ಕೂಡಿಗೆ, ನ. ೫: ತೊರೆನೂರು ಗ್ರಾಮದಲ್ಲಿ ಸರಕಾರಿ ಬಸ್‌ಗಳು ನಿಲುಗಡೆಗೊಳ್ಳದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಕೊಡಗು ರಕ್ಷಣಾ ವೇದಿಕೆ ತೊರೆನೂರು ಘಟಕ, ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಗ್ರಾಮಸ್ಥರು ತೊರೆನೂರು ಗ್ರಾಮದಲ್ಲಿ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ತೊರೆನೂರು ಗ್ರಾಮದಲ್ಲಿ ಸಾರಿಗೆ ಬಸ್‌ಗಳ ನಿಲುಗಡೆಗೆ ಅವಕಾಶಗಳು ಇದ್ದರೂ ಸಹ ಕೆಲ ಬಸ್‌ಗಳನ್ನು ಈ ಗ್ರಾಮದಲ್ಲಿ ನಿಲ್ಲಿಸದೆ ಚಾಲಿಸುವುದ ರಿಂದಾಗಿ ಈ ಗ್ರಾಮ ವ್ಯಾಪ್ತಿಯ ೮ ಉಪ ಗ್ರಾಮಗಳ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ, ವಯೋವೃದ್ಧರಿಗೆ ತೊಂದರೆಗಳು ಆಗುತ್ತವೆ ಎಂದು ಆರೋಪಿಸಿ ೧೦ ನಿಮಿಷಗಳವರೆಗೆ ಬಸ್ ತಡೆದು ಪ್ರತಿಭಟನೆ ಮಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ ಮಹೇಶ್, ಮತ್ತು ಸಹಕಾರ ಸಂಘದ ಸದಸ್ಯ ಕೆ.ಎಸ್. ಕೃಷ್ಣಗೌಡ ಮಾತನಾಡಿ, ದಿನಂಪ್ರತಿ ಗ್ರಾಮಸ್ಥರಿಗೆ ಮತ್ತು ವಿದ್ಯಾರ್ಥಿಗಳಿಗೆ ಆಗುತ್ತಿರುವ ಕೂಡಿಗೆ, ನ. ೫: ತೊರೆನೂರು ಗ್ರಾಮದಲ್ಲಿ ಸರಕಾರಿ ಬಸ್‌ಗಳು ನಿಲುಗಡೆಗೊಳ್ಳದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಕೊಡಗು ರಕ್ಷಣಾ ವೇದಿಕೆ ತೊರೆನೂರು ಘಟಕ, ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಗ್ರಾಮಸ್ಥರು ತೊರೆನೂರು ಗ್ರಾಮದಲ್ಲಿ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ತೊರೆನೂರು ಗ್ರಾಮದಲ್ಲಿ ಸಾರಿಗೆ ಬಸ್‌ಗಳ ನಿಲುಗಡೆಗೆ ಅವಕಾಶಗಳು ಇದ್ದರೂ ಸಹ ಕೆಲ ಬಸ್‌ಗಳನ್ನು ಈ ಗ್ರಾಮದಲ್ಲಿ ನಿಲ್ಲಿಸದೆ ಚಾಲಿಸುವುದ ರಿಂದಾಗಿ ಈ ಗ್ರಾಮ ವ್ಯಾಪ್ತಿಯ ೮ ಉಪ ಗ್ರಾಮಗಳ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ, ವಯೋವೃದ್ಧರಿಗೆ ತೊಂದರೆಗಳು ಆಗುತ್ತವೆ ಎಂದು ಆರೋಪಿಸಿ ೧೦ ನಿಮಿಷಗಳವರೆಗೆ ಬಸ್ ತಡೆದು ಪ್ರತಿಭಟನೆ ಮಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ ಮಹೇಶ್, ಮತ್ತು ಸಹಕಾರ ಸಂಘದ ಸದಸ್ಯ ಕೆ.ಎಸ್. ಕೃಷ್ಣಗೌಡ ಮಾತನಾಡಿ, ದಿನಂಪ್ರತಿ ಗ್ರಾಮಸ್ಥರಿಗೆ ಮತ್ತು ವಿದ್ಯಾರ್ಥಿಗಳಿಗೆ ಆಗುತ್ತಿರುವ ವಾಗಿ ಮಾಡಲಾಗಿದೆ. ಮುಂದಿನ ೮ ದಿನಗಳ ಒಳಗೆ ಸಮಸ್ಯೆ ಸರಿಪಡಿಸದಿದ್ದರೆ ಗ್ರಾಮ ಪಂಚಾಯಿತಿ ಸೇರಿದಂತೆ ಗ್ರಾಮಸ್ಥರ ಸಹಕಾರ ದೊಂದಿಗೆ ರಸ್ತೆ ತಡೆ, ಜೊತೆಯಲ್ಲಿ ಬೃಹತ್ ಪ್ರತಿಭಟನೆಯನ್ನು ಮಾಡಲಾಗುವುದು ಎಂದು ಸಹಕಾರ ಸಂಘದ ಮಾಜಿ ಅಧ್ಯಕ್ಷ ಕೃಷ್ಣಗೌಡ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ ಮಹೇಶ್ ಎಚ್ಚರಿಕೆ ನೀಡಿದರು.

ಈ ಸಂದರ್ಭ ಗ್ರಾ.ಪಂ. ಸದಸ್ಯರಾದ ದೇವರಾಜ್, ಶಿವಕುಮಾರ್, ಸಾವಿತ್ರಿ, ಪ್ರಮುಖರಾದ ಗಜೇಂದ್ರ, ತಿಮ್ಮಪ್ಪ, ಶಿವರಾಮ್, ಪ್ರಕಾಶ್ ಮನೋಹರ, ಸೇರಿದಂತೆ ಇನ್ನಿತರರು ಹಾಜರಿದ್ದರು.

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ ನೇತೃತ್ವದಲ್ಲಿ ಬಂದೋಬಸ್ತು ವ್ಯವಸ್ಥೆ ಮಾಡಲಾಗಿತ್ತು.

ಅಧಿಕಾರಿಯ ಭರವಸೆ

ತೊರೆನೂರುವಿನಲ್ಲಿ ಸಾರಿಗೆ ಬಸ್ ನಿಲುಗಡೆಗೆ ಸಂಬAಧಿಸಿದAತೆ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಮಡಿಕೇರಿ ಸಾರಿಗೆ ಬಸ್ ಘಟಕ ಅಧಿಕಾರಿ ಗೀತಾ ಅವರನ್ನು ಮಾತನಾಡಿಸಿದಾಗ, ಸಂಬAಧಿಸಿದ ವಿಭಾಗದ ಅಧಿಕಾರಿಗಳೊಂದಿಗೆ ಚರ್ಚಿಸಿ ಸರಿಪಡಿಸುವ ಭರವಸೆಯನ್ನು ನೀಡಿದ್ದಾರೆ.

-ಕೆ.ಕೆ. ನಾಗರಾಜಶೆಟ್ಟಿ