ಪೊನ್ನಂಪೇಟೆ, ನ. ೫: ವೀರಾಜಪೇಟೆ ತಾಲೂಕಿನ ಹಾಲುಗುಂದ ಗ್ರಾಮದಲ್ಲಿ ಸುಮಾರು ೪೦೦ ವರ್ಷಗಳಷ್ಟು ಪುರಾತನ ದೇವಾಲಯದ ಜೀರ್ಣೋದ್ಧಾರ ಮತ್ತು ಪುನರ್ ಪ್ರತಿಷ್ಠಾಪನೆಯನ್ನು ಮಾಡಲಾಯಿತು. ಸುಮಾರು ವರ್ಷಗಳಿಂದ ಶಿಥಿಲಾªಸ್ಥೆಯಲ್ಲಿದ್ದ ಪುರಾತನ ದೇವಾಲಯವನ್ನು ಗ್ರಾಮಸ್ಥರ ನೆರವಿನಿಂದ ಜೀರ್ಣೋದ್ಧಾರ ಮಾಡಲಾಗಿದ್ದು, ದೇವಿ ಶ್ರೀ ವನಭದ್ರಕಾಳಿ ಮತ್ತು ಶ್ರೀ ವನಸಾಸ್ತಾವು ಅಯ್ಯಪ್ಪ ದೇವರ ಪುನರ್ ಪ್ರತಿಷ್ಠಾಪನೆ ಕಾರ್ಯವನ್ನು ವಿವಿಧ ಪೂಜಾ ವಿಧಿ, ವಿಧಾನಗಳ ಮೂಲಕ ಮಾಡಲಾಯಿತು. ಕೇರಳದ ತಂತ್ರಿಗಳು ಪ್ರತಿಷ್ಠಾಪನ ಕಾರ್ಯ ನೆರವೇರಿಸಿದರು.
ಗ್ರಾಮದ ಹಿರಿಯರು ಹಾಗೂ ಊರು ತಕ್ಕರಾದ ಮೇಕೇರಿರ ನಾಣಯ್ಯ, ದೇವ ತಕ್ಕರಾದ ತೇಲಪಂಡ ಶಂಕು ಕುಟ್ಟಪ್ಪ, ಮೇಕೇರಿರ ವಿಜಯ ಪೂಣಚ್ಚ, ಪಂದಿಕAಡ ಸೋಮಣ್ಣ, ಮೇಕೇರಿರ ಗಣಪತಿ, ಕೇತಿಯಂಡ ಮುತ್ತಪ್ಪ, ಮಚ್ಚೇಟಿರ ಅಯ್ಯಣ್ಣ ಸ್ಥಳೀಯ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಂದಿಕAಡ ದಿನೇಶ್ ಮುಂದಾಳತ್ವದಲ್ಲಿ ಈ ಕಾರ್ಯ ನಡೆಯಿತು. ಈ ಸಂದರ್ಭ ಪೊಟ್ಟಂಡ ನಾಣಯ್ಯ, ಅಪ್ಪಾರಂಡ ಕಾರ್ಯಪ್ಪ, ಗುತ್ತಿಗೆದಾರ ಚೆಯ್ಯಂಡ ಭರತ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.