ವೀರಾಜಪೇಟೆ, ನ. ೪: ಜಿಲ್ಲೆಯ ಮಂದ್ ಮಾನಿ ಹಾಗೂ ಊರು ನಾಡಿನಲ್ಲಿ ದೇವಸ್ಥಾನಗಳಿರುವ ದೇವರ ಕಾಡುಗಳನ್ನು ಆಯಾಯ ಊರು, ನಾಡುಗಳ ತಕ್ಕ ಮುಖ್ಯಸ್ಥರ ಹೆಸರಿಗೆ ಪಹಣಿಪತ್ರ ಮಾಡಲು ಅಖಿಲ ಕೊಡವ ಸಮಾಜ, ಯೂತ್ ವಿಂಗ್ ಹಾಗೂ ಪೊಮ್ಮಕ್ಕಡ ಪರಿಷತ್ ಒತ್ತಾಯಿಸಿದೆ.

ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ, ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಕೊಡವರ ಶ್ರೀಮಂತ ಸಂಸ್ಕöÈತಿ ಈ ಮಂದ್ ಮಾನಿಗಳಲ್ಲಿ ಅಡಗಿದೆ. ಮಂದ್ ಮಾನಿಗಳು ಉಳಿದರೆ ಮಾತ್ರ ಈ ಸಂಸ್ಕöÈತಿ ಉಳಿಯಲು ಸಾಧ್ಯ. ಅದೆಷ್ಟೋ ಮಂದ್ ಮಾನಿ ಹಾಗೂ ದೇವರಕಾಡುಗಳು ಒತ್ತುವರಿಯಾಗಿ ಉಳಿದಿರುವುದು ಅಲ್ಪಸ್ವಲ್ಪ ಅಷ್ಟೆ. ಇಂದು ಬಹುತೇಕ ಮಂದ್ ಮಾನಿ ದೇವರಕಾಡುಗಳು ಸರಕಾರದ ಸ್ವತ್ತು ಎಂದು ಆರ್‌ಟಿಸಿಗಳಲ್ಲಿ ನಮೂದಿಸ ಲಾಗಿದ್ದರು ಅನಾದಿಕಾಲದಿಂದಲೂ ಇದನ್ನು ಉಳಿಸಿ ಬೆಳೆಸಿಕೊಂಡು ಬಂದವರು ಆಯಾಯ ಊರು ವೀರಾಜಪೇಟೆ, ನ. ೪: ಜಿಲ್ಲೆಯ ಮಂದ್ ಮಾನಿ ಹಾಗೂ ಊರು ನಾಡಿನಲ್ಲಿ ದೇವಸ್ಥಾನಗಳಿರುವ ದೇವರ ಕಾಡುಗಳನ್ನು ಆಯಾಯ ಊರು, ನಾಡುಗಳ ತಕ್ಕ ಮುಖ್ಯಸ್ಥರ ಹೆಸರಿಗೆ ಪಹಣಿಪತ್ರ ಮಾಡಲು ಅಖಿಲ ಕೊಡವ ಸಮಾಜ, ಯೂತ್ ವಿಂಗ್ ಹಾಗೂ ಪೊಮ್ಮಕ್ಕಡ ಪರಿಷತ್ ಒತ್ತಾಯಿಸಿದೆ.

ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ, ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಕೊಡವರ ಶ್ರೀಮಂತ ಸಂಸ್ಕöÈತಿ ಈ ಮಂದ್ ಮಾನಿಗಳಲ್ಲಿ ಅಡಗಿದೆ. ಮಂದ್ ಮಾನಿಗಳು ಉಳಿದರೆ ಮಾತ್ರ ಈ ಸಂಸ್ಕöÈತಿ ಉಳಿಯಲು ಸಾಧ್ಯ. ಅದೆಷ್ಟೋ ಮಂದ್ ಮಾನಿ ಹಾಗೂ ದೇವರಕಾಡುಗಳು ಒತ್ತುವರಿಯಾಗಿ ಉಳಿದಿರುವುದು ಅಲ್ಪಸ್ವಲ್ಪ ಅಷ್ಟೆ. ಇಂದು ಬಹುತೇಕ ಮಂದ್ ಮಾನಿ ದೇವರಕಾಡುಗಳು ಸರಕಾರದ ಸ್ವತ್ತು ಎಂದು ಆರ್‌ಟಿಸಿಗಳಲ್ಲಿ ನಮೂದಿಸ ಲಾಗಿದ್ದರು ಅನಾದಿಕಾಲದಿಂದಲೂ ಇದನ್ನು ಉಳಿಸಿ ಬೆಳೆಸಿಕೊಂಡು ಬಂದವರು ಆಯಾಯ ಊರು ಸುತ್ತಮುತ್ತಲ ಆರು ಗ್ರಾಮಗಳಾದ ಹುದೂರು, ಹಳ್ಳಿಗಟ್ಟು, ಈಚೂರು, ಕುಂದಾ, ಅರ್ವತೋಕ್ಲು ಹಾಗೂ ಮುಗುಟಗೇರಿ ಗ್ರಾಮಗಳಿಗೆ ಸೇರಿದ ಇತಿಹಾಸ ಪ್ರಸಿದ್ಧ ‘‘ದೇವಮಕ್ಕಡ ಬಾಣೆ ಕೋಲ್ ಮಂದ್'' ನಲ್ಲಿ ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ತಕ್ಕ ಮುಖ್ಯಸ್ಥರ ಗಮನಕ್ಕೆ ಬಾರದಂತೆ ನೀರಿನ ಟ್ಯಾಂಕ್ ನಿರ್ಮಿಸಲು ಹೊರಟ ಕ್ರಮವನ್ನು ಅಖಿಲ ಕೊಡವ ಸಮಾಜ ಹಾಗೂ ಇದರ ಅಂಗಸAಸ್ಥೆಗಳು ಖಂಡಿಸುತ್ತವೆ. ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಊರು ನಾಡಿನವರೊಂದಿಗೆ ನಾವು ಕೂಡ ಕೈಜೋಡಿಸುತ್ತೇವೆ ಎಂಬ ಸ್ಪಷ್ಟ ಎಚ್ಚರಿಕೆಯನ್ನು ಈ ಮೂಲ ನೀಡುತ್ತಿದ್ದೇವೆ. ಈ ಕೂಡಲೇ ಜಿಲ್ಲೆಯ ವಿವಿಧೆಡೆ ಇರುವ ಮಂದ್ ಮಾನಿ ಹಾಗೂ ದೇವಸ್ಥಾನಗಳಿರುವ ದೇವರಕಾಡುಗಳನ್ನು ಆಯಾಯ ಊರು ನಾಡಿನ ತಕ್ಕಮುಖ್ಯಸ್ಥರ ಹೆಸರಲ್ಲಿ ಆರ್.ಟಿ.ಸಿಗಳಲ್ಲಿ ನಮೂದಿಸ ಬೇಕು ಎಂದು ಒತ್ತಾಯಿಸಿದೆ.