ಸೇವಾ ಟ್ರಸ್ಟ್ನ ನಿರ್ದೇಶಕ ಕೆ.ಜಿ. ಮನು ನೇತೃತ್ವದಲ್ಲಿ ವಿವಿಧ ಬಡಾವಣೆಗಳಿಗೆ ತೆರಳಿ ಪರಿಶೀಲಿಸಿದರು. ಪಟ್ಟಣದ ಮಾರುತಿ ಬಡಾವಣೆ, ವೆಂಕಟೇಶ್ವರ ಬಡಾವಣೆ, ಓಂಕಾರ್ ಬಡಾವಣೆಯ ಮನೆ ಮನೆಗೆ ತೆರಳಿ ಹಸಿ ಕಸ, ಒಣ ಕಸವನ್ನು ಬೇರ್ಪಡಿಸಿ ಪಂಚಾಯಿತಿ ಯಿಂದ ಆಗಮಿಸುವ ವಾಹನಕ್ಕೆ ನೀಡು ವಂತೆ ತಿಳಿಸಿ, ಕಸದಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಕರಪತ್ರ ಹಂಚಿಕೆ ಮಾಡಿದರು.