ಕೊಡ್ಲಿಪೇಟೆ, ನ. ೨: ಕಾರ್ಮಿಕ ಇಲಾಖೆ ವತಿಯಿಂದ ಕೊಡ್ಲಿಪೇಟೆ ವ್ಯಾಪ್ತಿಯ ಕಟ್ಟಡ ಕಾರ್ಮಿಕರುಗಳಿಗೆ ಸ್ಥಳೀಯ ಶ್ರೀ ಚೌಡೇಶ್ವರಿ ದೇವಸ್ಥಾನ ಸಭಾಂಗಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಕಾರ್ಮಿಕ ಇಲಾಖೆಯ ಸಂಚಾರಿ ವ್ಯೆದ್ಯಕೀಯ ಚಿಕಿತ್ಸಾ ವಾಹನದಲ್ಲಿ ಬೆಂಗಳೂರಿನ ಬ್ಲಾಸಮ್ ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್ ವ್ಯೆದ್ಯೆ ಡಾ. ಸುಗುಣ, ಆಡಳಿತಾಧಿಕಾರಿ ಶ್ರೇಯಸ್, ಶುಶ್ರೂಷಕಿ ಚಂದ್ರಾವತಿ, ಸಿಬ್ಬಂದಿಗಳಾದ ಸ್ವಾತಿ ಮತ್ತು ನಾಗೇಶ್ವರಂ ಅವರುಗಳು ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ ಔಷಧಿಗಳನ್ನು ನೀಡಿದರು.
ಕೊಡ್ಲಿಪೇಟೆ ಹೋಬಳಿಯ ನೂರರಷ್ಟು ಕಟ್ಟಡ ಕಾರ್ಮಿಕರುಗಳು ಮತ್ತು ಅವರ ಕುಟುಂಬದ ಸದಸ್ಯರುಗಳು ಆರೋಗ್ಯ ತಪಾಸಣೆ ಶಿಬಿರದಲ್ಲಿ ಭಾಗಿಯಾಗಿದ್ದರು.
ಈ ಸಂದರ್ಭ ಕೊಡ್ಲಿಪೇಟೆ ಹೋಬಳಿ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಕೆ.ಎ. ನಾಗೇಶ್, ಉಪಾಧ್ಯಕ್ಷ ಶೇಖರ್, ಪ್ರಧಾನ ಕಾರ್ಯದರ್ಶಿ ಡಿ.ಆರ್. ವೇದಕುಮಾರ್, ಕಾರ್ಯದರ್ಶಿ ಇಪ್ತಿಕಾರ್ ಪಾಷಾ ಹಾಗೂ ಗೌರವಾಧ್ಯಕ್ಷ ಕೆ.ಎ. ಇಬ್ರಾಹಿಂ ಮತ್ತು ಖಜಾಂಚಿ ಬಶೀರ್, ನಿರ್ದೇಶಕರುಗಳಾದ ಬಿ.ಎ. ಖಲೀಲ್, ಮುನ್ನ, ಜಾವಿದ್ ಮಹದೇಶ್ವರ್ ಸೇರಿದಂತೆ ಸದಸ್ಯರುಗಳು ಉಪಸ್ಥಿತರಿದ್ದರು.