ವೀರಾಜಪೇಟೆ, ನ. ೫: ಭಾರತ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯದ ಅಡಿಯಲ್ಲಿ ಬರುವ ಮಹಾತ್ಮಗಾಂಧಿ ರಾಷ್ಟಿçÃಯ ಗ್ರಾಮೀಣ ಶಿಕ್ಷಣ ಆಯೋಗದಿಂದ ಜಿಲ್ಲೆಯ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಆಯೋಜಿಸಿರುವ ಉದ್ಯಮಶೀಲತೆಗೆ ಸಂಬಧಿಸಿದ ವಿವಿಧ ಸ್ಪರ್ಧೆಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಉದ್ಯಮ ಶೀಲತೆಗಾಗಿ ಸ್ವಸಹಾಯ ಸಮೂಹ ರಚನೆಗೆ ಉತ್ತೇಜಿತ ಪೋಸ್ಟರ್‌ನ್ನು ಜಿಲ್ಲಾಧಿಕಾರಿ ಬಿ.ಸಿ. ಸತೀಶ ಬಿಡುಗಡೆ ಗೊಳಿಸಿದರು ಎಂದು ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ಸೂಚನೆಯಂತೆ ಪ್ರತಿ ಜಿಲ್ಲೆಯಲ್ಲಿ ಅಭಿವೃದ್ಧಿಯ ಉದ್ಯಮ ಶೀಲತೆ ಘಟಕವನ್ನು ಪ್ರಾರಂಭಿಸುವAತೆ ಕೇಂದ್ರ ಸರ್ಕಾರ ಸೂಚಿಸಿದೆ. ನಮ್ಮ ಜಿಲ್ಲೆಯಲ್ಲಿ ವೀರಾಜಪೇಟೆ ಸಂತ ಅನ್ನಮ್ಮ ಪದವಿ ಕಾಲೇಜನ್ನು ಆಯ್ಕೆ ಮಾಡಿಕೊಂಡಿದೆ. ಸ್ಥಳೀಯ ಆಡಳಿತ ಮತ್ತು ಯಶಸ್ವಿ ಉದ್ದಿಮೆಗಳ ಸಹಕಾರ ವನ್ನು ಪಡೆದು ಉತ್ಪಾದನಾ ಕೌಶಲ್ಯದ ಪರಿಚಯವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಬೇಕು. ಈ ಮೂಲಕ ಭಾರತವನ್ನು ಬಲಾಡ್ಯ ಆರ್ಥಿಕತೆ ಕಡೆಗೆ ಕೊಂಡೊಯ್ಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಎನ್‌ಎಸ್‌ಎಸ್ ಕಾರ್ಯ ಕ್ರಮಾಧಿಕಾರಿ ಹಾಗೂ ಕೊಡಗು ಜಿಲ್ಲೆಯ ಸಮರ್ಥನಿಯತೆ ಮಾರ್ಗದರ್ಶಕ ಪ್ರೊ. ಅರ್ಜುನ್ ಮಾತನಾಡಿ, ಯುನೆಸ್ಕೋದ ಒಂದು ಭಾಗವಾಗಿರುವ ಮಹಾತ್ಮಗಾಂಧಿರಾಷ್ಟಿçÃಯ ಗ್ರಾಮೀಣ ಯೋಜನೆ ಶಿಕ್ಷಣ ಆಯೋಗದಿಂದ ಭಾರತದಲ್ಲಿ ಈಗಾಗಲೇ ಗ್ರಾಮೀಣ ಮಟ್ಟದ ಶಿಕ್ಷಣ, ಉನ್ನತ ಶಿಕ್ಷಣದಲ್ಲಿ ಕಲಿಕಾ ವಾತಾವರಣದ ಸಮರ್ಥ ನಿಯತೆ ಮತ್ತು ಉದ್ಯಮಶೀಲತೆಗೆ ಸಂಬAಧ ಪಟ್ಟಂತೆ ಅನೇಕ ಯೋಜನೆ ಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಸ್ಥಳೀಯ ಆಡಳಿತ ಹಾಗೂ ಶಿಕ್ಷಣ ಸಂಸ್ಥೆಗಳು ಇದರ ಪ್ರಯೋಜನ ಪಡೆದು ಕೊಳ್ಳಬಹುದು ಎಂದು ಹೇಳಿದರು.

ಗೋಷ್ಠಿಯಲ್ಲಿ ಪ್ರೊ. ಪ್ರತಿಮಾ ರೈ ಉಪಸ್ಥಿತರಿದ್ದರು.