ಮೊರ್ಬಿ ಸೇತುವೆ ಕುಸಿತ ‘ದೇವರ ಇಚ್ಛೆ' ಎಂದ ಒರೆವಾ ಅಧಿಕಾರಿ

ಮೊರ್ಬಿ, ನ. ೨: ೧೪೧ ಮಂದಿಯನ್ನು ಬಲಿ ಪಡೆದ ಗುಜರಾತ್‌ನ ಮೊಬ್ರಿ ಸೇತುವೆ ಕುಸಿತ ‘ದೇವರ ಇಚ್ಛೆ' ಎಂದು ಬಂಧಿತ ಆರೋಪಿಗಳಲ್ಲಿ ಒಬ್ಬರಾದ, ಸೇತುವೆ ನವೀಕರಿಸಿದ ಒರೆವಾ ಕಂಪೆನಿಯ ಅಧಿಕಾರಿ ಹೇಳಿದ್ದಾರೆ. ಸೇತುವೆ ದುರಂತಕ್ಕೆ ಸಂಬAಧಿಸಿದAತೆ ಕಂಪೆನಿಯ ಒಂಬತ್ತು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ವೇಳೆ ಆರೋಪಿಯೊಬ್ಬರು ಈ ಘಟನೆ ನಡೆದಿರುವುದು "ದೇವರ ಇಚ್ಛೆ" ಎಂದು ನ್ಯಾಯಾಲಯಕ್ಕೆ ತಿಳಿಸಿರುವುದಾಗಿ ವರದಿಯಾಗಿದೆ. ೧೫೦ ವರ್ಷಗಳಷ್ಟು ಹಳೆಯದಾದ ಸೇತುವೆಯ ನಿರ್ವಹಣೆಯ ಹೊಣೆ ಹೊತ್ತಿರುವ ಒರೆವಾ ಕಂಪೆನಿಯ ಮ್ಯಾನೇಜರ್ ದೀಪಕ್ ಪರೇಖ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೇತುವೆ ಕುಸಿತದ ನಂತರ ಬಂಧಿಸಲಾದ ಒಂಬತ್ತು ಜನರಲ್ಲಿ ಅವರು ಒಬ್ಬರು. "ಭಗವಾನ್ ಕಿ ಇಚ್ಚಾ (ದೇವರ ಇಚ್ಛೆ), ಇಂತಹ ದುರದೃಷ್ಟಕರ ಘಟನೆ ಸಂಭವಿಸಿದೆ" ಎಂದು ಅವರು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟೆçÃಟ್ ಎಂಜೆ ಖಾನ್ ಅವರಿಗೆ ತಿಳಿಸಿದರು. ಅಕ್ಟೋಬರ್ ೨೬ ರಂದು ಸರ್ಕಾರದ ಅನುಮೋದನೆ ಅಥವಾ ಗುಣಮಟ್ಟ ಪರೀಕ್ಷೆ ಇಲ್ಲದೆ ಸೇತುವೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿತ್ತು. ಆರೋಪಿಗಳ ವಿಚಾರಣೆ ನಡೆಸಿದ ನ್ಯಾಯಾಲಯ, ಹೆಚ್ಚಿನ ವಿಚಾರಣೆಗಾಗಿ ನಾಲ್ವರನ್ನು ಪೊಲೀಸ್ ವಶಕ್ಕೆ ನೀಡಿದೆ ಮತ್ತು ಐವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಬಟ್ಟೆ ಒಗೆಯುವಾಗ ದುರಂತ: ನಾಲ್ವರ ಸಾವು

ವಿಜಯನಗರ, ನ. ೨: ಬಟ್ಟೆ ಒಗೆಯಲು ಗೋಕಟ್ಟೆಗೆ ತೆರಳಿದ್ದ ನಾಲ್ವರು ಕಾಲು ಜಾರಿ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ವಿಜಯನಗರ ಜಿಲ್ಲೆಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚನ್ನಹಳ್ಳಿ ತಾಂಡದಲ್ಲಿ ಈ ದುರ್ಘಟನೆ ನಡೆದಿದ್ದು, ಅಶ್ವಿನಿ (೧೭), ಅಭಿಷೇಕ್ (೧೪), ಕಾವ್ಯಾಂಜಲಿ (೧೯) ಮತ್ತು ಅಪೂರ್ವ (೧೪) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಮೃತರು ಬಟ್ಟೆ ತೊಳೆಯಲು ಬುಧವಾರ ಚನ್ನಹಳ್ಳಿ ತಾಂಡದ ಸಮೀಪದಲ್ಲಿರುವ ಗೋಕಟ್ಟೆಗೆ ತೆರಳಿದ್ದರು. ಆ ಸಂದರ್ಭ ಮೊದಲಿಗೆ ಅಭಿಷೇಕ್ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿದ್ದಾನೆ. ನೀರಿನಲ್ಲಿ ಬಿದ್ದ ಅಭಿಷೇಕನನ್ನು ರಕ್ಷಿಸಲು ಹೋಗಿ ಕಾವ್ಯಾಂಜಲಿ ಸಹ ಆಯಾತಪ್ಪಿ ನೀರಿನಲ್ಲಿ ಬಿದ್ದಿದ್ದಾಳೆ. ಕಾವ್ಯಾಂಜಲಿಯನ್ನು ಉಳಿಸಲು ಹೋಗಿ ಅಪೂರ್ವ ಮತ್ತು ಅಶ್ವಿನಿ ಇವರು ಸಹ ನೀರಿನಲ್ಲಿ ಮುಳುಗಿದ್ದಾರೆ. ಒಬ್ಬರ ನಂತರ ಒಬ್ಬರಂತೆ ಮೂವರು ಯುವತಿಯರು ನೀರಿಗೆ ಬಿದ್ದಿದ್ದು, ಒಬ್ಬ ಬಾಲಕ ಸೇರಿ ಒಟ್ಟು ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಈ ಸಂಬAಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಿ೨೦ ವಿಶ್ವಕಪ್: ಮಳೆ ಅಡ್ಡಿ ಹೊರತಾಗಿಯೂ, ಬಾಂಗ್ಲಾ ಗೆಲುವು ಕಸಿದ ಭಾರತ, ೫ ರನ್‌ಗಳ ರೋಚಕ ಜಯ

ಅಡಿಲೇಡ್, ನ. ೨: ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಮಳೆಯ ಕಾಟದ ಹೊರತಾಗಿಯೂ ಭಾರತ ತಂಡ ಭರ್ಜರಿ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಟೀಂ ಇಂಡಿಯಾ ನೀಡಿದ್ದ ೧೮೫ ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಬಾಂಗ್ಲಾದೇಶ ಭರ್ಜರಿ ಆರಂಭ ಪಡೆದಿತ್ತು. ಬಾಂಗ್ಲಾ ಪರ ಆರಂಭಿಕ ಆಟಗಾರ ಲಿಟನ್ ದಾಸ್ ಕೇವಲ ೨೭ ಎಸೆತಗಳಲ್ಲಿ ೩ ಸಿಕ್ಸರ್ ಮತ್ತು ೭ ಬೌಂಡರಿಗಳ ನೆರವಿನಿಂದ ೬೦ ರನ್ ಗಳಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ನಜ್ಮಲ್ ಹುಸೇನ್ ಶಾಂತೋ ೨೫ ಎಸೆತಗಳಲ್ಲಿ ೧ ಸಿಕ್ಸರ್ ಹಾಗೂ ೧ ಬೌಂಡರಿ ನೆರವಿನಿಂದ ೨೧ ರನ್ ಗಳಿಸಿದರು. ಇಬ್ಬರೂ ಅಪಾಯಕಾರಿಯಾಗುತ್ತಿದ್ದಾರೆ ಎನ್ನುವ ಹೊತ್ತಿಗೆ ಮಳೆ ಸುರಿಯಿತು. ಸುಮಾರು ಅರ್ಧಗಂಟೆಗಳ ಕಾಲ ಸುರಿದ ಮಳೆ ಬಳಿಕ ನಿಂತಿತು. ಈ ಹಂತದಲ್ಲಿ ಮೈದಾನಕ್ಕಿಳಿದ ಅಂಪೈರ್‌ಗಳು ಬಾಂಗ್ಲಾ ಇನ್ನಿಂಗ್ಸ್ ಮೊಟಕುಗೊಳಿಸಿದರು. ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ ಬಾಂಗ್ಲಾಗೆ ೧೬ ಓವರ್ ನಲ್ಲಿ ೧೫೧ರನ್ ಗಳ ಗುರಿ ನೀಡಲಾಯಿತು. ಈ ಹಂತದಲ್ಲಿ ಕಣಕ್ಕಿಳಿದ ಬಾಂಗ್ಲಾದೇಶಕ್ಕೆ ಆರಂಭದಲ್ಲೇ ಭಾರತ ಆಘಾತ ನೀಡಿತು. ೬೦ರನ್ ಗಳಿಸಿ ಅಪಾಯಕಾರಿಯಾಗಿದ್ದ ಲಿಟನ್ ದಾಸ್‌ರನ್ನು ಕೆಎಲ್ ರಾಹುಲ್ ರನೌಟ್ ಮಾಡಿದರು. ಇವರ ಬೆನ್ನಲ್ಲೇ ಮತ್ತೋರ್ವ ಆಟಗಾರ ನಜ್ಮಲ್ ಹುಸೇನ್ ಶಾಂತೋ ಕೂಡ ೨೧ ರನ್ ಗಳಿಸಿ ಶಮಿ ಬೌಲಿಂಗ್ ನಲ್ಲಿ ಔಟಾದರು. ಬಾಂಗ್ಲಾ ತಂಡಕ್ಕೆ ಅಂತಿಮ ಓವರ್‌ನಲ್ಲಿ ಗೆಲ್ಲಲು ೬ ಎಸೆತಗಳಲ್ಲಿ ೨೦ ರನ್ ಬೇಕಿತ್ತಾದರೂ ಕೇವಲ ೫ ರನ್‌ಗಳ ಅಂತರದಲ್ಲಿ ಸೋಲು ಕಂಡಿತು.

ಐಸಿಸ್ ಮಹಿಳಾ ಬೆಟಾಲಿಯನ್ ನೇತೃತ್ವ ವಹಿಸಿದ್ದ ಮಹಿಳೆಗೆ ೨೦ ವರ್ಷ ಜೈಲು ಶಿಕ್ಷೆ

ಅಲೆಕ್ಸಾಂಡ್ರಿಯಾ, ನ. ೨: ಇಸ್ಲಾಂ ಧರ್ಮಕ್ಕೆ ಮತಾಂತರಗೊAಡು ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್(ಐಸಿಸ್) ಉಗ್ರ ಸಂಘಟನೆ ಸೇರಿ ಮಹಿಳಾ ಬೆಟಾಲಿಯನ್ ನೇತೃತ್ವ ವಹಿಸಿಕೊಂಡಿದ್ದ ಭಯೋತ್ಪಾದಕಿಗೆ ಅಮೇರಿಕ ನ್ಯಾಯಾಲಯ ಮಂಗಳವಾರ ೨೦ ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಅಮೇರಿಕದ ಕಾನ್ಸಾಸ್‌ನ ಫಾರ್ಮ್ನಲ್ಲಿ ಬೆಳೆದ ೪೨ ವರ್ಷದ ಆಲಿಸನ್ ಫ್ಲೂಕ್-ಎಕ್ರೆನ್‌ಗೆ ಖತೀಬಾ ನುಸೈಬಾ ಎಂಬ ಬೆಟಾಲಿಯನ್‌ನ ನೇತೃತ್ವ ವಹಿಸಿದ್ದರು. ವರ್ಜೀನಿಯಾದ ಅಲೆಕ್ಸಾಂಡ್ರಿಯಾದಲ್ಲಿನ ಫೆಡರಲ್ ನ್ಯಾಯಾಲಯ ಈ ಭಯೋತ್ಪಾದಕಿಗೆ ಗರಿಷ್ಠ ಶಿಕ್ಷೆ ನೀಡಿದೆ. ಈ ಮಹಿಳೆ ತನ್ನ ಬಟಾಲಿಯನ್‌ನಲ್ಲಿದ್ದ ಸುಮಾರು ೧೦೦ ಮಹಿಳೆಯರು ಮತ್ತು ೧೦ ವರ್ಷ ವಯಸ್ಸಿನ ಬಾಲಕಿಯರಿಗೆ ಸ್ವಯಂಚಾಲಿತ ಶಸ್ತಾçಸ್ತçಗಳನ್ನು ಹೇಗೆ ಬಳಸುವುದು ಮತ್ತು ಗ್ರೆನೇಡ್, ಆತ್ಮಹತ್ಯಾ ಬೆಲ್ಟ್ಗಳನ್ನು ಹೇಗೆ ಸ್ಫೋಟಿಸಬೇಕೆಂಬ ಕುರಿತು ತರಬೇತಿ ನೀಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ.