ಗೋಣಿಕೊಪ್ಪಲು, ನ. ೪: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ದಿ.ಪಾಂಡAಡ ಕುಟ್ಟಪ್ಪ ಸ್ಮರಣಾರ್ಥ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ೯ ನೇ ದಿನದಾಟದಲ್ಲಿ ಮಾರ್ಚಂಡ, ಸೋಮೆಯಂಡ, ಕಡೆಮಾಡ ಮತ್ತು ನೆಲ್ಲಮಕ್ಕಡ ತಂಡಗಳು ಪ್ರಿ ಕ್ವಾರ್ಟರ್ ಗೆ ಪ್ರವೇಶ ಪಡೆದುಕೊಂಡವು.

ಮಾರ್ಚAಡ, ಮೇಕೇರಿರ ವಿರುದ್ಧ ೪-೨ ಗೋಲುಗಳ ಜಯಭೇರಿ ಬಾರಿಸಿ ಫ್ರಿ ಕ್ವಾರ್ಟರ್ ಗೆ ತೇರ್ಗಡೆಯಾಯಿತು. ಮಾರ್ಚಂಡ ನಾಚಪ್ಪ ೨, ಸುಬ್ರಮಣಿ, ಪಳಂಗಪ್ಪ ತಲಾ ೧, ಮೇಕೇರಿರ ರೋಣಕ್, ನೆಹಾಲ್ ತಲಾ ೧ ಗೋಲು ಹೊಡೆದರು.

ಮತ್ತೊಂದು ಪಂದ್ಯದಲ್ಲಿ ಕೋಟೆರ ತಂಡವನ್ನು, ಸೋಮೆಯಂಡ ತಂಡ ೬-೩ ಗೋಲುಗಳಿಂದ ಮಣಿಸಿ ಫ್ರಿ ಕ್ವಾರ್ಟರ್ ಗೆ ಪ್ರವೇಶ ಪಡೆಯಿತು.

ಸೋಮೆಯಂಡ ಅಪ್ಪಚ್ಚು ೪, ಅಪ್ಪಯ್ಯ ೨, ಕೋಟೆರ ಕೌಶಿಕ್ ೨, ಭರತ್ ೧ ಗೋಲು ಹೊಡೆದರು.

ಕಡೆಮಾಡ, ಇಟ್ಟೀರ ವಿರುದ್ಧ |

೫-೪ ಗೋಲಿನಿಂದ ರೋಚಕ ಜಯಭೇರಿ ಬಾರಿಸಿ ಪ್ರಿ ಕ್ವಾರ್ಟರ್‌ಗೆ ದಾಪುಗಾಲಿಟ್ಟಿತು. ಕಡೆಮಾಡ ಚರ್ಮಣ ೪ ಗೋಲು ಗಳಿಸಿ ಮಿಂಚಿದರು. ಕಾವೇರಪ್ಪ ೧ ಗೋಲು ಹೊಡೆದರು. ಇಟ್ಟೀರ ಅಚ್ಚಯ್ಯ ೨, ಕುಟ್ಟಪ್ಪ, ಕಿರಣ್ ತಲಾ ೧ ಗೋಲು ಹೊಡೆದು ಸೋಲಿನ ಅಂತರ ತಗ್ಗಿಸಿದರು. ಪೊರ್ಕೊಂಡ ವಿರುದ್ಧ ನೆಲ್ಲಮಕ್ಕಡ ೬-೧ ಗೋಲುಗಳ ಭರ್ಜರಿ ಜಯಗಳಿಸಿ ಪ್ರಿ ಕ್ವಾರ್ಟರ್‌ಗೆ ಪ್ರವೇಶ ಪಡೆಯಿತು. ನೆಲ್ಲಮಕ್ಕಡ ಸೋಮಯ್ಯ ೩, ಪೂವಣ್ಣ, ಮೊಣ್ಣಪ್ಪ, ಸಚಿನ್ ತಲಾ ೧ ಗೋಲು ಬಾರಿಸಿದರು. ಪೊರ್ಕೊಂಡ ಅನಿಲ್ ತಮ್ಮ ತಂಡದ ಪರ ಏಕೈಕ ಗೋಲು ಹೊಡೆದರು. ದಿನದ ಮೊದಲ ಪಂದ್ಯದಲ್ಲಿ ದೇಯಂಡ ವಿರುದ್ಧ ಮೇಕೆರಿರ ೧೧-೫ ಗೋಲುಗಳ ಜಯಗಳಿಸಿತು. ಮೇಕೆರಿರ ನೆಹಾಲ್ ಮಿಂಚಿನ ಆಟವಾಡುವ ಮೂಲಕ ೯ ಗೋಲು ಗಳಿಸಿ ಸಂಚಲನ ಮೂಡಿಸಿದರು. ನವೀನ್, ರೋಣಕ್ ತಲಾ ೧ ಗೋಲು ಗಳಿಸಿದರು. ದೇಯಂಡ ಸಂಜು ೪, ವಶಿಕ್ ೧ ಗೋಲು ಹೊಡೆದರು. ಮಾರ್ಚಂಡ, ಶಾಂತೆಯAಡ ತಂಡವನ್ನು ೧೨-೪ ಗೋಲಿನಿಂದ ಮಣಿಸಿತು. ಮಾರ್ಚಂಡ ನಾಚಪ್ಪ ೫, ಸುಬ್ರಮಣಿ ೪, ಪಳಂಗಪ್ಪ ೩ ಗೋಲು ಬಾರಿಸಿದರು. ಶಾಂತೆಯAಡ ವಿಕಾಸ್, ತನಿಶ್, ಉತ್ತಪ್ಪ, ತಿಮ್ಮಯ್ಯ ತಲಾ ೧ ಗೋಲು ಹೊಡೆದರು. ಅಪ್ಪಂಡೇರAಡ ವಿರುದ್ಧ ಕೋಟೇರ ೧೧-೬ ಗೋಲಿನಿಂದ ಜಯ ಸಾಧಿಸಿತು. ಕೋಟೆರ ಕೌಶಿಕ್ ೬, ದಿಲೀಪ್ ೩, ಭರತ್, ನಾಣಯ್ಯ ತಲಾ ೧, ಅಪ್ಪಂಡೇರAಡ ಬೋಪಣ್ಣ, ಪೂವಯ್ಯ ತಲಾ ೩ ಗೋಲು ಬಾರಿಸಿದರು. ಮಚ್ಚಾರಂಡ ತಂಡವನ್ನು ಸೋಮೆಯಂಡ ತಂಡ ೧೦-೩ ಗೋಲಿನಿಂದ ಸೋಲಿಸಿತು.

ಸೋಮೆಯಂಡ ಅಪ್ಪಚ್ಚು ೬, ವಚನ್ ೩, ಪ್ರಯಾಗ್ ೧, ಮಚ್ಚಾರಂಡ ಗಗನ್ ೩ ಗೋಲು ಬಾರಿಸಿದರು.

ಪೊನ್ನೋಲತಂಡ ವಿರುದ್ಧ ಇಟ್ಟೀರ ೯-೨ ಗೋಲುಗಳ ಜಯ ದಾಖಲಿಸಿತು. ಇಟ್ಟಿರ ಅಚ್ಚಯ್ಯ ೫, ಆಚ್ಚಪ್ಪ ೩, ಅಶ್ವತ್ ೧, ಪೊನ್ನೋಲತಂಡ ನಾಣಯ್ಯ, ಅಶ್ವತ್ ತಲಾ ೧ ಗೋಲು ಹೊಡೆದರು. ಪೊರ್ಕೊಂಡ, ಪಾಂಡAಡ ವಿರುದ್ಧ ೪-೩ ಗೋಲುಗಳ ರೋಚಕ ಜಯ ಪಡೆಯಿತು. ಪೊರ್ಕೊಂಡ ಅನಿಲ್ ೩, ಲವ ೧, ಪಾಂಡAಡ ಕಾರ್ಲ್ ೨, ಅಯ್ಯಪ್ಪ ೧ ಗೋಲು ಹೊಡೆದರು.

ಮುಕ್ಕಾಟಿರ (ಪುಲಿಕೋಟ್ ) ವಿರುದ್ಧ ಕಡೆಮಾಡ ೬-೪ ಗೋಲುಗಳ ಜಯಭೇರಿ ಬಾರಿಸಿತು. ಕಡೆಮಾಡ ಚರ್ಮಣ ೪, ಕಾವೇರಪ್ಪ ೩, ಕುಶಾಲಪ್ಪ ೧, ಮುಕ್ಕಾಟಿರ ಮುತ್ತಪ್ಪ ೩, ಕಾಳಪ್ಪ ೧ ಗೋಲು ಗಳಿಸಿದರು.

ಪುಚ್ಚಿಮಡ ವನ್ನು, ನೆಲ್ಲಮಕ್ಕಡ ೮-೩ ಗೋಲುಗಳಿಂದ ಸೋಲಿಸಿತು. ನೆಲ್ಲಮಕ್ಕಡ ಪೂವಣ್ಣ, ಸೋಮಯ್ಯ ತಲಾ ೨, ಸಚಿನ್, ಅಯ್ಯಪ್ಪ, ಮೊಣ್ಣಪ್ಪ, ಅಪ್ಪಣ್ಣ ತಲಾ ೧, ಪುಚ್ಚಿಮಡ ಅಯ್ಯಪ್ಪ, ಭವನ್, ಯಶ್ವಿನ್ ತಲಾ ೧ ಗೋಲು ಹೊಡೆದರು. - ಹೆಚ್.ಕೆ.ಜಗದೀಶ್