ಗೋಣಿಕೊಪ್ಪಲು, ನ. ೨: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ದಿ. ಪಾಂಡAಡ ಕುಟ್ಟಪ್ಪ ಸ್ಮರಣಾರ್ಥ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ೭ ನೇ ದಿನದಾಟದಲ್ಲಿ ಚೇನಂಡ ಮತ್ತು ಚೆಕ್ಕೆರ ತಂಡಗಳು ಪ್ರೀ ಕ್ವಾರ್ಟರ್ ಹಂತಕ್ಕೆ ಪ್ರವೇಶ ಪಡೆದುಕೊಂಡವು.
ಚೆಕ್ಕೆರ ತಂಡ ಮುಕ್ಕಾಟಿರ (ಕಡಗದಾಳು) ವಿರುದ್ಧ ೯-೪ ಗೋಲುಗಳ ಭರ್ಜರಿ ಜಯಭೇರಿ ಬಾರಿಸಿ ಪ್ರಿ ಕ್ವಾರ್ಟರ್ಗೆ ಲಗ್ಗೆ ಇಟ್ಟಿತು. ಚೆಕ್ಕೆರ ಶಿಯಾನ್ ೪, ಸಿದ್ದಾರ್ಥ್, ಆದರ್ಶ್, ತಲಾ ೨, ಮಂದಪ್ಪ ೧ ಗೋಲು ಬಾರಿಸಿ ಮಿಂಚಿದರು. ಮುಕ್ಕಾಟಿರ ನಾಣಯ್ಯ, ಅಶ್ವಿನ್ ತಲಾ ೨ ಗೋಲು ಹೊಡೆದರು. ಮತ್ತೊಂದು ಪಂದ್ಯದಲ್ಲಿ ಚೇನಂಡ ತಂಡ ಐನಂಡ ತಂಡವನ್ನು ೭-೫ ಗೋಲುಗಳಿಂದ ಸೋಲಿಸಿ, ಪ್ರಿ ಕ್ವಾರ್ಟರ್ಗೆ ಪ್ರವೇಶ ಪಡೆಯಿತು.
ಚೇನಂಡ ಮೌರ್ಯ ೪, ಮಂದಣ್ಣ ೩, ಐನಂಡ ನಾಚಪ್ಪ ೩, ಆಕಾಶ್, ಬೋಪಣ್ಣ ತಲಾ ೧ ಗೋಲು ಗಳಿಸಿದರು.
ದಿನದ ಮೊದಲ ಪಂದ್ಯದಲ್ಲಿ ಚೆಕ್ಕೆರ ತಂಡ ಕಾಳೆಂಗಡ ತಂಡದ ವಿರುದ್ಧ ೬-೫ ಗೋಲಿನಿಂದ ರೋಚಕ ಜಯ ಸಾಧಿಸಿತು. ಚೆಕ್ಕೆರ ಶಿಯಾನ್ ಮತ್ತು ಆದರ್ಶ್ ತಲಾ ೩ ಗೋಲು ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಕಾಳೆಂಗಡ ಬೋಪಣ್ಣ ೩, ಪವನ್ ೨ ಗೋಲು ಗಳಿಸಿ ಸೋಲಿನ ಅಂತರ ತಗ್ಗಿಸಿದರು.
ಪುದಿಯೊಕ್ಕಡ ವಿರುದ್ಧ ಮುಕ್ಕಾಟಿರ ೩-೨ ಗೋಲಿನಿಂದ ಜಯ ಸಾಧಿಸಿತು. ಮುಕ್ಕಾಟಿರ ಕಾವ್ಯ ೨, ನಾಣಯ್ಯ ೧, ಪುದಿಯೊಕ್ಕಡ ಪ್ರದಾನ್ ೨ ಗೋಲು ಗಳಿಸಿದರು.
ಮತ್ತೊಂದು ರೋಚಕ ಪಂದ್ಯದಲ್ಲಿ ಐನಂಡ ತಂಡ ಮುರುವಂಡ ತಂಡವನ್ನು ೫-೪ ಗೋಲಿನಿಂದ ಮಣಿಸಿತು. ಐನಂಡ ಆರ್ಯನ್, ಆಕಾಶ್ ತಲಾ ೨, ಬೋಪಣ್ಣ ೧, ಮುರುವಂಡ, ಅಪ್ಪಣ್ಣ ೨, ಕಾರಿಯಪ್ಪ, ಪೊನ್ನಪ್ಪ ತಲಾ ೧ ಗೋಲು ಗಳಿಸಿದರು.
ಚೇನಂಡ ತಂಡ ಐಚೆಟ್ಟಿರ ತಂಡದ ವಿರುದ್ಧ ೯-೮ ಗೋಲುಗಳಿಂದ ಗೆಲುವು ಪಡೆಯಿತು. ಚೇನಂಡ ಚಮನ್ ೪, ಮೌರ್ಯ ೩, ಸೋಮಯ್ಯ ೨, ಐಚೆಟ್ಟಿರ ಲೆಹರ್, ಪೂವಣ್ಣ ತಲಾ ೩, ಕಾರಿಯಪ್ಪ, ಬಿದ್ದಪ್ಪ ತಲಾ ೧ ಗೋಲು ಬಾರಿಸಿದರು.
ಶಾಂತೆಯAಡ, ಪುಟ್ಟಿಚಂಡ ವಿರುದ್ಧ ೨-೦ ಗೋಲುಗಳಿಂದ ಜಯಗಳಿಸಿತು. ಶಾಂತೆಯAಡ ತಿಮ್ಮಯ್ಯ, ಉತ್ತಪ್ಪ ತಲಾ ೧ ಗೋಲು ಗಳಿಸಿದರು.
ದೇಯಂಡ ತಂಡ ಉದಿಯಂಡ ತಂಡವನ್ನು ೭-೫ ಗೋಲಿನಿಂದ ಸೋಲಿಸಿತು. ದೇಯಂಡ ಸಂಜು ೩, ವಾಸಿಕ್ ೨, ಧೀರಜ್ ೧, ಬಿದ್ದಪ್ಪ ೧, ದಯಾನ್, ಪವನ್ ತಲಾ ೨, ದೇವಯ್ಯ ೧ ಗೋಲು ಹೊಡೆದರು.
ಮಾಚಿಮಾಡ ತಂಡ ಮುಳ್ಳಂಗಡ ತಂಡವನ್ನು ೭-೨ ಗೋಲುಗಳ ಅಂತರದಿAದ ಸೋಲಿಸಿತು. ಮಾಚಿಮಾಡ ಚರಣ್ ೩, ಕಾರಿಯಪ್ಪ, ದೇಗುಲ್, ಮಂದಣ್ಣ ತಲಾ ೧, ಮುಳ್ಳಂಗಡ ದರ್ಶನ್ ೨ ಗೋಲು ಹೊಡೆದರು.
ಕಾಡ್ಯಮಾಡ, ಬಾಳೆಯಡ ವಿರುದ್ಧ ೬-೪ ಗೋಲುಗಳ ಜಯ ಸಾಧಿಸಿತು.
ಕಾಡ್ಯಮಾಡ ಚಿಣ್ಣಪ್ಪ ೩, ಅಯ್ಯಪ್ಪ ೨, ಪೊನ್ನಪ್ಪ ೧, ಬಾಳೆಯಡ ವಿನಿಲ್ ೨, ಸುತನ್, ಕಿರಣ್ ತಲಾ ೧ ಗೋಲು ಗಳಿಸಿದರು.
ಎದುರಾಳಿ ತಂಡಗಳು ಗೈರಾದ ಕಾರಣ ಅಪ್ಪಾರಂಡ ಮತ್ತು ಪೆಮ್ಮಣಮಡ ತಂಡಗಳು ವಾಕ್ ಓವರ್ ಮೂಲಕ ಮುನ್ನಡೆ ಪಡೆದುಕೊಂಡವು.