ಶನಿವಾರಸAತೆ, ನ. ೩: ಮರ ಕಡಿಯುವ ಸಂದರ್ಭ ಮರದಿಂದ ಬಿದ್ದು ಕಾರ್ಮಿಕನೋರ್ವ ಗಾಯಗೊಂಡ ಘಟನೆ ಮಾಲಂಬಿ ಗ್ರಾಮದಲ್ಲಿ ನಡೆದಿದೆ. ಮಾಲಂಬಿಯ ರೂಪೇಶ್ (೨೮) ಗಾಯಗೊಂಡ ವ್ಯಕ್ತಿ.

ಕಾಫಿ ತೋಟದಲ್ಲಿ ಸಿಲ್ವರ್ ಮರದ ಕೊಂಬೆಗಳನ್ನು ಕಡಿಯುವ ಸಂದರ್ಭ ಗಾಳಿಗೆ ಕೊಂಬೆಯೊAದು ತಿರುಗಿದಾಗ ತಪ್ಪಿಸಿಕೊಳ್ಳಲು ಪಕ್ಕದ ಅಡಿಕೆ ಮರಕ್ಕೆ ದಾಟಿದಾಗ ಕೊಂಬೆ ತಲೆಯ ಮೇಲೆ ಬಿದ್ದಿದೆ. ಪರಿಣಾಮ ೨೦ ಅಡಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ.

ಕೆಳಗೆ ಬಿದ್ದ ರೂಪೇಶನ ೨ ಹಲ್ಲು ಮುರಿದಿದ್ದು, ಸೊಂಟ ಹಾಗೂ ತಲೆ ಭಾಗಕ್ಕೆ ಗಂಭೀರವಾಗಿ ಗಾಯವಾಗಿದೆ. ಗಾಯಾಳುವನ್ನು ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ, ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹಾಸನ ಆಸ್ಪತ್ರೆಗೆ ಕರೆದೊಯ್ದು ವೈದ್ಯರ ಸಲಹೆ ಮೇರೆಗೆ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.