ಪೊನ್ನAಪೇಟೆ, ನ.೩ : ಮಾಲೀಕರು ಮನೆಯಲ್ಲಿಲ್ಲದ ಸಂದರ್ಭ ಗೋದಾಮಿನಲ್ಲಿದ್ದ ಕರಿಮೆಣಸು ಕಳವು ಮಾಡಿ ಮಾರಾಟ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊನ್ನಂಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಾಳೆಲೆ ಸಮೀಪದ ಕೈನಾಟಿ ಗ್ರಾಮದ ಆದೇಂಗಡ ವಿಜಯ ಕುಮಾರ್ ಎಂಬವರ ತೋಟದಲ್ಲಿ ರೈಟರ್ ಕೆಲಸ ಮಾಡುತ್ತಿದ್ದ ವೆಂಕಟೇಶ್ ಮತ್ತು ಕೆಲಸಗಾರ ಸುರೇಶ್ ಎಂಬವರು ಕರಿಮೆಣಸು ಕಳವು ಮಾಡಿ ಸಿಕ್ಕಿಬಿದ್ದ ಆರೋಪಿಗಳಾಗಿದ್ದಾರೆ.
ಘಟನೆಯ ವಿವರ
ಆದೇಂಗಡ ವಿಜಯಕುಮಾರ್ ಅವರು ಚಿಕಿತ್ಸೆಗಾಗಿ ಕೆಲವು ದಿನಗಳ ಹಿಂದೆ ಕುಟುಂಬ ಸಮೇತ ಬೆಂಗಳೂರಿಗೆ ತೆರಳಿದ್ದರು. ತೋಟದ ಕೆಲಸಕಾರ್ಯಗಳನ್ನು ಮ್ಯಾನೇಜರ್ ನೋಡಿಕೊಳ್ಳುತ್ತಿದ್ದರು. ಚಿಕಿತ್ಸೆ ಮುಗಿದ ನಂತರ ಅಕ್ಟೋಬರ್ ೨೭ ಮನೆಗೆ ಬಂದ ವಿಜಯಕುಮಾರ್ ರವರು, ಮನೆಯ ಸಮೀಪ ಇರುವ ಗೋದಾಮಿನ ಮುಂಭಾಗ ಕರಿಮೆಣಸು ಚೆಲ್ಲಿರುವುದನ್ನು ನೋಡಿ ಸಂಶಯಗೊAಡು, ಗೋದಾಮಿನ ಬಾಗಿಲು ತೆರೆದು ನೋಡಿದ್ದಾರೆ. ಈ ಸಂದರ್ಭ ಗೋದಾಮಿನಲ್ಲಿದ ೧೩೬ ಚೀಲಗಳ ಪೈಕಿ ೩ ಚೀಲಗಳು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ನಂತರ ಕೆಲಸಗಾರರನ್ನು ವಿಚಾರಿಸಿದಾಗ ರೈಟರ್ ಕೆಲಸ ಮಾಡುತಿದ್ದ ವೆಂಕಟೇಶ್ ಕಳೆದ ೧೦ ದಿನದಿಂದ ಕೆಲಸಕ್ಕೆ ಬಂದಿಲ್ಲ ಎಂಬ ಮಾಹಿತಿ ದೊರೆಯುತ್ತದೆ. ವೆಂಕಟೇಶನೇ ಕಳವು ಮಾಡಿರಬಹುದು ಎಂಬ ಸಂಶಯದ ಮೇರೆಗೆ ವಿಜಯ ಕುಮಾರ್ ಅವರ ಮಗ ಆದರ್ಶ್ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಈ ಸಂಬAಧ ಪ್ರಕರಣ ದಾಖಲಿಸಿಕೊಂಡ ಪೊನ್ನಂಪೇಟೆ ಪೊಲೀಸರು, ಬಾಳೆಲೆ ಗಂಧದಗುಡಿ ಪೈಸಾರಿಯ ವೆಂಕಟೇಶನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ, ವಿಜಯಕುಮಾರ್ ಅವರ ಲೈನ್ ಮನೆಯಲ್ಲಿದ್ದ ಕೆಲಸಗಾರ ಸುರೇಶ್ ಎಂಬವನೊAದಿಗೆ ಸೇರಿ ಕರಿಮೆಣಸು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿಗಳು ಗೋಣಿಕೊಪ್ಪಲು ಅಂಗಡಿಯೊAದಕ್ಕೆ ಮಾರಾಟಮಾಡಿದ್ದನ್ನು ಪತ್ತೆ ಹಚ್ಚಿ ರೂ.೬೧,೨೫೦ ಮೌಲ್ಯದ ೧೨೫ ಕೆಜಿ ಕರಿ ಮೆಣಸು ಹಾಗೂ ಸಾಗಾಟಕ್ಕೆ ಬಳಸಿದ್ದ ಪಲ್ಸರ್ ಬೈಕ್ (ಕೆ.ಎ.೦೬, ಇಡಿ.೮೧೧೫) ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೊಡಗು ಎಸ್.ಪಿ. ಮಲ್ಚೀರ ಅಯ್ಯಪ್ಪ ಅವರ ನಿರ್ದೇಶನದ ಮೇರೆಗೆ, ಡಿವೈಎಸ್ಪಿ ನಿರಂಜನರಾಜೇ ಅರಸ್ ಹಾಗೂ ಸಿಐ ಗೋವಿಂದ ರಾಜು ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊನ್ನಂಪೇಟೆ ಠಾಣಾಧಿಕಾರಿ ಹೆಚ್.ಸಿ. ಸುಬ್ರಮಣ್ಯ, ಸಿಬ್ಬಂದಿ ಮಹದೇಶ್ವರ ಸ್ವಾಮಿ, ಪ್ರಮೋದ್, ಜೀವನ್ ಇನ್ನಿತರರು ಭಾಗವಹಿಸಿದ್ದರು.
ಆರೋಪಿಗಳು ಅಂಗಡಿ ಮಾಲೀಕರಿಗೆ ನಮ್ಮ ತೋಟದಲ್ಲಿ ಬೆಳೆದಿರುವ ಕರಿ ಮೆಣಸು ಎಂದು ಸುಳ್ಳು ಮಾಹಿತಿ ನೀಡಿ ಮಾರಾಟ ಮಾಡಿದ್ದು, ಇಂತವರ ಬಗ್ಗೆ ಎಚ್ಚರಿಕೆಯಿಂದಿರುವAತೆ ಹಾಗೂ ತೋಟದ ಮಾಲೀಕರು ಸಿ ಸಿ ಕ್ಯಾಮರ ಅಳವಡಿಸಿಕೊಳ್ಳುವಂತೆ ಠಾಣಾಧಿಕಾರಿ ಹೆಚ್.ಸಿ.ಸುಬ್ರಮಣ್ಯ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.