ಮಡಿಕೇರಿ, ನ. ೨: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ೧೦ನೇ ತರಗತಿ/ಪಿಯುಸಿ(ವಿಜ್ಞಾನ), ಯಾವುದೇ ಪದವಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಉಚಿತವಾಗಿ ವಸತಿಯುತ ಕೌಶಲ್ಯಾಭಿವೃದ್ಧಿ ತರಬೇತಿಯೊಂದಿಗೆ ಕನಿಷ್ಟ ಶೇ. ೭೫ ನಿಶ್ಚಿತ ಉದ್ಯೋಗಾವಕಾಶ ನೀಡಲಾಗುತ್ತದೆ. ಈ ಸಂಬAಧ ಅರ್ಜಿ ಆಹ್ವಾನಿಸಲಾಗಿದೆ.
೨೦೧೯-೨೦ನೇ ಸಾಲಿನ ಎಸ್ಸಿಪಿ, ಟಿಎಸ್ಪಿ ಅನುದಾನದಡಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕನಿಷ್ಟ ೮೦೦ ಹಾಸಿಗೆಯುಳ್ಳ ಎನ್ಎಬಿಎಚ್ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ಉಚಿತವಾಗಿ ವಸತಿಯುತ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ನೀಡಿ ಕನಿಷ್ಟ ಶೇ.೭೫ ಅಭ್ಯರ್ಥಿಗಳಿಗೆ ನಿಶ್ಚಿತ ಉದ್ಯೋಗಾವಕಾಶವನ್ನು ತರಬೇತಿ ನೀಡುವ ಸಂಸ್ಥೆಯಲ್ಲಿ ಕನಿಷ್ಟ ೦೧ ವರ್ಷದವರೆಗೆ ಉದ್ಯೋಗವನ್ನು ಕಲ್ಪಿಸುವ ಷರತ್ತಿನ ಮೇರೆಗೆ ತರಬೇತಿ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ಜನರಲ್ ಡ್ಯೂಟಿ ಅಸಿಸ್ಟೆಂಟ್(೧೦ ನೇ ತರಗತಿ), ಪ್ಲೆಬಾಟೆಮಿಸ್ಟ್ (ಪಿಯುಸಿ, ವಿಜ್ಞಾನ), ಹೋಮ್ ಹೆಲ್ತ್ ಏಡ್ (೧೦ನೇ ತರಗತಿ) ಕೋರ್ಸ್ಗಳಿಗೆ ತರಬೇತಿ ನೀಡುವ ಸಂಸ್ಥೆಗಳಿಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವವರು ೧೮ ರಿಂದ ೩೫ ವರ್ಷದೊಳಗಿರಬೇಕು. ಅಪೋಲೋ ಮೆಡ್ಸ್ಕಿಲ್ಸ್, ಬೆಂಗಳೂರು ಮತ್ತು ಬೆಂಗಳೂರು ನಾರಾಯಣ ಹೆಲ್ತ್ ಸಂಸ್ಥೆಗಳು ತರಬೇತಿ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗೆ ಮುರುಳಿ (ಅಪೋಲೋ ಮೆಡ್ಸ್ಕಿಲ್ಸ್, ಬೆಂಗಳೂರು) ದೂ. ೮೮೯೭೧೮೨೦೩೨. ವಿಕಾಸ್ (ನಾರಾಯಣ ಹೆಲ್ತ್, ಬೆಂಗಳೂರು) ದೂ. ೭೦೧೮೮೭೯೬೫೦ ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.