ಮಡಿಕೇರಿ, ನ. ೩ : ನಗರದ ಓಂಕಾರೇಶ್ವರ ದೇವಾಲಯದಲ್ಲಿ ತಾ. ೫ ರಂದು ‘ಉತ್ಥಾನ ದ್ವಾದಶಿ’ ಪ್ರಯುಕ್ತ ದೇವಾಲಯದ ರೂಢಿ ಸಂಪ್ರದಾಯದAತೆ ಸಂಜೆ ೬.೩೦ ರಿಂದ ೭.೩೦ ಗಂಟೆಯವರೆಗೆ “ತುಳಸಿ ಪೂಜೆ” ನಡೆಯಲಿದೆ.
ಪ್ರಸಾದ ಸೇವಾಕರ್ತರು ತಮ್ಮ ಹೆಸರನ್ನು ದೇವಾಲಯದಲ್ಲಿ ನೋಂದಾಯಿಸುವ ಮೂಲಕ ಸೇವೆಯನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕ ಭಕ್ತಾದಿಗಳು ದೇವಾಲಯದಲ್ಲಿ ನಡೆಯಲಿರುವ ಪೂಜೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಅಣ್ಣಪ್ಪ ಜೆ.ಆರ್. ಮೊ.ಸಂ. ೯೯೦೨೨೯೦೩೦೨ ಹಾಗೂ ಭರತ್ ಜಿ.ಎನ್. ಮೊ.ಸಂ. ೯೫೩೫೭೭೯೬೬೯ನ್ನು ಸಂಪರ್ಕಿಸಬಹುದು ಎಂದು ಶ್ರೀ ಓಂಕಾರೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.