ಮಡಿಕೇರಿ, ನ. ೩ : ಭಾಗಮಂಡಲ - ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಶಾಸ್ತçಸಿದ್ಧ ಶ್ರೀಕೃಷ್ಣ ಪಂಚಾAಗದAತೆ ತಾ. ೮ ರಂದು ಮಧ್ಯಾಹ್ನ ೨.೩೯ ನಿಮಿಷಕ್ಕೆ ಗ್ರಸ್ತೋದಯ ಖಗ್ರಾಸ ಚಂದ್ರಗ್ರಹಣ ಪ್ರಾರಂಭಗೊAಡು ಸಾಯಂಕಾಲ ೬.೧೯ ನಿಮಿಷಕ್ಕೆ ಗ್ರಹಣ ಮೋಕ್ಷವಾಗುತ್ತದೆ.

ಇದರಿಂದ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯಗಳ ರೂಢಿ ಸಂಪ್ರದಾಯದAತೆ ಪಿಂಡಪ್ರದಾನ ಕಾರ್ಯ ಮತ್ತು ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯಗಳಲ್ಲಿ ಸಾರ್ವಜನಿಕ ಭಕ್ತಾದಿಗಳಿಗೆ ಯಾವುದೇ ಸೇವೆ ಮತ್ತು ದೇವರ ದರ್ಶನ ಹಾಗೂ ಮಾಸಿಕವಾಗಿ ಜರುಗುವ ಸಾಮೂಹಿಕ ಸತ್ಯ ನಾರಾಯಣ ಪೂಜೆಗೆ ಅವಕಾಶವಿರುವುದಿಲ್ಲ. ಆದ್ದರಿಂದ ಭಕ್ತಾದಿಗಳು ಎಂದಿನAತೆ ಸಹಕರಿಸುವಂತೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಬಿ.ಎಂ. ತಿಳಿಸಿದ್ದಾರೆ.