ಮಡಿಕೇರಿ, ನ. ೫: ಕೊಡವ ಹಾಕಿ ಅಕಾಡೆಮಿ ವತಿಯಿಂದ ಕೊಡವ ಹಾಕಿ ಹಬ್ಬದ ಜನಕ ಪಾಂಡAಡ ಕುಟ್ಟಪ್ಪ (ಕುಟ್ಟಣಿ) ಅವರ ಸ್ಮರಣಾರ್ಥ ಕೊಡವ ಕುಟುಂಬ ತಂಡಗಳ ನಡುವೆ ನಡೆಯುತ್ತಿರುವ ೫-ಂ ಸೈಡ್ ಹಾಕಿ ನಮ್ಮೆಯ ಸಮಾರೋಪ ಸಮಾರಂಭ ತಾ. ೬ (ಇಂದು) ರಂದು ನಡೆಯಲಿದೆ.
ಕಳೆದ ೧೧ ದಿನಗಳಿಂದ ರೋಚಕತೆಯಿಂದ ನಡೆಯುತ್ತಿದ್ದ ಪಂದ್ಯಾವಳಿಯಲ್ಲಿ ಒಟ್ಟು ೧೧೪ ಕುಟುಂಬ ತಂಡಗಳು ಸೆಣೆಸಾಡಿದವು. ಪರದಂಡ, ಚೇಂದAಡ, ಕುಪ್ಪಂಡ ಹಾಗೂ ನೆಲ್ಲಮಕ್ಕಡ ತಂಡಗಳು ಇಂದು ಟ್ರೋಫಿಗಾಗಿ ಹಣಾಹಣಿ ನಡೆಸಲಿವೆ. ಸೆಮಿ ಫೈನಲ್ ಪಂದ್ಯಾಟದಲ್ಲಿ ಗೆಲುವು ಸಾಧಿಸುವ ೨ ತಂಡಗಳು ಫೈನಲ್ ಪ್ರವೇಶಿಸಲಿವೆ.
ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಮಧ್ಯಾಹ್ನ ೨.೩೦ ಗಂಟೆಗೆ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಕೆ.ಬೋಪಣ್ಣ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಗೌರವ ಅತಿಥಿಯಾಗಿ ಪಾಂಡAಡ ಕುಟ್ಟಪ್ಪ ಅವರ ಪತ್ನಿ ಪಾಂಡAಡ ಲೀಲಾ ಕುಟ್ಟಪ್ಪ ಪಾಲ್ಗೊಳ್ಳಲಿದ್ದು, ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಮಂಡೇಪAಡ ಎಂ.ಪಿ. ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಭಾಗವಹಿಸಲಿದ್ದಾರೆ.
(ಮೊದಲ ಪುಟದಿಂದ) ಅತಿಥಿಗಳಾಗಿ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ಕರ್ನಾಟಕ ಹಾಕಿ ಕಾರ್ಯದರ್ಶಿ ಒಲಂಪಿಯನ್ ಡಾ.ಅಂಜಪರವAಡ ಬಿ.ಸುಬ್ಬಯ್ಯ, ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಅಂತರರಾಷ್ಟಿçÃಯ ಹಾಕಿ ತೀರ್ಪುಗಾರ ಅಚ್ಚಕಾಳೆರ ಬಿ.ಪಳಂಗಪ್ಪ, ಕಾಫಿ ಬೆಳೆಗಾರ ಬಯವಂಡ ಮಹಾಬಲ, ದಾನಿ ಬಿದ್ದಾಟಂಡ ಸುಮನ್ ಪ್ರದೀಪ್, ಹಾಕಿ ಕೂರ್ಗ್ ಉಪಾಧ್ಯಕ್ಷ ಬಲ್ಯಾಟಂಡ ಪಾರ್ಥ ಚಂಗಪ್ಪ, ಕೊಡಗು ಜಿಲ್ಲಾ ಹಾಕಿ ಸಂಸ್ಥೆ ಮಾಜಿ ಉಪಾಧ್ಯಕ್ಷ ಪುಚ್ಚಿಮಾಡ ಹರೀಶ್ ದೇವಯ್ಯ ಹಾಗೂ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದಲ್ಲಿ ಒಲಂಪಿಯನ್ ಪದ್ಮಶ್ರೀ ಪುರಸ್ಕೃತ ಡಾ. ಮೊಳ್ಳೆರ ಪಿ. ಗಣೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದೆಂದು ಕೊಡವ ಹಾಕಿ ಅಕಾಡೆಮಿ ತಿಳಿಸಿದೆ.