ಕರುನಾಡ ವರದಾತೆ; ಸಿರಿಮಾತೆ; ತಾಯಿ ಕಾವೇರಿ ಮಾತೆಯ ಮಡಿಲು ಹಾಗೂ ಪರಶುರಾಮನ ನಾಡಿನ ಮಡಿಲಲ್ಲಿ ಬೆಳೆದ ಸಾವಿರಾರು ಗೌಡ ಜನಾಂಗದ ಮಕ್ಕಳು ಉದ್ಯೋಗವನ್ನರಸಿ ಪ್ರಪಂಚದ ನಾನಾ ಕಡೆ ನೆಲೆಸಲು ಪ್ರಾರಂಭಿಸಿದರು. ಹಾಗೆ ಹೋಗಿ ನೆಲೆಸಿದ್ದೆಲ್ಲೆಡೆ ತಮ್ಮ ತವರು ಜಿಲ್ಲೆಯ ಹಾಗೂ ತಾವು ಹುಟ್ಟಿದ ಜನಾಂಗದ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಹಾಗೂ ತನ್ನೊಡನೆ ಸಹೋದರತೆಯನ್ನು ಹಂಚಿಕೊAಡು ಬಂದಿರುವ ವಿವಿಧ ಜನಾಂಗಕ್ಕೆ ತಮ್ಮ ಸಂಸ್ಕೃತಿಯನ್ನು ಪರಿಚಯಿಸಲು ಕಲೆ, ಸಾಹಿತ್ಯ, ಕ್ರೀಡೆಗೆ ಪ್ರೋತ್ಸಾಹ ನೀಡಲು ಅವರದೇ ಆದ ಒಂದು ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡರು. ಹಾಗೆಯೇ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಮೊದಲ ಪಾತ್ರ ಮಹಿಳೆಯರದ್ದಾಗಿದೆ.

ಮುಂದಿನ ಪೀಳಿಗೆಗೆ ಸಂಸ್ಕೃತಿಯನ್ನು ಪರಬಾರೆ ಮಾಡುವ ಹೆಚ್ಚಿನ ಜವಾಬ್ದಾರಿ ಮಹಿಳೆಯರದ್ದು. ಜನಾಂಗದ ಮಹಿಳೆಯರು ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ, ಮುಂದಿನ ಪೀಳಿಗೆಗೆ ಪರಬಾರೆ ಮಾಡುವ ದೃಷ್ಟಿಯಿಂದ ಮೈಸೂರಿನಲ್ಲಿ ನೆಲೆಸಿರುವ ಕೊಡಗು ಮತ್ತು ದಕ್ಷಿಣಕನ್ನಡ ಗೌಡ ಜನಾಂಗದ ಮಹಿಳೆಯರು ೧೯೯೭ರ ಆಗಸ್ಟ್ ೧೭ ರಂದು ಪಟ್ಟಡ ಶೀಲಾಮಣಿಯವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಚರ್ಚಿಸಿ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಮಹಿಳಾ ಸಮಾಜದ ಹುಟ್ಟಿಗೆ ಮುನ್ನುಡಿ ಬರೆದರು.

ಮೊದಲ ಬಾರಿಗೆ ಎಲ್ಲರ ಒಮ್ಮತದ ಅಭಿಪ್ರಾಯದಂತೆ ಚೆರಿಯಮನೆ ಧನಲಕ್ಷಿö್ಮಯವರು ಅಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ, ದೇವಜನ ಗೀತಾ ಮೋಂಟಡ್ಕ, ಖಜಾಂಚಿಯಾಗಿ ಹೊಸೂರು ವಿಮಲ ಸೀತಾರಾಂ ಅವರು ಆಯ್ಕೆಯಾದರು. ಅನಂತರ ಪಟ್ಟಡ ಶೀಲಾಮಣಿಯವರು ಅಧ್ಯಕ್ಷರಾದರು ೨೦ ಜನ ಸದಸ್ಯರಾಗಿ ತಮ್ಮ ಅವಧಿಯಲ್ಲಿ ಉತ್ತಮ ಕೆಲಸ ನಿರ್ವಹಿಸುತ್ತಾ ಬಂದರು. ತದನಂತರ ಕುಂಬುಗೌಡನ ಮುತ್ತಮ್ಮ, ದಂಬೆಕೋಡಿ ಭಾಗೀರಥಿ, ಕೂಡಕಂಡಿ ಲಲಿತ ಉಳುವಾರನ ಘನು ಚಂದ್ರಶೇಖರ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಉತ್ತಮ ಕೆಲಸ ನಿರ್ವಹಿಸಿರುತ್ತಾರೆ. ಅನಂತರ ದೇವಜನ ಗೀತಾ ಮೋಂಟಡ್ಕರವರು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರ ಅಧ್ಯಕ್ಷತೆಯಲ್ಲಿ ಹತ್ತು ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಜನಾಂಗ ಬಾಂಧವರು ನಡೆಸಿಕೊಂಡು ಬರುತ್ತಿರುವ ಅನೇಕ ಸಂಸ್ಕೃತಿ, ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿಕೊಂಡು ಜನಾಂಗ ಬಾಂಧವರ ಒಡನಾಡಿಯಾಗಿ, ಉತ್ತಮ ಕೊಂಡಿಯಾಗಿ, ಜನಾಂಗದ ಮಹಿಳೆಯರಿಗೆ ಉತ್ತಮ ವೇದಿಕೆ ಕಲ್ಪಿಸಿಕೊಂಡು ಬರುತ್ತಿರುವ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಮಹಿಳಾ ಸಮಾಜಕ್ಕೆ ಈಗ ೨೫ ವರ್ಷ ತುಂಬಿ ಚೆಲುವಿನ ಯವ್ವನೆಯಂತೆ ಕಂಗೊಳಿಸಿ ಬೆಳ್ಳಿಹಬ್ಬವನ್ನು ಆಚರಿಸಿಕೊಳ್ಳುತ್ತಿದೆ.

ಹಾಗೆಯೇ ತನ್ನ ಹಬ್ಬದ ಸವಿನೆನಪಿಗಾಗಿ ‘ಸಂಬAಧ’ ಅನ್ನುವ ಸ್ಮರಣೆ ಸಂಚಿಕೆಯನ್ನು ಹೊರತರುತ್ತಿದೆ. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡAತೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ನಾಳೆ ಸಮಾರಂಭ

ತಾ. ೬ ರ ಭಾನುವಾರ ನಡೆಯುವ ಬೆಳ್ಳಿ ಹಬ್ಬದ ಕಾರ್ಯಕ್ರಮ ಸಮಾಜದ ಅಧ್ಯಕ್ಷೆ ದೇವಜನ ಗೀತಾ ಮೋಂಟಡ್ಕರವರ ಅಧ್ಯಕ್ಷತೆಯಲ್ಲಿ ನಡೆಯುತ್ತದೆ. ಉದ್ಘಾಟಕರಾಗಿ ಲೀಲಾವತಿ ಪಿ.ಎಸ್. , ಸಹಾಯಕ ನಿರ್ದೇಶಕರು, ಪ್ರಧಾನಮಂತ್ರಿ ಪೋಷಣೆ ಶಕ್ತಿ ನಿರ್ಮಾಣ್ ಯೋಜನೆ ಬೆಂಗಳೂರು. ಸ್ಮರಣ ಸಂಚಿಕೆ ಬಿಡುಗಡೆ ಸುಲೋಚನ ಕೆ.ಎಂ. ಹೆಚ್ಚುವರಿ ಆಯುಕ್ತರು ವಾಣಿಜ್ಯ ತೆರಿಗೆ ಇಲಾಖೆ ಬೆಂಗಳೂರು. ಮುಖ್ಯ ಅತಿಥಿಗಳಾಗಿ ಅಚ್ಚುಡ ಆರತಿ ಹರೀಶ್ ಸಂಸ್ಥಾಪಕರು ಮತ್ತು ಮುಖ್ಯಸ್ಥರು ಸಾದ್ಯ ಟ್ರಸ್ಟ್ ಫಾರ್ ಸೋಶಿಯಲ್ ಡೆವಲಪ್‌ಮೆಂಟ್. ಹೊಸಪೇಟೆ ಈ ಕಾರ್ಯಕ್ರಮ ಕೊಡಗು ಗೌಡ ಸಮಾಜ ವಿಜಯನಗರ ೨ನೇ ಹಂತ ಹೆಬ್ಬಾಳ್, ಮೈಸೂರ್ ಇಲ್ಲಿ ಹಮ್ಮಿಕೊಳ್ಳಲಾಗಿದೆ.

ಅಧ್ಯಕ್ಷೆ ದೇವಜನ ಗೀತಾ ಮೋಂಟಡ್ಕ, ಪ್ರಧಾನ ಕಾರ್ಯದರ್ಶಿ ಕೊಡಗನ ಅನುಕಿಶೋರ್, ಖಜಾಂಚಿ ನಡುವಟ್ಟಿರ ಗೀತಾ ಲಕ್ಷö್ಮಣ ಮತ್ತು ನಿರ್ದೇಶಕರ ಪರಿಶ್ರಮದೊಂದಿಗೆ ನಡೆಯುತ್ತಿರುವ ಬೆಳ್ಳಿ ಹಬ್ಬದ ಸಂಭ್ರಮಕ್ಕೆ ಶುಭ ಹಾರೈಸೋಣ.

-ಪುದಿಯನೆರವನ

ರೇವತಿ ರಮೇಶ್, ಮಡಿಕೇರಿ