ಗೋಣಿಕೊಪ್ಪಲು, ನ. ೩: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ದಿ. ಪಾಂಡAಡ ಕುಟ್ಟಪ್ಪ ಸ್ಮರಣಾರ್ಥ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ೮ನೇ ದಿನದಾಟದಲ್ಲಿ ಕಲಿಯಂಡ ತಂಡ ಪ್ರಿ ಕ್ವಾರ್ಟರ್‌ಗೆ ಲಗ್ಗೆ ಇಟ್ಟರೆ, ೧೧ ತಂಡಗಳು ಮುನ್ನಡೆ ಪಡೆದುಕೊಂಡವು.

ಕಲಿಯAಡ ತಂಡ ಮಾಚಿಮಾಡ ತಂಡವನ್ನು ೫-೩ ಗೋಲುಗಳಿಂದ ಸೋಲಿಸಿ ಪ್ರಿ ಕ್ವಾರ್ಟರ್‌ಗೆ ದಾಪುಗಾಲಿಟ್ಟಿತು. ಕಲಿಯಂಡ ಕಿರಣ್ ೩, ಬಿದ್ದಪ್ಪ, ಕಾರ್ಯಪ್ಪ ತಲಾ ೧ ಗೋಲು ಗಳಿಸಿದರು.

ಮಾಚಿಮಾಡ ಮಂದಣ್ಣ ೨, ಚರಣ್ ೧ ಗೋಲು ಗಳಿಸಿದರು. ಮಚ್ಚಾರಂಡ ತಂಡ ಪೊನ್ನಿಮಾಡ ತಂಡದ ವಿರುದ್ಧ ೯-೩ ಗೋಲುಗಳ ಜಯಭೇರಿ ಬಾರಿಸಿತು. ಮಚ್ಚಾರಂಡ ತಮ್ಮಯ್ಯ, ಗಗನ್ ತಲಾ ೪, ಮೊಣ್ಣಪ್ಪ ೧, ಪೊನ್ನಿಮಾಡ ಸಂತೋಷ್ ೩ ಗೋಲು ಹೊಡೆದರು.

ಅಪ್ಪಂಡೇರAಡ, ಮೇರಿಯಂಡ ವಿರುದ್ಧ ೭-೬ ಗೋಲುಗಳ ರೋಚಕ ಜಯ ಸಾಧಿಸಿತು. ಅಪ್ಪಂಡೇರAಡ ಬೋಪಣ್ಣ ೬ ಗೋಲು ಗಳಿಸಿ ಮಿಂಚಿದರು. ಪೂವಯ್ಯ ೧ ಗೋಲು ಹೊಡೆದರು. ಮೇರಿಯಂಡ ರಾಯ್ ಅಯ್ಯಣ್ಣ ೬ ಗೋಲು ಬಾರಿಸಿ ಸೋಲಿನ ಅಂತರ ತಗ್ಗಿಸಿದರು.

ಕಲಿಯಂಡ, ಮಣವಟ್ಟಿರ ತಂಡದ ವಿರುದ್ಧ ೬-೧ ಗೋಲುಗಳ ಜಯ ಸಾಧಿಸಿತು. ಕಲಿಯಂಡ ಕಾರ್ಯಪ್ಪ ೨, ಮಾಚಯ್ಯ, ಕಿರಣ್, ಬಿದ್ದಪ್ಪ, ಮುತ್ತಪ್ಪ ತಲಾ ೧ ಗೋಲು ಬಾರಿಸಿದರು. ಮಣವಟ್ಟಿರ ಪರ ಅಯ್ಯಪ್ಪ ಏಕೈಕ ಗೋಲು ಹೊಡೆದರು.

ಮಾಚಿಮಾಡ ತಂಡ ಕಾಡ್ಯಮಡ ತಂಡವನ್ನು ೬-೩ ಗೋಲಿನಿಂದ ಮಣಿಸಿತು. ಮಾಚಿಮಾಡ ಕಾರ್ಯಪ್ಪ ೩, ಮಂದಣ್ಣ ೨, ಚರಣ್ ೧, ಕಾಡ್ಯಮಡ ಚಿಣ್ಣಪ್ಪ ೩ ಗೋಲು ಹೊಡೆದರು. ಕೋಟೆರ, ಐತಿಚಂಡ ವಿರುದ್ಧ ೧೧-೩ ಗೋಲುಗಳ ಅಂತರದ ಜಯ ಸಾಧಿಸಿತು. ಕೋಟೆರ ಕೌಶಿಕ್ ೭, ಭರತ್ ೨, ನಿಖಿಲ್, ನಾಣಯ್ಯ, ಐತಿಚಂಡ ಸಜನ್, ಮಂದಣ್ಣ, ಪೊನ್ನಪ್ಪ ತಲಾ ೧ ಗೋಲು ಹೊಡೆದರು.

ಪೊನ್ನೋಲತಂಡ, ಕುಕ್ಕೆರ ವಿರುದ್ಧ ೮-೪ ಗೋಲುಗಳ ಜಯ ದಾಖಲಿಸಿತು. ಪೊನ್ನೋಲತಂಡ ನಾಣಯ್ಯ, ಶರತ್ ತಲಾ ೩, ಅಶ್ವಿನ್ ೨, ಕುಕ್ಕೆರ ಸುಬ್ಬಯ್ಯ ೨, ಚಂಗಪ್ಪ, ಮಂದಣ್ಣ ತಲಾ ೧ ಗೋಲು ಬಾರಿಸಿದರು. ಅರೆಯಡ ವಿರುದ್ಧ ಕಾಡೆಮಡ ೪-೩ ಗೋಲುಗಳ ರೋಚಕ ಜಯ ಪಡೆಯಿತು. ಕಾಡೆಮಡ ಚರ್ಮಣ ೨, ಕುಶಾಲಪ್ಪ, ಪೂವಣ್ಣ ತಲಾ ೧, ಅರೆಯಡ ಗಣೇಶ್, ಚಮನ್, ಶ್ರವಣ್ ತಲಾ ೧ ಗೋಲು ಹೊಡೆದರು. ಕುಂಬೆರ ವಿರುದ್ಧ ಪಾಂಡAಡ ೧೨-೩ ಗೋಲುಗಳ ಜಯಭೇರಿ ಬಾರಿಸಿತು.

ಪಾಂಡAಡ ಬೋಪಣ್ಣ ೪, ಕಾರ್ಲ್ ಕಾರ್ಯಪ್ಪ, ದೇಚಮ್ಮ ೩, ಅಯ್ಯಪ್ಪ, ನಾಣಯ್ಯ ತಲಾ ೧, ಕುಂಬೆರ ಪ್ರಶಿದ್, ಚಿಣ್ಣಪ್ಪ, ಅದ್ವೆöÊತ್ ತಲಾ ೧ ಗೋಲು ಗಳಿಸಿದರು.

ಪೊರ್ಕೊಂಡ, ಚೆಯ್ಯಂಡ ವಿರುದ್ಧ ೧೨-೨ ಗೋಲುಗಳ ಭರ್ಜರಿ ಜಯ ಸಾಧಿಸಿತು. ಪೊರ್ಕೊಂಡ ಅನಿಲ್ ೮ ಗೋಲು ಗಳಿಸಿ ಸಂಚಲನ ಮೂಡಿಸಿದರು. ಲವ ೩, ಚಂಗಪ್ಪ ೧ ಗೋಲು ಗಳಿಸಿದರು. ಚೆಯ್ಯಂಡ ಮಂಜು, ಶಂಕರಿ ತಲಾ ೧ ಗೋಲು ಹೊಡೆದರು. ಪುಚ್ಚಿಮಡ, ಮುದ್ದಂಡ ವಿರುದ್ಧ ೧೨-೧ ಗೋಲುಗಳ ಜಯಭೇರಿ ಬಾರಿಸಿತು. ಪುಚ್ಚಿಮಡ ಭವನ್ ೬, ಯಶ್ವಿನ್ ೪, ವಿವತ್ ೨, ಮುದ್ದಂಡ ಸುಬ್ಬಯ್ಯ ೧ ಗೋಲು ಹೊಡೆದರು. ಚೆರಿಯಂಡ ವಿರುದ್ಧ ಮುಕ್ಕಾಟಿರ (ಪುಲಿಕೋಟ್) ೪-೨ ಗೋಲುಗಳ ಜಯಸಾಧಿಸಿತು. ಮುತ್ತಪ್ಪ ೩, ಮಾಚಯ್ಯ ೧, ಚೆರಿಯಂಡ ತನಿಷ್, ದೀಪು ತಲಾ ೧ ಗೋಲು ಹೊಡೆದರು.

-ಹೆಚ್.ಕೆ. ಜಗದೀಶ್