ಮಡಿಕೇರಿ, ನ. ೨: ಹಾಕತ್ತೂರು ಗ್ರಾಮದ ನಿವಾಸಿ, ಅತ್ಯರಾಜ್ ಅವರ ಪುತ್ರಿ ಉಷಾ ಅವರು ನಾಪತ್ತೆಯಾಗಿರುವುದಾಗಿ ಅತ್ಯರಾಜ್ ಅವರು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಉಷಾ ಅವರು ತಮ್ಮ ಪತಿಯೊಂದಿಗೆ ಕೇರಳದ ಪಾಲಾಕಾಡ್‌ನಲ್ಲಿ ನೆಲೆಸಿದ್ದು, ಅ. ೨೩ ರಂದು ಹಾಕತ್ತೂರಿನಲ್ಲಿನ ತವರು ಮನೆಗೆ ಪತಿ ಹಾಗೂ ಪುತ್ರನೊಂದಿಗೆ ಬಂದಿದ್ದಾರೆ. ಅ. ೨೭ ರಂದು ತಮ್ಮ ಪತಿ ಕೇರಳಕ್ಕೆ ವಾಪಾಸ್ಸು ಒಬ್ಬರೇ ತೆರಳಿದ್ದಾರೆ. ಉಷಾ ಅವರು ಅ. ೨೯ ರಂದು ಹಾಕತ್ತೂರಿನ ತಮ್ಮ ತವರು ಮನೆಯಿಂದ ಯಾರಿಗೂ ಹೇಳದೆ ತೆರಳಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕಾಣೆಯಾದ ಉಷಾ ಅವರ ಬಗ್ಗೆ ಮಾಹಿತಿ ಇದ್ದಲ್ಲಿ, ಮಡಿಕೇರಿ ಗ್ರಾಮಾಂತರ ಠಾಣೆ ಮೊ. ೦೮೨೭೨- ೨೨೮೭೭೭ ಅನ್ನು ಸಂಪರ್ಕಿಸಲು ಕೋರಿದೆ.