ಕುಶಾಲನಗರ, ನ. ೧: ಕನ್ನಡ ಭಾಷೆ ಮನೆ, ಮನಗಳ ಭಾಷೆಯಾಗಬೇಕೆಂದು ಕುಶಾಲನಗರ ತಾಲೂಕು ತಹಶೀಲ್ದಾರ್ ಟಿ. ಎಂ ಪ್ರಕಾಶ್ ಕರೆ ನೀಡಿದರು. ಅವರು, ಕುಶಾಲನಗರದಲ್ಲಿ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ನಡೆದ ೬೭ ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು. ಪರಭಾಷೆಗಳಿಗೆ ಗೌರವ ನೀಡುವ ಮೂಲಕ ಪ್ರತಿಯೊಬ್ಬರೂ ಭಾಷೆಯ ಬಗ್ಗೆ ಅಭಿಮಾನ ಮೂಡಿಸಿಕೊಳ್ಳಬೇಕೆಂದರು.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ದಿನದ ಮಹತ್ವ ತಿಳಿಸಿದ ಕನ್ನಡ ಶಿಕ್ಷಕ ಎನ್. ವೆಂಕಟ ನಾಯಕ್ ಮಾತನಾಡಿ, ವಿವಿಧ ಭಾಷೆಗಳ ನಡುವೆ ನಾಡಿನ ಸಂಸ್ಕೃತಿ ಬಿಂಬಿಸುವ ಭಾಷೆ ಕನ್ನಡವಾಗಿದ್ದು, ೮ ಜ್ಞಾನಪೀಠ ಪ್ರಶಸ್ತಿಗಳಿಗೆ ಭಾಜನವಾಗಿದೆ ಎಂದರು. ಜನರ ಮನಸ್ಸಿನಲ್ಲಿ ಮೂಡಿದ ಭಾವನೆಗಳನ್ನು ಭಾಷೆಗಳ ಮೂಲಕ ವ್ಯಕ್ತಪಡಿಸುವ ಮಾತೃ ಭಾಷೆಯ ಬಗ್ಗೆ ಗೌರವ ಸಲ್ಲಿಸಬೇಕು. ಕನ್ನಡ ಭಾಷೆ ಶಾಸ್ತಿçÃಯ ಭಾಷೆಯ ಸ್ಥಾನಮಾನ ಹೊಂದಿದೆ. ರಾಜ್ಯೋತ್ಸವ ಮೂಲಕ ನಾಡು, ನುಡಿ, ಸಂಸ್ಕೃತಿ ಬಿಂಬಿಸುವ ಸನ್ನಿವೇಶದ ಅವಕಾಶ ಪ್ರತಿಯೊಬ್ಬರಿಗೂ ದೊರಕಿರುವುದು ಸೌಭಾಗ್ಯದ ಸಂಗತಿ ಎಂದರು. ಕನ್ನಡ ಆಚರಣೆ ದಿನಕ್ಕೆ ಸೀಮಿತವಾಗದೇ ನಿತ್ಯೋತ್ಸವವಾಗಬೇಕಿದೆ ಎಂದರು.

ಸಮಾರAಭದ ಅಧ್ಯಕ್ಷತೆ ವಹಿಸಿ ಮಡಿಕೇರಿ ವಿಧಾನಸಭಾ ಕ್ಷೇತ್ರ ಶಾಸಕರಾದ ಎಂ.ಪಿ ಅಪ್ಪಚ್ಚು ರಂಜನ್, ರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದರು. ಕನ್ನಡಕ್ಕೆ ಒತ್ತುಕೊಡುವ ಕೆಲಸವಾಗಬೇಕು. ಸರ್ಕಾರ ನಿರಂತರವಾಗಿ ೭೩ ಸುತ್ತೋಲೆಗಳನ್ನು ಹೊರಡಿಸುವ ಮೂಲಕ ಭಾಷೆಯ ಬಗ್ಗೆ ಒತ್ತು ನೀಡುತ್ತಿದ್ದು, ಸರ್ಕಾರಿ ಕಚೇರಿಗಳು ಸೇರಿದಂತೆ ಎಲ್ಲೆಡೆ ಕನ್ನಡದಲ್ಲಿ ವ್ಯವಹರಿಸುವಂತೆ ಕೋರಿದರು. (ಮೊದಲ ಪುಟದಿಂದ) ಅನ್ಯರಾಜ್ಯಗಳಲ್ಲಿ ಭಾಷಾಭಿಮಾನಕ್ಕೆ ಪ್ರಥಮ ಆದ್ಯತೆ ಕಲ್ಪಿಸುತ್ತಿದ್ದು, ಕನ್ನಡದ ನೆಲೆ, ಜಲ, ಸಂಸ್ಕೃತಿ ಉಳಿಸುವಂತಾಗ ಬೇಕು ಎಂದರು. ಈ ಸಂದರ್ಭ ಕುಶಾಲನಗರದ ಚುಟುಕು ಕವಿ ಹಾ.ತಿ. ಜಯಪ್ರಕಾಶ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ಉಪಾಧ್ಯಕ್ಷೆ ಸುರಯ್ಯಭಾನು, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ಎA ಚರಣ್, ಎಪಿಸಿಎಂಎಸ್ ಅಧ್ಯಕ್ಷ ಎಂ.ಎನ್ ಕುಮಾರಪ್ಪ, ಪೊಲೀಸ್ ಉಪನಿರೀಕ್ಷಕ ಆರ್.ವಿ ಗಂಗಾಧರಪ್ಪ, ವೃತ್ತ ನಿರೀಕ್ಷಕ ಬಿ.ಜಿ ಮಹೇಶ್, ಮುಖ್ಯಾಧಿಕಾರಿ ಶಿವಪ್ಪನಾಯಕ್, ಪಂಚಾಯಿತಿ ಸದಸ್ಯರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್ ಮೂರ್ತಿ, ಉಪ ತಹಶೀಲ್ದಾರ್ ಮಧುಸೂಧನ್ ಮತ್ತಿತರರು ಇದ್ದರು.ಪ್ರೌಢಶಾಲೆ ಮುಖ್ಯ ಶಿಕ್ಷಕಿ ಪುಷ್ಪ ಸ್ವಾಗತಿಸಿದರು. ಉಪನ್ಯಾಸಕರಾದ ಹೇಮಲತ ಮತ್ತು ರಶ್ಮಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ಬೈಚ£ Àಹಳ್ಳಿಯ ಬಳಿಯಿಂದ ಮುಖ್ಯರಸ್ತೆಯಲ್ಲಿ ಕನ್ನಡಾಂಬೆಯ ಮೆರವಣಿಗೆ ನಡೆಯಿತು. ಮೈದಾನದಲ್ಲಿ ಶಾಲಾ- ಕಾಲೇಜು, ಪೊಲೀಸ್, ಎನ್‌ಸಿಸಿ ಕೆಡೆಟ್‌ಗಳಿಂದ ಪಥ ಸಂಚಲನ ನಡೆಯಿತು.