ಗೋಣಿಕೊಪ್ಪಲು, ನ. ೩: ಪೊನ್ನಂಪೇಟೆ ತಾಲೂಕು ಕಚೇರಿಗೆ ಮಂಜೂರಾಗಿರುವ ಸಿಬ್ಬಂದಿಗಳ ಪೈಕಿ ಓರ್ವ ಗುಮಾಸ್ತರು ಹಾಗೂ ೨ ಡಾಟ ಆಪರೇಟರ್ ನೇಮಕ ಮಾಡಲು ಬಾಕಿ ಇರುತ್ತದೆ. ಇದನ್ನು ಕೂಡಲೇ ನೇಮಕ ಮಾಡುವಂತೆ ಪೊನ್ನಂಪೇಟೆ ನಾಗರಿಕ ವೇದಿಕೆಯ ಅಧ್ಯಕ್ಷ ವಾಸು ಉತ್ತಪ್ಪ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಈ ಬಗ್ಗೆ ನಾಗರಿಕ ವೇದಿಕೆಯ ಪದಾಧಿಕಾರಿಗಳು ಲಿಖಿತ ಹೇಳಿಕೆ ನೀಡಿದ್ದು ಕಚೇರಿಯಲ್ಲಿ ಭೂಮಿ ಕೇಂದ್ರವನ್ನು ಕೂಡಲೇ ಅಳವಡಿಸಬೇಕು. ಈಗಾಗಲೇ ನಾಗರಿಕ ವೇದಿಕೆಯು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಇಲ್ಲಿಯ ವಸ್ತು ಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದೆ. ವೀರಾಜಪೇಟೆ ತಾಲೂಕು ಕಚೇರಿಯಿಂದ ಪೊನ್ನಂಪೇಟೆ ತಾಲೂಕು ಕಚೇರಿಗೆ ಈ ಭಾಗಕ್ಕೆ ಸಂಬAಧಿಸಿದ ಹಳೆಯ ಕಡತ ಹಾಗೂ ರೆಕಾರ್ಡ್ಗಳನ್ನು ತರಲು ವ್ಯವಸ್ಥೆ ಕಲ್ಪಿಸಬೇಕು. ಭೂ ಮಾಪನ ಇಲಾಖೆಯವರು ೪ ಜನ ಸರ್ವೆಯರನ್ನು ಪೊನ್ನಂಪೇಟೆ ತಾಲೂಕಿಗೆ ನಿಯೋಜಿಸಿರುತ್ತಾರೆ.

ಇವರ ಶಾಖೆಗೆ ಸಂಬAಧಿಸಿದ ಭೂ ದಾಖಲೆಗಳನ್ನು ಭದ್ರವಾಗಿಡಲು ಪೊನ್ನಂಪೇಟೆ ತಾಲೂಕು ಕಚೇರಿಯಲ್ಲಿ ಒಂದು ಪ್ರತ್ಯೇಕ ಭದ್ರತಾ ಕೊಠಡಿಯನ್ನು ಒದಗಿಸಬೇಕು. ತಾಲೂಕು ಕಚೇರಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿಗಳು ಹಾಗೂ ತಹಶೀಲ್ದಾರರು ಕೆಲಸದ ವೇಳೆಯಲ್ಲಿ ಕಚೇರಿಗೆ ಬರುವ ಸಾರ್ವಜನಿಕ ಹಾಗೂ ರೈತರ ಅಹವಾಲುಗಳನ್ನು ಆಲಿಸುವಂತೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪೊನ್ನಂಪೇಟೆ ನಾಗರಿಕ ವೇದಿಕೆಯು ಸಮಗ್ರ ಮಾಹಿತಿಯನ್ನು ಒದಗಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿರುವುದಾಗಿ ವಾಸು ಉತ್ತಪ್ಪ ತಿಳಿಸಿದ್ದಾರೆ.