ಮಡಿಕೇರಿ: ಭಾಷಾ ಸಾಹಿತ್ಯ, ಕವಿಯ ಭಾವನೆಗಳು ಓದುಗನ ಮನಸ್ಸು, ಹೃದಯಕ್ಕೆ ತಟ್ಟಬೇಕಾದರೆ ಅದು ಕನ್ನಡ ಭಾಷಾ ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದು ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಅಭಿಪ್ರಾಯಪಟ್ಟರು.
ಮೂರ್ನಾಡು ವಿದ್ಯಾಸಂಸ್ಥೆಯಲ್ಲಿ ಸಾಂಸ್ಕೃತಿಕ ವೈವಿಧ್ಯತೆಗಳೊಂದಿಗೆ ಆಯೋಜಿತ ೬೭ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಒಂದು ಭಾಷಾ ಸಾಹಿತ್ಯ ಕವಿಯ ಭಾವನೆ ಓದುಗನ ಹೃದಯಕ್ಕೆ ಇಳಿಯಬೇಕಾದರೆ, ಅದು ಕನ್ನಡ ಭಾಷಾ ಸಾಹಿತ್ಯದಿಂದ ಮಾತ್ರ ಸಾಧ್ಯ. ಆಂಗ್ಲ ಅಥವಾ ಇತರ ಭಾಷಾ ಕೃತಿಗಳು ಕ್ಷಣಿಕ ಖುಷಿಯನ್ನಷ್ಟೇ ಉಂಟು ಮಾಡುತ್ತವೆ. ಆದರೆ ಕನ್ನಡ ಭಾಷೆ ಓದುಗನಿಗೆ ಹೃದಯ ಸಂವೇಧನೆ ಉಂಟು ಮಾಡುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ., ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ತೀವ್ರಗತಿಯಲ್ಲಿ ಇಳಿಮುಖವಾಗುತ್ತಿದೆ. ಕನ್ನಡ ಪುಸ್ತಕ ಮಳಿಗೆಗಳ ಸಂಖ್ಯೆಯೂ ಕಡಮೆಯಾಗುತ್ತಿರುವುದೂ ಕನ್ನಡ ಭಾಷೆಯ ಸಂರಕ್ಷಣೆ ನಿಟ್ಟಿನಲ್ಲಿ ಕಳವಳಕಾರಿಯಾಗಿದೆ. ಕೊಡಗಿನಲ್ಲಿ ಪುಸ್ತಕ ಮಳಿಗೆಯೇ ಇಲ್ಲದಿರುವುದು ವಿಷಾಧನೀಯವಾಗಿದ್ದು, ಹೀಗಾದಲ್ಲಿ ಪುಸ್ತಕ ಓದುವ ಅಭ್ಯಾಸ ಹೇಗೆ ಹೆಚ್ಚಾಗಲು ಸಾಧ್ಯವಿದೆ ಎಂದೂ ಪ್ರಶ್ನಿಸಿದರು. ಕೊಡಗು ಜಿಲ್ಲಾ ಪಂಚಾಯಿತಿ ಜಿಲ್ಲೆಯ ಪ್ರತೀ ಗ್ರಾ.ಪಂ.ನಲ್ಲಿ ಸ್ಥಾಪಿಸಿರುವ ಡಿಜಿಟಲ್ ಗ್ರಂಥಾಲಯಗಳನ್ನೇ ಮಾದರಿಯಾಗಿರಿಸಿಕೊಂಡು ಜಿಲ್ಲೆಯ ಶಿಕ್ಷಣ ಸಂಸ್ಥೆಗಳೂ ಇಂದಿನ ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಡಿಜಿಟಲ್ ಮಾಧ್ಯಮವನ್ನು ಗ್ರಂಥಾಲಯ ಸ್ಥಾಪನೆಗೆ ಬಳಸಿಕೊಂಡಲ್ಲಿ ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಹವ್ಯಾಸ ಹೆಚ್ಚಿಸಲು ಸಾಧ್ಯವಿದೆ ಎಂದು ಅನಿಲ್ ಸಲಹೆ ನೀಡಿದರು.
ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೇಟ್ಟಿರ ಜಿ. ಮಾದಪ್ಪ ಮಾತನಾಡಿ, ಕರ್ನಾಟಕದೊಂದಿಗೆ ಕೊಡಗನ್ನು ವಿಲೀನ ಮಾಡುವ ಅಂದಿನವರ ನಿರ್ಧಾರ ಸಕಾಲಿಕವಾಗಿತ್ತು. ಕರ್ನಾಟಕದೊಂದಿಗೆ ವಿಲೀನಗೊಂಡ ಪರಿಣಾಮದಿಂದಾಗಿ ಕೊಡಗಿನ ಪ್ರತಿಭಾವಂತರು ಕನ್ನಡನಾಡಿನ ಹಲವೆಡೆ ಸೂಕ್ತ ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು.
ಮೂರ್ನಾಡು ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎಸ್.ಡಿ. ಪ್ರಶಾಂತ್ ಕನ್ನಡದ ಮಹತ್ವದ ಬಗ್ಗೆ ಮಾತನಾಡಿ, ಅತ್ಯಂತ ಶ್ರೀಮಂತವಾದ ಭಾಷೆಯಾಗಿರುವ ಕನ್ನಡಕ್ಕೆ ಎರಡು ಸಾವಿರ ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವಿದೆ. ಹಳೆಗನ್ನಡ ಕಾಲದಿಂದ ಇಂದಿನವರೆಗೆ ವಿವಿಧ ಹಂತಗಳಲ್ಲಿ ಕನ್ನಡ ಭಾಷೆ ಬದಲಾವಣೆ ಮತ್ತು ಬೆಳವಣಿಗೆಗಳನ್ನು ಕಾಣುತ್ತಾ ವಿವಿಧ ಹಂತಗಳನ್ನು ದಾಟಿ ಬಂದಿದೆ. ಭಾಷೆಯ ಬಗ್ಗೆ ತಾತ್ಸಾರ ಅಥವಾ ನಿರಭಿಮಾನ ಸಲ್ಲದು ಎಂದರು.
ಮೂರ್ನಾಡು ವಿದ್ಯಾಸಂಸ್ಥೆಯ ನಿವೃತ್ತ ಶಿಕ್ಷಕಿಯರು, ಸಿಬ್ಬಂದಿಗಳಾದ ಮಮತಾ, ಚನ್ನಪ್ಪ, ಪುಪ್ಪವೇಣಿ, ಲೀಲಾವತಿ ಅವರನ್ನು ವಿದ್ಯಾಸಂಸ್ಥೆ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಪಿಯುಸಿಯಲ್ಲಿ ರಾಜ್ಯಮಟ್ಟಕ್ಕೆ ೮ನೇ ಸ್ಥಾನಗಳಿಸಿದ ವಿದ್ಯಾರ್ಥಿನಿ ಹರ್ಷಿತ ಅವರನ್ನು ಸನ್ಮಾನಿಸಿ ಆಕೆಯ ಭಾವಚಿತ್ರವನ್ನು ಶಾಲಾ ಸಭಾಂಗಣದಲ್ಲಿ ಅಳವಡಿಸಿ ಇದು ಸಂಸ್ಥೆಯ ಇತರ ವಿದ್ಯಾರ್ಥಿಗಳ ವಿದ್ಯಾ ಸಾಧನೆಗೂ ಸ್ಪೂರ್ತಿಯಾಗಲಿ ಎಂದು ಹಾರೈಸಲಾಯಿತು
ಉಪಾಧ್ಯಕ್ಷ ಪುದಿಯೊಕ್ಕಡ ಸುಬ್ರಮಣಿ, ಖಜಾಂಚಿ ಬಡುವಂಡ ಸುಬ್ರಮಣಿ, ಕಾರ್ಯದರ್ಶಿ ಪೆಮ್ಮುಡಿಯಂಡ ವೇಣು ಅಪ್ಪಣ್ಣ, ನಿರ್ದೇಶಕರುಗಳಾದ ತೇಲಪಂಡ ಶೈಲ, ಪಳಂಗAಡ ವಿಠಲ್ ಪೂವಯ್ಯ, ಈರಮಂಡ ಸೋಮಣ್ಣ, ಮೂಡೇರ ಕಾಳಯ್ಯ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ದೇವಕಿ, ಪ್ರೌಢಶಾಲೆಯ ಮುಖ್ಯೋಪಾ ಧ್ಯಾಯಿನಿ ರಶ್ಮಿ, ಪದವಿ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ವಿಲ್ಮಾ ವೇದಿಕೆಯಲ್ಲಿದ್ದರು.
ಉಪನ್ಯಾಸಕಿ ಕಲ್ಪನಾ ಬಿ.ಎಂ. ನಿರೂಪಿಸಿದ ಕಾರ್ಯಕ್ರಮದಲ್ಲಿ ಉಪನ್ಯಾಸಕಿ ದಮಯಂತಿ ಸ್ವಾಗತಿಸಿ, ಉಪನ್ಯಾಸಕ ಹರೀಶ್ ಕಿಗ್ಗಾಲು ವಂದಿಸಿದರು. ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜಿಸಿದವು.ಸುAಟಿಕೊಪ್ಪ ಕನ್ನಡ ವೃತ್ತ
ಸುಂಟಿಕೊಪ್ಪ: ಕನ್ನಡವನ್ನು ವ್ಯವಹಾರಿಕವಾಗಿ ಬೆಳೆಸುವ ಮೂಲಕ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದು ಲೀಡ್ ಬ್ಯಾಂಕ್ನ ನಿವೃತ್ತ ವ್ಯವಸ್ಥಾಪಕ ಆರ್.ಕೆ. ಬಾಲಚಂದ್ರ ಅವರು ಕರೆ ನೀಡಿದರು. ಸುಂಟಿಕೊಪ್ಪದ ಕನ್ನಡ ವೃತ್ತದಲ್ಲಿ ಕನ್ನಡ ಸಾಹಿತ್ಯ ಪರಿಷತ್, ಗ್ರಾಮ ಪಂಚಾಯಿತಿ, ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಸರಕಾರಿ ಪ್ರೌಢಶಾಲೆ, ಸರಕಾರಿ ಪದವಿಪೂರ್ವ ಕಾಲೇಜು, ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆ, ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆ, ಸುಂಟಿಕೊಪ್ಪದ ವಿವಿಧ ಸಂಘ-ಸAಸ್ಥೆಗಳ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕರರಾಗಿ ಮಾತನಾಡಿದ ಆರ್.ಕೆ. ಬಾಲಚಂದ್ರ ಅವರು, ಸುಂಟಿಕೊಪ್ಪದಲ್ಲಿ ಎಲ್ಲ ಜಾತಿ, ಮತ, ಧರ್ಮದವರು ನೆಲೆಸಿದ್ದೂ, ಶಾಂತಿಯ ತೋಟವಾಗಿದೆ. ಯುವಪೀಳಿಗೆ ಕನ್ನಡ ಭಾಷೆಯನ್ನು ಪ್ರೀತಿಯಿಂದ ಬಳಸಿ ಬೆಳೆಸಬೇಕು. ಇಂದು ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕನ್ನಡಾ ಭಿಮಾನಿಗಳು ಹಬ್ಬದ ರೀತಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ಸಂತಸ ತಂದಿದೆ. ಕನ್ನಡ ಧ್ವಜಕ್ಕೆ ಇನ್ನೂ ರಾಜ್ಯ ಸರಕಾರ ಅಧಿಕೃತ ಧ್ವಜದ ಮುದ್ರೆ ನೀಡದಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಲ್ಲದೆ, ಕೂಡಲೇ ಅಧಿಕೃತ ಕನ್ನಡ ಧ್ವಜ ಆಗಬೇಕೆಂದು ಹೇಳಿದರು. ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಶಿವಮ್ಮ ಮಹೇಶ್, ಗ್ರಾ.ಪಂ. ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಸುಂಟಿಕೊಪ್ಪ ಹೋಬಳಿ ಕಸಾಪ ಅಧ್ಯಕ್ಷ ಪಿ.ಎಫ್. ಸಬಾಸ್ಟಿನ್, ಗ್ರಾ.ಪಂ. ಪಿಡಿಓ ವೇಣುಗೋಪಾಲ್, ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಯಶೋಧರ ಪೂಜಾರಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾಗೇಶ ಪೂಜಾರಿ, ಗ್ರಾ.ಪಂ. ಸದಸ್ಯರುಗಳಾದ ಪಿ.ಆರ್. ಸುನಿಲ್ಕುಮಾರ್, ಸೋಮನಾಥ್, ಆಲಿಕುಟ್ಟಿ, ಶಬ್ಬೀರ್, ವಸಂತಿ, ಮಂಜುಳಾ, ಶಾಂತಿ, ಸುಂಟಿಕೊಪ್ಪ ನಾಡು ಗೌಡ ಸಮಾಜದ ಅಧ್ಯಕ್ಷ ಯಂಕನ ಉಲ್ಲಾಸ್, ಮಲ ಯಾಳಿ ಸಮಾಜದ ವಿ.ಎ. ಸಂತೋಷ್, ಬಿಲ್ಲವ ಸಮಾಜದ ಅಧ್ಯಕ್ಷ ಮಣಿ ಮುಖೇಶ್, ಹಿರಿಯ ನಾಗರಿಕರರಾದ ಎಂ.ಎ. ವಸಂತ್, ವರ್ತಕರ ಸಂಘದ ಅಧ್ಯಕ್ಷ ಡಿ. ನರಸಿಂಹ ಸೇರಿದಂತೆ ಇತರರು ಇದ್ದರು. ಚಿತ್ರ ಕಲೆಗಾರ ವಹೀದ್ ಜಾನ್, ಕನ್ನಡ ಅಭಿಮಾನಿ ಅಶೋಕ್ ಶೇಟ್ ಅವರುಗಳನ್ನು ಕಸಾಪ ವತಿಯಿಂದ ಗೌರವಿಸಲಾಯಿತು.ಮಡಿಕೇರಿ: ಮಕ್ಕಳ ಮನದಲ್ಲಿ ಕನ್ನಡ ಪ್ರೇಮ ಬೆಳೆದಾಗ ಮಾತ್ರ ಭವಿಷ್ಯದಲ್ಲಿ ಕನ್ನಡದ ಉಳಿವು ಸಾಧ್ಯವಿದೆ. ಕನ್ನಡ ಭಾಷೆಯನ್ನು ವಿದ್ಯಾರ್ಥಿಗಳಿಗೆ ಕಲಿಸುವಲ್ಲಿ ಪೋಷಕರ ಪಾತ್ರ ಪ್ರಮುಖವಾಗಿದ್ದು, ಪಠ್ಯದಲ್ಲಿ ಕನ್ನಡವನ್ನು ನಿರ್ಲಕ್ಷಿಸಬಹುದು ಎಂಬ ಅನೇಕ ವಿದ್ಯಾರ್ಥಿಗಳ ಮನದಲ್ಲಿರುವ ಮನೋಭಾವ ನಿವಾರಣೆಯಾಗಬೇಕಾಗಿದೆ ಎಂದು ಉಪನ್ಯಾಸಕಿ, ಲೇಖಕಿ ಕೆ. ಜಯಲಕ್ಷಿö್ಮ ಅಭಿಪ್ರಾಯಪಟ್ಟರು.
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ರೋಟರಿ ಸಭಾಂಗಣದಲ್ಲಿ ಆಯೋಜಿತ ೬೭ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಲ್ಲಿ ಕನ್ನಡದ ಅರಿವು ವಿಚಾರ ಕುರಿತಂತೆ ಮಾತನಾಡಿದ ಕೆ. ಜಯಲಕ್ಷಿö್ಮ, ಅಂಕಗಳ ವಿಚಾರಕ್ಕೆ ಬಂದಾಗ ಅನೇಕ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆಯ ಬಗ್ಗೆ ತೀರಾ ನಿರ್ಲಕ್ಷö್ಯವಿದೆ. ಕನ್ನಡದಲ್ಲಿ ಕಡಿಮೆ ಅಂಕ ಪಡೆದರೂ ನಿಭಾಯಿಸಬಹುದು ಎಂಬ ತಪ್ಪು ಕಲ್ಪನೆಯಿದೆ. ಪರ ರಾಜ್ಯಗಳಲ್ಲಿ ಆಯಾ ರಾಜ್ಯ ಭಾಷೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ತೀವ್ರ ತುಡಿತವಿದ್ದರೆ ಕರ್ನಾಟಕದಲ್ಲಿ ಮಾತ್ರ ವಿದ್ಯಾರ್ಥಿಗಳಲ್ಲಿ ಈ ರಾಜ್ಯದ ಪ್ರಮುಖ ಭಾಷೆಯನ್ನು ಕಲಿಯುವ ಬಗ್ಗೆ ತಾತ್ಸಾರ ಭಾವನೆ ಕಂಡುಬರುತ್ತಿzಕುಶಾಲನಗರ: ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯೋತ್ಸವ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಉದ್ಯಮಿ ಬಿ.ಎಸ್. ಜಗದೀಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ತಾಲೂಕು ಅಧ್ಯಕ್ಷ ಕೆ.ಎಸ್. ಮೂರ್ತಿ ಮತ್ತಿತರರು ಇದ್ದರು.ೆ. ಕನ್ನಡವನ್ನು ನಾವು ನಿರ್ಲಕ್ಷಿಸಬಹುದು ಎಂಬ ತಪ್ಪು ಕಲ್ಪನೆ ಹೆಚ್ಚಾಗುತ್ತಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಪೋಷಕರು ಪ್ರಮುಖ ಪಾತ್ರ ವಹಿಸಬೇಕು. ಕನ್ನಡ ಭಾಷೆಯನ್ನು ಕೂಡ ಪ್ರಮುಖ ಭಾಷೆಯನ್ನಾಗಿ ಓದಿ ಬರೆಯುವಂತೆ ಮಕ್ಕಳಲ್ಲಿ ಉತ್ಸಾಹ ತುಂಬಬೇಕೆAದು ಹೇಳಿದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಸಾದ್ ಗೌಡ ಮಾತನಾಡಿ, ಇಂಗ್ಲೀಷ್ ಭಾಷಾ ವ್ಯಾಮೋಹದಿಂದ ತಪ್ಪು ಉಚ್ಚರಣೆಯಲ್ಲಿ ಭಾಷೆಯನ್ನು ಪ್ರಯೋಗಿಸುವುದಕ್ಕಿಂತ ಮನದ ಭಾಷೆಯಾಗಿ ಸಂವಹನಕ್ಕೂ ಸುಲಭವಾಗಿರುವ ಕನ್ನಡವನ್ನೇ ಮಾತಿನಲ್ಲಿ ಬಳಸುವುದು ಸೂಕ್ತ. ಶಾಲೆಗಳಲ್ಲಿಯೇ ಮೊದಲು ಕನ್ನಡದ ಮಹತ್ವದ ಬಗ್ಗೆ ತಿಳಿಸಿ ಹೇಳುವ ವ್ಯವಸ್ಥೆ ಕಡ್ಡಾಯವಾಗಿ ಜಾರಿಯಾಗಬೇಕೆಂದು ನುಡಿದರು. ಕಾರ್ಯಕ್ರಮದಲ್ಲಿ ಪ್ಯಾರ ಒಲಂಪಿಕ್ನಲ್ಲಿ ರಾಷ್ಟçಮಟ್ಟದ ಸಾಧನೆ ಮಾಡಿದ ಅವರನ್ನು ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಗೌರವಿಸಲಾಯಿತು. ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ ವೇದಿಕೆಯಲ್ಲಿದ್ದರು. ಕಾರ್ಯಕ್ರಮವನ್ನು ರೋಟರಿ ಪಬ್ಲಿಕ್ ಇಮೇಜ್ ಜಿಲ್ಲಾ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ನಿರ್ವಹಿಸಿದರು. ಕನ್ನಡದ ಗೀತಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು.ಪೊನ್ನಂಪೇಟೆ: ಪೊನ್ನಂಪೇಟೆ ಸಾಯಿ ಶಂಕರ ವಿದ್ಯಾಸಂಸ್ಥೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ಸಾಯಿಶಂಕರ ವಿದ್ಯಾಸಂಸ್ಥೆ, ಪೊನ್ನಂಪೇಟೆ ಬಿ.ಇಡಿ ಕಾಲೇಜು ಪ್ರಾಂಶುಪಾಲ ಪಿ.ಎ. ನಾರಾಯಣ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜು ಪ್ರಾಂಶುಪಾಲೆ ಗೀತಾ ನಾಯ್ಡು ನೆರವೇರಿಸಿದರು. ವಿದ್ಯಾರ್ಥಿಗಳು ಕನ್ನಡ ನಾಡು,ನುಡಿ ಗೀತೆಗೆ ನೃತ್ಯ ಮಾಡಿದರು.ಶನಿವಾರಸಂತೆ: ಜೈನರ ಕಾವ್ಯ, ಶರಣರ ವಚನ, ಹರಿದಾಸರ ಕೀರ್ತನೆಗಳ ಭಾಷೆ ಕನ್ನಡವೇ ಆಗಿದ್ದು, ಇಂತಹ ಭಾಷಾ ಪರಂಪರೆಯಲ್ಲಿ ಬೆಳೆದು ಬಂದ ಕನ್ನಡ ನುಡಿಯನ್ನು ಉಳಿಸಿ, ಬೆಳೆಸುವುದೇ ಪ್ರತಿ ಕನ್ನಡಿಗನ ಕರ್ತವ್ಯವಾಗಿದೆ ಎಂದು ಪತ್ರಕರ್ತೆ ನಯನತಾರಾ ಅಭಿಪ್ರಾಯಪಟ್ಟರು.
ಪಟ್ಟಣದ ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕೊಡಗಿನ ವಿವಿಧ ಸಾಹಿತಿಗಳ ಕನ್ನಡ ಪುಸ್ತಕಗಳ ಕಬಾಟನ್ನು ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕವಿಗಳ ಹೃದಯದಲ್ಲಿ ಸಾರ್ವಭೌಮತ್ಯ ಪಡೆದ ಕನ್ನಡ ಜನಸಾಮಾನ್ಯರ ದೃಷ್ಟಿಯಲ್ಲಿ ಉದಾಸೀನತೆಗೆ ಒಳಗಾಗಿದೆ. ಪರಭಾಷೆಯ ಬಗ್ಗೆ ಅಭಿಮಾನ ಇರಬೇಕು, ದುರಾಭಿಮಾನವಿರಬಾರದು. ಎಲ್ಲಾ ಭಾಷೆಗಳ ಜ್ಞಾನ ಅಮೂಲ್ಯ ಸಂಪತ್ತಿನAತೆ ಎಂದರು. ಅತಿಥಿ, ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆ ಶಿಕ್ಷಕ ಗುರುಬಸಪ್ಪ ಮಾತನಾಡಿ, ಕನ್ನಡ ಭಾಷೆಯ ಶಬ್ದ ಭಂಡಾರ ಶ್ರೀಮಂತವಾಗಿದು, ಶಬ್ದ ಸಂಪತ್ತಿಗೆ ಸರಿ ಸಾಟಿಯಿಲ್ಲ. ಕನ್ನಡ ನಾಡು, ನುಡಿ ಬೆಳವಣಿಗೆಗೆ ಕನ್ನಡ ಕಲಿಕೆ ಕಡ್ಡಾಯವಾಗಬೇಕು. ಕನ್ನಡ ಭಾಷೆಗೆ ಆದ್ಯತೆ ನೀಡಿ ಅನ್ಯ ಭಾಷೆಗಳನ್ನು ಗೌರವಿಸಿಸದರೆ ಕನ್ನಡ ಭಾಷೆ ಅಭಿವೃದ್ಧಿಯಾಗುತ್ತದೆ ಎಂದರು. ವಿದ್ಯಾರ್ಥಿಗಳು ಕನ್ನಡ ನಾಡು, ನುಡಿ, ಸಾಹಿತ್ಯ, ಕಲಾ ವೈಭವವನ್ನು ಪ್ರತಿಬಿಂಬಿಸುವ ಸಾಮೂಹಿಕ ನೃತ್ಯ, ಸಮೂಹ ಗೀತೆ, ಯಕ್ಷಗಾನ ಮತ್ತು ಪೂಜಾ ಕುಣಿತ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿ ರಂಜಿಸಿದರು. ಮಾಸ್ಟರ್ ಪ್ರವೀಣ್ ಕನ್ನಡ ನಾಡಿನ ವೈಭವದ ಕುರಿತು ಮಾತನಾಡಿದರು. ನಯನತಾರಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲ ಫಾದರ್ ಸಬಾಸ್ಟಿನ್ ಮೈಕಲ್ ಮಾತನಾಡಿದರು. ಫಾದರ್ ಎ.ವಿ. ಥೋಮಸ್, ಸಜಿ ಥೋಮಸ್ ಹಾಗೂ ಶಿಕ್ಷಕ ವೃಂದದವರು, ಸಿಬ್ಬಂದಿ ಉಪಸ್ಥಿತರಿದ್ದರು. ಶಿಕ್ಷಕಿಯರಾದ ರಮಾ, ಮೆಜಿಷಿಯಾ ನಿರೂಪಿಸಿದರು. ಗೌತಮಿ ಸ್ವಾಗತಸಿ, ಶಾಲಿನಿ ವಂದಿಸಿದರು.ಶನಿವಾರಸAತೆ ಕ.ಸಾ.ಪ.
ಶನಿವಾರಸಂತೆ: ಶನಿವಾರಸಂತೆಯ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡ ಭವನದಲ್ಲಿ ಹೋಬಳಿ ಅಧ್ಯಕ್ಷ ಬಿ.ಬಿ. ನಾಗರಾಜು ಕನ್ನಡ ರಾಜ್ಯೋತ್ಸವ ಸಮಾರಂಭದ ಧ್ವಜಾರೋಹಣ ನೆರವೇರಿಸಿದರು.
ಕನ್ನಡ ಭಾಷೆಯ ಬಳಕೆಯಿಂದ ಮಾತ್ರ ಕನ್ನಡದ ಉಳಿವು ಸಾಧ್ಯ ಎಂದು ಅವರು ಅಭಿಪ್ರಾಯಿಸಿದರು. ಸಮಾರಂಭದಲ್ಲಿ ಶನಿವಾರಸಂತೆಯ ಲಯನ್ಸ್ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ನಾರಾಯಣಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಎಂ.ಪಿ. ಮೋಹನ್, ಸದಸ್ಯರುಗಳಾದ ಶಶಿಕಲ, ಚ.ಮ. ಪುಟ್ಟಸ್ವಾಮಿ, ಎಸ್.ಆರ್. ಶಿವಪ್ಪ, ಎಸ್.ಬಿ. ನಂಜಪ್ಪ, ಇತರರು ಹಾಜರಿದ್ದರು. ರಾಷ್ಟçಗೀತೆಯೊಂದಿಗೆ ಸಮಾರಂಭವನ್ನು ಮುಕ್ತಾಯಗೊಳಿಸಲಾಯಿತು.*ಗೋಣಿಕೊಪ್ಪ: ಗೋಣಿಕೊಪ್ಪ ಆಟೋ ಚಾಲಕರ-ಮಾಲೀಕರ ಸಂಘದ ವತಿಯಿಂದ ೬೭ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು.
ಆಟೋ ನಿಲ್ದಾಣದಲ್ಲಿ ಕನ್ನಡದ ಧ್ವಜಾರೋಹಣವನ್ನು ಸಂಘದ ಗೌರವಾಧ್ಯಕ್ಷ ಕುಲ್ಲಚಂಡ ಪಿ. ಬೋಪಣ್ಣ ನಗರದ ಹಿರಿಯ ವೈದ್ಯ ಡಾ. ಶಿವಪ್ಪ ಅವರ ಉಪಸ್ಥಿತಿಯಲ್ಲಿ ನೆರವೇರಿಸಿದರು. ನಾವು ಇತರ ಭಾಷಿಕರೊಂದಿಗೆ ಕನ್ನಡದಲ್ಲಿ ಮಾತನಾಡುವ ಮೂಲಕ ನಮ್ಮ ಅಭಿಮಾನವನ್ನು ಮೆರೆಯಬೇಕಾಗಿದೆ. ಪ್ರತಿಯೊಬ್ಬರಿಗೂ ಭಾಷೆಯ ಬಗ್ಗೆ ಮತ್ತು ಈ ನೆಲದ ಸಂಸ್ಕೃತಿಯ ಬಗ್ಗೆ ತಿಳಿಸುವ ಆದ್ಯ ಕರ್ತವ್ಯ ಇದೆ ಎಂಬ ಎಚ್ಚರಿಕೆ ಮನದಲ್ಲಿ ಇದ್ದಾಗ ಮತ್ತು ಆ ಅಭಿಮಾನದಿಂದ ಕನ್ನಡದ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಕನ್ನಡ ಭಾಷೆ ಮತ್ತಷ್ಟು ಸಮೃದ್ಧಿಯಾಗಲಿದೆ ಎಂದು ಹಿರಿಯ ವೈದ್ಯ ಶಿವಪ್ಪ ಅಭಿಪ್ರಾಯಪಟ್ಟರು.
ಕೊಡಗು ಕೇರಳದ ಗಡಿ ಪ್ರದೇಶದಲ್ಲಿರುವುದರಿಂದ ಹೆಚ್ಚಾಗಿಯೇ ಮಲಯಾಳ ಭಾಷೆಯ ಪ್ರಭಾವ ಬೀರುತ್ತದೆ. ಕೇರಳ ರಾಜ್ಯದ ವ್ಯಾಪಾರೀಕರಣಕ್ಕೆ ಬಂದ ವ್ಯಕ್ತಿಗಳು ತಮ್ಮ ಭಾಷೆಯಲ್ಲಿಯೇ ಇಲ್ಲಿ ಪ್ರತಿಷ್ಠಾಪಿಸಲು ಹಾತೊರೆಯುತ್ತಾರೆ. ಅಂತಹ ಮನೋಭಾವವನ್ನು ಕನ್ನಡಿಗರು ಕೂಡ ಬೆಳೆಸಿಕೊಂಡು ಕನ್ನಡವನ್ನು ಪರಭಾಷಿಕರಿಗೆ ಕಲಿಸುವ ಮೂಲಕ ಕನ್ನಡತನವನ್ನು ಎತ್ತಿ ಹಿಡಿಯಬೇಕು ಎಂದು ಕರೆ ನೀಡಿದರು. ಗೌರವ ಅಧ್ಯಕ್ಷ ಕೆ.ಪಿ. ಬೋಪಣ್ಣ ಮಾತನಾಡಿ, ಪ್ರತಿನಿತ್ಯ ವ್ಯವಹಾರದಲ್ಲಿ ಅತಿ ಹೆಚ್ಚಾಗಿ ಕನ್ನಡವನ್ನು ಬಳಸುವುದು ಆಟೋ ಚಾಲಕರಾಗಿದ್ದಾರೆ ಎಂದು ಹೇಳಲು ಹೆಮ್ಮೆಯಾಗುತ್ತದೆ. ಪ್ರತಿಯೊಬ್ಬರೂ ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಚಿಂತನೆ ಹರಿಸಿದಾಗ ಮತ್ತು ಕನ್ನಡ ತನ್ನದು ಎಂಬ ಭಾವನೆಯನ್ನು ಮೈಗೂಡಿಸಿಕೊಂಡಾಗ ಕನ್ನಡ ಭಾಷೆ ಈ ನೆಲದ ಸಂಸ್ಕöÈತಿ ಪ್ರಪಂಚದಾದ್ಯAತ ಪಸರಿಸುತ್ತದೆ ಎಂದು ಹೇಳಿದರು. ಉಪಾಧ್ಯಕ್ಷರುಗಳಾದ ವಿ.ಸಿ. ಪ್ರದೀಪ್, ಸಿ.ವಿ. ಜೋನಿ, ಕಾರ್ಯದರ್ಶಿ ಕೆ.ವಿ. ಸುರೇಶ್, ನಿರ್ದೇಶಕ ಕೆ.ವೈ. ಅಶ್ವತ್, ಗಾಂಧಿ ಸೇರಿದಂತೆ ಪದಾಧಿಕಾರಿಗಳು, ಸಂಘದ ಸದಸ್ಯರುಗಳು ಇದ್ದರು.ಮುಳ್ಳೂರು: ಶನಿವಾರಸಂತೆ ವಿಘ್ನೇಶ್ವರ ಆಟೋ ಚಾಲಕರ ಸಂಘದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ಫರ್ಜಾನ್ ಶಾಹಿದ್ ಖಾನ್ ಕನ್ನಡ ಧ್ವಜರೋಹಣ ನೆರವೇರಿಸಿದರು.
ದಿನದ ಮಹತ್ವ ಕುರಿತು ಶನಿವಾರಸಂತೆ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಹರೀಶ್ ಮಾತನಾಡಿದರು. ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಎಸ್.ಆರ್. ಮಧು, ಎಸ್.ಸಿ. ಶರತ್ಶೇಖರ್, ಎಸ್.ಎನ್. ರಘು, ಆದಿತ್ಯಗೌಡ, ಸರೋಜಶೇಖರ್, ಕಸಾಪ ಹೋಬಳಿ ಅಧ್ಯಕ್ಷ ಬಿ.ಬಿ. ನಾಗರಾಜ್, ವರ್ತಕರಾದ ಶ್ರೀನಿವಾಸ್, ನವೀನ್, ರಾಜಶೇಖರ್, ಆಟೋ ಚಾಲಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು. ಇದೆ ಸಂದರ್ಭದಲ್ಲಿ ಶನಿವಾರಸಂತೆ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಗೋಣಿಕೊಪ್ಪಲು: ಗೋಣಿಕೊಪ್ಪಲುವಿನ ಸಂತ ಥೋಮಸ್ ಶಾಲೆಯಲ್ಲಿ ೬೭ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಮಕ್ಕಳಿಂದ ಕನ್ನಡ ನಾಡು, ನುಡಿ, ನೆಲದ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪೊನ್ನಂಪೇಟೆ ಹೋಬಳಿ ಗೋಣಿಕೊಪ್ಪಲುವಿನ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ರೆ. ಫಾದರ್ ಜಾರ್ಜ್, ಶಾಲೆಯ ಕಾರ್ಯನಿರ್ವಹಣಾಧಿಕಾರಿ ರೆ. ಫಾದರ್ ಫ್ರಾನ್ಸಿಸ್, ಶಾಲಾ ವ್ಯವಸ್ಥಾಪಕ ರೆ. ಫಾದರ್ ಎಲಕ್ಸ್, ಸಂತ ಥೋಮಸ್ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ.ಕೆ. ಪ್ರವೀಣ್, ಸಂಘದ ಖಜಾಂಚಿ ಚಂದನ್ ಕಾಮತ್ ಭಾಗವಹಿಸಿದ್ದರು.