ಮಡಿಕೇರಿ, ನ. ೧ : ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಬಿಜೆಪಿ ಕಾರ್ಯಕರ್ತ ಸುಳ್ಯ ಸಮೀಪದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ತಲೆಮರೆಸಿಕೊಂಡಿರುವ ಮಡಿಕೇರಿಯ ಓರ್ವ ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ರಾಷ್ಟಿçÃಯ ತನಿಖಾ ದಳವು ಈ ನಾಲ್ವರು ಆರೋಪಿಗಳ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಿಸಿದೆ.
ಮಡಿಕೇರಿ ಗದ್ದಿಗೆ ನಿವಾಸಿ ಎಂ.ಹೆಚ್. ತುಫೈಲ್, ಬೆಳ್ಳಾರೆಯ ಎಸ್. ಮಹಮ್ಮದ್ ಮುಸ್ತಫಾ, ಸುಳ್ಯ ನಗರದ ಕಲ್ಲುಮುಟ್ಲುವಿನ ಎಂ.ಆರ್. ಉಮ್ಮರ್ ಫಾರೂಕ್, ಬೆಳ್ಳಾರೆಯ ಅಬೂಬಕ್ಕರ್ ಸಿದ್ದೀಕ್ ಇವರುಗಳು ಪಿಎಫ್‌ಐ ಸದಸ್ಯರಾಗಿದ್ದು ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿ ಪ್ರಸ್ತುತ ತಲೆಮರೆಸಿಕೊಂಡಿದ್ದಾರೆ.
(ಮೊದಲ ಪುಟದಿಂದ) ಈ ಹಿನ್ನೆಲೆಯಲ್ಲಿ ಇವರುಗಳ ಬಗ್ಗೆ ಮಾಹಿತಿ ನೀಡುವವರಿಗೆ ನಗದು ಬಹುಮಾನವನ್ನು ಎನ್‌ಐಎ ಘೋಷಿಸಿದ್ದು ಮಹಮ್ಮದ್ ಮುಸ್ತಫಾ ಬಗ್ಗೆ ಮಾಹಿತಿ ನೀಡುವವರಿಗೆ ರೂ. ೫ ಲಕ್ಷ, ತುಫೈಲ್ ಬಗ್ಗೆ ಮಾಹಿತಿ ನೀಡುವವರಿಗೆ ರೂ. ೫ ಲಕ್ಷ, ಉಮ್ಮರ್ ಫಾರೂಕ್ ಬಗ್ಗೆ ಮಾಹಿತಿ ನೀಡುವವರಿಗೆ ರೂ. ೨ ಲಕ್ಷ, ಅಬೂಬಕ್ಕÀರ್ ಸಿದ್ದೀಕ್ ಬಗ್ಗೆ ಮಾಹಿತಿ ನೀಡುವವರಿಗೆ ರೂ. ೨ ಲಕ್ಷ ಬಹುಮಾನ ನೀಡುವುದಾಗಿ ಪ್ರಚಾರಪಡಿಸಿದೆ. ಮಾಹಿತಿದಾರರು iಟಿಜಿo.bಟಡಿ.ಟಿiಚಿ@gov.iಟಿ, ದೂರವಾಣಿ ೦೮೦-೨೯೫೧೦೯೦೦, ೮೯೦೪೨೪೧೧೦೦ ಅಥವಾ ಅಂಚೆ ವಿಳಾಸ : ಪೊಲೀಸ್ ಅಧೀಕ್ಷಕರು, ರಾಷ್ಟಿçÃಯ ತನಿಖಾ ದಳ (ಎನ್‌ಐಎ) ೮ನೇ ಮಹಡಿ, ಸರ್ ಎಂ. ವಿಶ್ವೇಶ್ವರಯ್ಯ ಕೇಂದ್ರೀಯ ಸದನ, ದೊಮ್ಲೂರು, ಬೆಂಗಳೂರು - ೫೬೦೦೭೧ ಈ ವಿಳಾಸಕ್ಕೆ ಮಾಹಿತಿ ನೀಡಬಹುದಾಗಿದ್ದು, ಮಾಹಿತಿದಾರರ ಹೆಸರನ್ನು ಗೌಪ್ಯವಾಗಿ ಇಡುವುದಾಗಿ ಎನ್‌ಐಎ ತಿಳಿಸಿದೆ.