ಸೋಮವಾರಪೇಟೆ, ನ. ೧: ‘ಕನ್ನಡವೇ ಸತ್ಯ..ಕನ್ನಡವೇ ನಿತ್ಯ, ಜೈ ಜೈ ಕನ್ನಡ, ನಮ್ಮನಾಡು ಕನ್ನಡದ ಬೀಡು, ತಾಯಿ ಭುವನೇಶ್ವರಿಗೆ ಜೈ.. ಸಿರಿಗನ್ನಡಂ ಗೆಲ್ಗೆ-ಸಿರಿಗನ್ನಡಂ ಬಾಳ್ಗೆ’ ಇತ್ಯಾದಿ ಕನ್ನಡದ ಘೋಷಣೆಗಳೊಂದಿಗೆ ಸೋಮವಾರಪೇಟೆ ಸುತ್ತಮುತ್ತಲಿನ ಶಾಲಾ ಕಾಲೇಜು ವಿದ್ಯಾರ್ಥಿಗಳು, ಕನ್ನಡ ಮನಸ್ಸುಗಳು ಭವ್ಯ ಮೆರವಣಿಗೆ ನಡೆಸಿ, ಕನ್ನಡ ಸಾರಸ್ವತ ಲೋಕದ ಸಂಭ್ರಮವನ್ನು ಇಮ್ಮಡಿಗೊಳಿಸಿದವು.
ಶಾಲಾ ಕಾಲೇಜುಗಳು ಸಿದ್ಧಪಡಿಸಿದ್ದ ಹಲವು ಸ್ತಬ್ಧ ಚಿತ್ರಗಳು ಮೆರವಣಿಗೆಗೆ ಹೆಚ್ಚಿನ ಮೆರುಗು ನೀಡುವುದರೊಂದಿಗೆ, ಕನ್ನಡ ಸಾಂಸ್ಕೃತಿಕ ಲೋಕದ ಶ್ರೀಮಂತಿಕೆಯನ್ನು ಬಿಂಬಿಸುವಲ್ಲಿ ಯಶಸ್ವಿಯಾದವು.
ಬೆಳಿಗ್ಗೆ ಪಟ್ಟಣದ ಜೇಸೀ ವೇದಿಕೆಯಿಂದ ಹೊರಟ ಸ್ತಬ್ಧಚಿತ್ರಗಳ ಮೆರವಣಿಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸಮಾಪನಗೊಂಡಿತು. ಶಾಲಾ ಕಾಲೇಜು ವಿದ್ಯಾರ್ಥಿಗಳು ಸಮವಸ್ತçದೊಂದಿಗೆ ಮೆರವಣಿಗೆಯಲ್ಲಿ ಶಿಸ್ತುಬದ್ಧ ಹೆಜ್ಜೆಹಾಕಿದರು.
ನಂತರ ಸರ್ಕಾರಿ ಶಾಲಾ ಮೈದಾನದಲ್ಲಿ ರಾಷ್ಟç ಧ್ವಜಾರೋಹಣ ನೆರವೇರಿಸಲಾಯಿತು. ರಾಷ್ಟç ಗೀತೆಯ ನಂತರ ನಾಡ ಧ್ವಜಾರೋಹಣ ಹಾಗೂ ನಾಡಗೀತೆ ಹಾಡುವ ಮೂಲಕ
(ಮೊದಲ ಪುಟದಿಂದ) ೬೭ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ತಾಲೂಕು ತಹಶಿಲ್ದಾರ್ ಎಸ್.ಎನ್. ನರಗುಂದ ಅವರು ಧ್ವಜಾರೋಹಣ ನೆರವೇರಿಸಿ ರಾಜ್ಯೋತ್ಸವ ಸಂದೇಶ ನೀಡುತ್ತಾ, ಕನ್ನಡದ ಭಾಷಾ ಸಾಹಿತ್ಯ, ಸಂಸ್ಕೃತಿ ಶ್ರೀಮಂತವಾಗಿದೆ. ವೀರಕಲಿಗಳ ನಾಡಿನಲ್ಲಿ ಭವ್ಯ ಪರಂಪರೆಯ ಬೇರು ಇನ್ನಷ್ಟು ಆಳಕ್ಕೆ ಇಳಿಯಬೇಕು. ಕರ್ನಾಟಕ ಎದುರಿಸುತ್ತಿರುವ ಹಲವು ಜ್ವಲಂತ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ ಎಂದರು.
ಪ್ರತ್ಯೇಕ ರಾಜ್ಯದ ಕೂಗುಗಳಿಗೆ ಇತಿಶ್ರೀ ಹಾಕಬೇಕು. ಕನ್ನಡ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸಬೇಕು. ಶಾಲಾ ಕಾಲೇಜು, ವಿಶ್ವವಿದ್ಯಾಲಯಗಳು ಬಂಡವಾಳ ಹೂಡಿ ಲಾಭಗಳಿಸುವ ಕೇಂದ್ರಗಳಾಗದೇ ನೆಲದ ಸಂಸ್ಕೃತಿ, ಆಚಾರ ವಿಚಾರಗಳನ್ನು ತಿಳಿಸುವ ಸಾಂಸ್ಕೃತಿಕ ರಾಯಭಾರಿಗಳಾಗಬೇಕು ಎಂದು ಅಭಿಪ್ರಾಯಿಸಿದರು.

ಉಪಸ್ಥಿತರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್, ಎಸ್.ಜೆ.ಎಂ. ಪ್ರಭಾರ ಮುಖ್ಯೋಪಾಧ್ಯಾಯಿನಿ ಎಸ್.ಕೆ. ರಾಣಿ, ಬಿ.ಆರ್.ಪಿ. ಲೋಕೇಶ್ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.
ಸನ್ಮಾನ: ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ೬ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಹಾಗೂ ಹಿರಿಯ ಸಾಹಿತಿ ಜಲಾ ಕಾಳಪ್ಪ ಅವರನ್ನು ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ಕನ್ನಡದ ಹಿರಿಮೆಯನ್ನು ಸಾರುವ ನೃತ್ಯಪ್ರಾಕಾರಗಳನ್ನು ಪ್ರದರ್ಶಿಸಿದರು.
ಪಸರಿಸಿದ ಕನ್ನಡದ ಕಂಪು
ರಾಜ್ಯೋತ್ಸವ ಅಂಗವಾಗಿ ಶಾಲಾ ಕಾಲೇಜುಗಳಿಂದ ಅಳವಡಿಸಲ್ಪಟ್ಟಿದ್ದ ಸ್ತಬ್ಧಚಿತ್ರಗಳು ಕನ್ನಡದ ಕಂಪನ್ನು ಪಸರಿಸುವಂತೆ ಮಾಡಿತು. ಓಎಲ್‌ವಿ ಆಂಗ್ಲ ಮಾಧ್ಯಮ ಶಾಲೆಯಿಂದ ಕರ್ನಾಟಕ ಪ್ರೇಕ್ಷಣೀಯ ಸ್ಥಳಗಳು, ಜ್ಞಾನವಿಕಾಸ ಶಾಲೆಯಿಂದ ಚಿತ್ರದುರ್ಗದ ಕಲ್ಲಿನ ಕೋಟೆ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಕರ್ನಾಟಕದ ಕಾಶ್ಮೀರ-ಕೊಡಗಿನ ವೈಶಿಷ್ಟö್ಯ, ಎಸ್‌ಜೆಎಂ ಶಾಲೆಯ ಕೊಡಗನ್ನು ರಕ್ಷಿಸಿ, ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಮೈಸೂರು ರಾಜವಂಶಸ್ಥರ ಆಳ್ವಿಕೆ, ಮಸಗೋಡು ಚನ್ನಮ್ಮ ಶಾಲೆಯ ಕರ್ನಾಟಕದ ಜಾನಪದ ಕಲೆಗಳು, ಸರ್ಕಾರಿ ಪದವಿಪೂರ್ವ ಕಾಲೇಜಿನ ಚಿತ್ರದುರ್ಗದ ಕಲ್ಲಿನ ಕೋಟೆ, ಸಂತ ಜೋಸೆಫರ ವಿದ್ಯಾಸಂಸ್ಥೆಯಿAದ ಹಾರಂಗಿ ಜಲಾಶಯ, ಸಾಂದೀಪನಿ ಶಾಲೆಯಿಂದ ಮೂಡಿಬಂದ ಕಿತ್ತೂರು ರಾಣಿ ಚನ್ನಮ್ಮ ದರ್ಬಾರು ಸ್ತಬ್ಧಚಿತ್ರಗಳು ಎಲ್ಲರ ಗಮನ ಸೆಳೆದವು. ವಿಶ್ವ ಮಾನವ ಕುವೆಂಪು ಶಾಲೆ ಪ್ರಥಮ, ಮಸಗೋಡು ಚನ್ನಮ್ಮ ಶಾಲೆ ದ್ವಿತೀಯ, ಸಾಂದೀಪನಿ ಶಾಲೆ ತೃತೀಯ ಬಹುಮಾನ ಪಡೆದವು. ನೃತ್ಯ ಸ್ಪರ್ಧೆಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಎಸ್‌ಜೆಎಂ ಪ್ರಥಮ, ಸಾಂದೀಪನಿ ಶಾಲೆ ದ್ವಿತೀಯ, ಸಮಾಪ್ರಾ ಶಾಲೆ ತೃತೀಯ ಬಹುಮಾನ ಪಡೆದವು. ಪ್ರೌಢಶಾಲಾ ವಿಭಾಗದಲ್ಲಿ ಓಎಲ್‌ವಿ ಶಾಲೆ ಪ್ರಥಮ, ಜ್ಞಾನವಿಕಾಸ ದ್ವಿತೀಯ, ಸ.ಪ.ಪೂ.ಕಾಲೇಜು ತೃತೀಯ, ಕಾಲೇಜು ವಿಭಾಗದಲ್ಲಿ ವಿದ್ಯಾ ನರ್ಸಿಂಗ್ ಕಾಲೇಜು ಪ್ರಥಮ, ಸಂತ ಜೋಸೆಫರ ಕಾಲೇಜು ದ್ವಿತೀಯ ಬಹುಮಾನ ಪಡೆದವು.