ಮಡಿಕೇರಿ, ನ. ೪: ವಾಂಡರ್ಸ್ ಕ್ರಿಕೆಟ್ ಕ್ಲಬ್ ವತಿಯಿಂದ ವರ್ಷಂಪ್ರತಿ ನಡೆಸಿಕೊಂಡು ಬರಲಾಗುತ್ತಿರುವ ಡಾ. ಅಖಿಲ್ ಕುಟ್ಟಪ್ಪ ಹಾಗೂ ಅಶ್ವತ್ಥ್ ಅಯ್ಯಪ್ಪ ಸ್ಮಾರಕ ೯ನೇ ವರ್ಷದ ಜಿಲ್ಲಾಮಟ್ಟದ ಅಂತರ ಪ್ರೌಢಶಾಲಾ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ತಾ. ೭ ರಿಂದ ೧೩ ರವರೆಗೆ ನಡೆಯಲಿದೆ.
ಮಡಿಕೇರಿಯ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯಲಿದ್ದು, ಜಿಲ್ಲೆಯ ವಿವಿಧ ಶಾಲೆಗಳಿಂದ ಒಟ್ಟು ೧೨ ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಳ್ಳಲಿರುವದಾಗಿ ವಾಂಡರ್ಸ್ನ ಕಾರ್ಯದರ್ಶಿ ರಘು ಮಾದಪ್ಪ ತಿಳಿಸಿದ್ದಾರೆ.