ಗೋಣಿಕೊಪ್ಪ ವರದಿ, ನ. ೨: ಗೋಣಿಕೊಪ್ಪ ಲಯನ್ಸ್ ಸಂಸ್ಥೆಗೆ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಶಾಶ್ವತ್ ಬೋಪಣ್ಣ ಭೇಟಿ ಕಾರ್ಯಕ್ರಮ ಕಕೂನ್ ಸಭಾಂಗಣದಲ್ಲಿ ನಡೆಯಿತು.
ಪ್ರಾಂತೀಯ ಅಧ್ಯಕ್ಷ ಶಾಶ್ವತ್ ಬೋಪಣ್ಣ ಮಾತನಾಡಿ, ಲಯನ್ಸ್ ಸಂಸ್ಥೆಯ ಸಂಸ್ಥಾಪಕ ಮೆಲ್ವಿನ್ ಜೋನ್ಸ್ ಅವರ ದೂರದೃಷ್ಟಿಯಿಂದ ಲಯನ್ಸ್ ಸಂಸ್ಥೆ ಸಾಮಾಜಿಕ ಸೇವಾ ಸಂಸ್ಥೆಯಾಗಿ ಜನರಿಗೆ ಸೇವೆ ನೀಡಲು ಅವಕಾಶ ದೊರೆಕಿದೆ. ಉತ್ತಮ ಸಮಾಜಕ್ಕಾಗಿ ಸದಸ್ಯರು ಮತ್ತಷ್ಟು ಸೇವೆ ನೀಡಬೇಕು ಎಂದು ಮನವಿ ಮಾಡಿಕೊಂಡರು.
ಗೋಣಿಕೊಪ್ಪ ಲಯನ್ಸ್ ಅಧ್ಯಕ್ಷ ಡಾ. ಅಮ್ಮಂಡ ಚಿಣ್ಣಪ್ಪ ಮಾತನಾಡಿ, ಗೋಣಿಕೊಪ್ಪ ಲಯನ್ಸ್ ಸಂಸ್ಥೆ ೪೯ ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು ಸಮಾಜದ ಬೆಳವಣಿಗೆಯಲ್ಲಿ ನಿರಂತರ ಚಟುವಟಿಕೆ ನಿರ್ವಹಿಸಲಿದೆ ಎಂದರು.
ಪ್ರಾAತೀಯ ಮಟ್ಟದ ಬ್ಯಾಡ್ಮಿಂಟನ್ ಟೂರ್ನಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮನ್ನಕಮನೆ ಬಾಲು ವರದಿ ವಾಚಿಸಿದರು. ವಲಯ ಅಧ್ಯಕ್ಷ ನಿತಿ ಪೂಣಚ್ಚ, ಹರೀಶ್, ವಲಯ ಮಾರ್ಗದರ್ಶಕ ವಿವೇಕ್ ಜೋಯಪ್ಪ, ಪ್ರಮುಖರಾದ ಧನು ಉತ್ತಯ್ಯ, ಚೆಟ್ಟಿಮಾಡ ಅಪ್ಪಣ್ಣ, ವೇದಿಕೆಯಲ್ಲಿ ಉಪಸ್ಥಿತರಿದ್ದರು.