ಮಡಿಕೇರಿ, ನ. ೪: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಘಟಕದ ವತಿಯಿಂದ ಇದೇ ಪ್ರಪ್ರಥಮ ಬಾರಿಗೆ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರಿಗಾಗಿ ಮನರಂಜನಾ ಕ್ರೀಡಾಕೂಟ ಹಾಗೂ ಸಮಾವೇಶ ಏರ್ಪಡಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಸಂಘದ ಅಧ್ಯಕ್ಷ ಕೊಟ್ಟುಕತ್ತಿರ ಪ್ರಕಾಶ್, ಇದೇ ಪ್ರಥಮ ಬಾರಿಗೆ ಮಾಜಿ ಸೈನಿಕರು ಹಾಗೂ ಸಂಸಾರದವರಿಗೆ ಆಟೋಟಗಳು, ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಮಾಜಿ ಸೈನಿಕರ ಸಮಾವೇಶ ಏರ್ಪಡಿಸಲಾಗಿದೆ. ಈ ಒಂದು ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರು ಭಾಗವಹಿಸಬಹು ದಾಗಿದೆ ಎಂದು ತಿಳಿಸಿದರು. ಡಿ. ೧೮ ರಂದು ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಹಾಗೂ ಸಮಾವೇಶ ನಡೆಯಲಿದ್ದು, ಇದೇ ಪ್ರಥಮ ಬಾರಿಗೆ ಇಂತಹ ಕಾರ್ಯಕ್ರಮ ಏರ್ಪಡಿಸಿರುವ ಬಗ್ಗೆ ಉತ್ತಮ ಸ್ಪಂದನ ವ್ಯಕ್ತವಾಗುತ್ತಿದೆ ಎಂದು ಅವರು ಹೇಳಿದರು.

ಬೇಡಿಕೆಗಳ ಮನವಿ

ಜಮೀನು ಹೊಂದಿರುವ ಮಾಜಿ ಸೈನಿಕರಿಗೆ ಸೈನಿಕ ಕಾಲೋನಿ, ನಿವೇಶನ ಹಂಚಿಕೆ, ಮಾಜಿ ಸೈನಿಕರ ಸಂಘಕ್ಕೆ ನಿವೇಶನ, ಮಾಜಿ ಸೈನಿಕರಿಗೆ, ವಿಧವಾ ಪತ್ನಿಯರಿಗೆ ಹಕ್ಕುಪತ್ರ ವಿತರಣೆ ಮಾಡುವದು, ಮಾಜಿ ಸೈನಿಕರು ಮೃತಪಟ್ಟಾಗ ಸರಕಾರಿ ಗೌರವ ಸಲ್ಲಿಸಲು ಕೇಂದ್ರ ಸರಕಾರದ ಆದೇಶ ಪಾಲನೆ ಮಾಡುವದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವದಾಗಿ ಸೋಮಣ್ಣ ಇದೇ ಸಂದರ್ಭದಲ್ಲಿ ತಿಳಿಸಿದರು.

ಸಂಘದ ಉಪಾಧ್ಯಕ್ಷ ಸುಧೀರ್ ಮಾತನಾಡಿ, (ಮೊದಲ ಪುಟದಿಂದ) ಮಾಜಿ ಸೈನಿಕರು ಬೇರೆ ಬೇರೆ ಕಡೆಗಳಲ್ಲಿ ನೆಲೆಸಿದ್ದು, ಎಲ್ಲರಿಗೂ ಒಂದೇ ಕಡೆಯಲ್ಲಿ ಸೇರಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲರನ್ನೂ ಒಟ್ಟಾಗಿ ಸೇರಿಸುವ ಸಂಬAಧ ಕಾರ್ಯಕ್ರಮ ಹಮ್ಮಿಕೊಂಡಿರುವದಾಗಿ ತಿಳಿಸಿದರು. ಮಾಜಿ ಸೈನಿಕರ ಕುಟುಂಬದ ಮಕ್ಕಳಿಂದ ಹಿಡಿದು ಮಹಿಳೆಯರು, ವಯಸ್ಕರಿಗೂ ವಿವಿಧ ಮನರಂಜನಾ ಕ್ರೀಡೆಗಳನ್ನು ಏರ್ಪಡಿಸಲಾಗಿದೆ. ಎಲ್ಲರೂ ಒಂದಾಗಿ ಬೆರೆತು ಸಂತೋಷದಿAದ ಬೆರೆಯಲು ಇದೊಂದು ಉತ್ತಮ ಅವಕಾಶವಾಗಿದೆ. ಎಲ್ಲರನ್ನು ಒಂದುಗೂಡಿಸುವ ಒಂದು ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಕಾರ್ಯಕ್ರಮ ಸಂಚಾಲಕರಾದ ಕುಟ್ಟಪ್ಪ, ಕಿರಣ್ ಚಿಣ್ಣಪ್ಪ, ಮಹಿಳಾ ಸಂಚಾಲಕಿ ಚಂದನ ಇದ್ದರು.