ಗುಡ್ಡೆಹೊಸೂರು, ನ. ೫: ಆನೆಗಳ ದಾಳಿಗೆ ಕಟಾವು ಹಂತದಲ್ಲಿದ್ದ ಸಿಹಿಗೆಣಸು ಬೆಳೆ ನಾಶವಾಗಿದೆ. ಸಮೀಪದ ಅತ್ತೂರು ಗ್ರಾಮದ ನಿವಾಸಿ ಎನ್.ಎಂ. ಲೋಕೇಶ್ ಕುಮಾರ್ ಅವರಿಗೆ ಸೇರಿದ ೨.೩೦ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಸಿಹಿಗೆಣಸು ಹೊಲಕ್ಕೆ ಕಳೆದ ರಾತ್ರಿ ಎರಡು ಮರಿಯೊಂದಿಗೆ ೮ ಆನೆಗಳ ಗುಂಪು ನುಗ್ಗಿ ಬೆಳೆ ನಷ್ಟಪಡಿಸಿದೆ. ಸ್ಥಳಕ್ಕೆ ಅರಣ್ಯ ಇಲಾಖಾಧಿಕಾರಿಗಳು ಭೇಟಿ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಆನೆಗಳ ಹಾವಳಿ ಅಧಿಕವಾಗಿದ್ದು, ಕಾಫಿ, ಭತ್ತ, ಬಾಳೆ, ಅಡಿಕೆ, ಶುಂಠಿ ಮುಂತಾದ ಬೆಳೆಗಳು ಆನೆ ದಾಳಿಯಿಂದ ಸರ್ವ ನಾಶವಾಗುತ್ತಿವೆ ಎಂದು ಈ ಭಾಗದ ರೈತರು ದೂರಿಕೊಂಡಿದ್ದಾರೆ.