ಸೋಮವಾರಪೇಟೆ, ನ.೨: ಶನಿವಾರಸಂತೆ ಪಟ್ಟಣದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಸೋಮವಾರಪೇಟೆ ಅಬಕಾರಿ ಇಲಾಖಾಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯಸಳೂರು ಹೋಬಳಿಯ, ಉಚ್ಚಂಗಿ ಗ್ರಾಮದ ಯು.ಜೆ. ಸಜಿ ಎಂಬಾತ ಹಸಿ ಹಾಗೂ ಒಣಗಿದ ಗಾಂಜಾವನ್ನು ಶನಿವಾರಸಂತೆ ಪಟ್ಟಣದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ದೊರೆತ ಖಚಿತ ಸುಳಿವಿನ ಮೇರೆ ಕಾರ್ಯಾಚರಣೆ ನಡೆಸಿದ ಸೋಮವಾರಪೇಟೆ ಅಬಕಾರಿ ಇಲಾಖಾಧಿಕಾರಿಗಳ ತಂಡ ಮಾಲು ಸಹಿತ ಆರೋಪಿಯನ್ನು ಬಂಧಿಸಿದೆ.

ಬAಧಿತ ಆರೋಪಿ ಸಜಿ ವಿರುದ್ಧ ಎನ್.ಡಿ.ಪಿ.ಎಸ್.

(ಮೊದಲ ಪುಟದಿಂದ) ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಸೋಮವಾರಪೇಟೆ ವಲಯ ಕಚೇರಿ ಅಬಕಾರಿ ನಿರೀಕ್ಷಕ ಬಿ.ಎಸ್. ಲೋಕೇಶ್, ಉಪ ನಿರೀಕ್ಷಕಿ ಕೆ.ವಿ. ಸುಮತಿ, ಅಬಕಾರಿ ಪೇದೆ ವೀರೇಶ್ ಕುಮಾರ್, ಮಹಾಂತೇಶ ಸುಣಗಾರ, ಮಹದೇವಗಡ್ಡಿ ಅವರುಗಳು ಪಾಲ್ಗೊಂಡಿದ್ದರು.