ವೀರಾಜಪೇಟೆ, ನ. ೧: ನಾಡು ಎಂದರೆ ಒಂದು ದೃಢವಾದ ಭಾವನೆ. ಅದರಲ್ಲೂ ಸ್ವಾಭಿಮಾನದ ಭಾವನೆಯಾಗಿದೆ ಎಂದು ವೀರಾಜಪೇಟೆ ತಹಶೀಲ್ದಾರ್ ಅರ್ಚನಾ ಭಟ್ ಹೇಳಿದರು.

ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಆಡಳಿತದ ವತಿಯಿಂದ ತಾಲೂಕು ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದ ಧ್ವಜಾರೋಹಣ ನೆರವೇರಿಸಿ ಧ್ವಜ ವಂದನೆ ಸ್ವೀಕಾರ ಮಾಡಿ ರಾಜ್ಯೋತ್ಸವ ಸಂದೇಶ ನೀಡಿದ ಅವರು, ಕನ್ನಡದ ಹಳದಿ ಕೆಂಪಿನ ಧ್ವಜ ನಮ್ಮ ಜಾಗೃತಿಯ ಸಂಕೇತ ಹಾಗೂ ಚೈತನ್ಯ. ಅಕ್ಕಮಹಾದೇವಿ, ರಾಣಿ ಅಬ್ಬಕ್ಕ,

(ಮೊದಲ ಪುಟದಿಂದ) ಕಿತ್ತೂರು ರಾಣಿ ಚೆನ್ನಮ್ಮ, ಪಂಪ, ರನ್ನ, ಕುವೆಂಪು, ಕಾರಂತ, ಬೇಂದ್ರೆಯAತಹ ಮಹಾ ಕವಿಗಳು, ಶಿವಕುಮಾರ ಸ್ವಾಮಿಗಳಂತಹ ಅಧ್ಯಾತ್ಮಿಕ ಗುರುಗಳು, ನಿಸ್ವಾರ್ಥ ಸೈನಿಕರು ಈ ಪುಣ್ಯ ಭೂಮಿಯಲ್ಲಿ ಜನಿಸಿರುವುದು ನಾಡಿಗೆ ಹೆಮ್ಮೆಯ ವಿಚಾರ ಎಂದು ಅವರು ನುಡಿದರು.

ವಿಧಾನಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ನಾವು ನಾಡಿನ ಭಾಷೆ ನೆಲ ಜಲದ ವಿಚಾರದಲ್ಲಿ ಸದಾ ತಮ್ಮತನವನ್ನು ತೋರಬೇಕು. ಅನೇಕ ಮಹನೀಯರು ಕನ್ನಡ ಸಾಹಿತ್ಯಕ್ಕೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಕನ್ನಡ ಮಣ್ಣಿನಲ್ಲಿ ಹುಟ್ಟಿದ ನಾವು ಧನ್ಯರು ಎಂದು ನುಡಿದರು.

ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ದಯಾನಂದ್ ಮುಖ್ಯ ಭಾಷಣ ಮಾಡಿ, ಕನ್ನಡ ನಾಡು ನುಡಿ, ನೆಲ, ಜಲ, ಗಡಿ ಸಂರಕ್ಷಣೆಯ ಉದ್ದೇಶದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಭಾರತದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾದ ಕನ್ನಡ ಭಾಷೆಯು ಇದುವರೆಗೆ ೮ ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದುಕೊಂಡಿದೆ ಎಂದು ವಿವರಿಸಿದರು.

ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷೆ ಸುಶ್ಮಿತಾ, ಉಪಾಧ್ಯಕ್ಷ ವಿನಾಂಕ್ ಕುಟ್ಟಪ್ಪ, ತಾಲೂಕು ಕಾರ್ಯ ನಿರ್ವಾಹಕಾಧಿಕಾರಿ ಅಪ್ಪಣ್ಣ, ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಡಿ.ಪಿ. ರಾಜೇಶ್, ಐಟಿಡಿಪಿ ಅಧಿಕಾರಿ ಗುರುಶಾಂತಪ್ಪ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲಬಿಳಗಿ, ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್, ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ನಂಜಪ್ಪ, ತಾಲೂಕು ಶಿಕ್ಷಣ ಸಮನ್ವಯ ಅಧಿಕಾರಿ ವನಜಾಕ್ಷಿ, ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಪೊನ್ನಪ್ಪ ಇದ್ದರು.

ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ಮಾಲ್ದಾರೆ ಸರ್ಕಾರಿ ಶಾಲೆಯ ಜೇಮ್ಸ್, ಆಶಿಶ್, ಪೊನ್ನಂಪೇಟೆ ಕೆಪಿಎಸ್ ಶಾಲೆಯ ಸನಾ ಫಾತೀಮಾ, ಹೆಗ್ಗಳ ಶಾಲೆಯ ಯಶಸ್ವಿನಿ, ಬಾಳುಗೋಡು ಏಕಲವ್ಯ ಶಾಲೆಯ ಧನ್ಯ, ಪೆರುಂಬಾಡಿ ಮೊರಾರ್ಜಿ ಶಾಲೆಯ ಭವಿಷ್, ವೀರಾಜಪೇಟೆ ಸರ್ಕಾರಿ ಪ್ರೌಢಶಾಲೆಯ ಯುಕ್ತಿ ಗೌರಮ್ಮ, ನೌಶಿರ, ಗೋಣಿಕೊಪ್ಪ ಪ್ರೌಢಶಾಲೆಯ ನಮ್ಯ ಡಿ.ವೈ, ರ‍್ವತೋಕ್ಲು ಪ್ರೌಢಶಾಲೆಯ ಮೋನಿಕಾ, ಅಪ್ಪಚ್ಚಕವಿ ಶಾಲೆಯ ಕ್ಷೇತ್ರ, ಬದ್ರಿಯ ಪ್ರೌಢÀಶಾಲೆಯ ನಿಶಾನ, ರೋಟರಿ ಶಾಲೆಯ ಸುನೀಯಾ ಶಿಯಾ, ಕಾವೇರಿ ಶಾಲೆಯ ಎಂ.ಎA. ಕಾವೇರಮ್ಮ, ಲಯನ್ಸ್ ಶಾಲೆಯ ಗ್ರೀಷ್ಮಾ ಉತ್ತಪ್ಪ, ರೀಷ್ಮಾ ಕಾವೇರಮ್ಮ, ಪುಣ್ಯ ಪೂವಮ್ಮ, ರೂಟ್ಸ್ ಶಾಲೆಯ ಅನಿಷಾ ಪೂವಮ್ಮ, ಜೆ.ಸಿ ಶಾಲೆಯ ಆಶಿತ್ ಅಚ್ಚಮ್ಮ, ಸಿ.ಟಿ. ದೇಚಮ್ಮ ಹಾಗೂ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡ ಕೈಬುಲಿರ ಪಾರ್ವತಿ ಭೀಮಯ್ಯ ಅವರುಗಳನ್ನು ಸನ್ಮಾನಿಸಲಾಯಿತು.

ಪೊಲೀಸ್, ಸ್ಕೌಟ್ಸ್, ಗೈಡ್ಸ್, ಎನ್.ಸಿ.ಸಿ. ವಿದ್ಯಾರ್ಥಿಗಳಿಂದ ಪಥ ಸಂಚಲನ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.