ಶನಿವಾರಸಂತೆ, ನ. ೨: ಶನಿವಾರಸಂತೆ ಲಯನ್ಸ್ ಕ್ಲಬ್ ಆಫ್ ಕಾವೇರಿ ಸೆಂಟಿನಲ್ ಕಚೇರಿಗೆ ಮೈಸೂರು ಲಯನ್ಸ್ ಕ್ಲಬ್‌ನ ವಲಯಾಧ್ಯಕ್ಷ ಲಕ್ಷಿö್ಮನಾಗರಾಜು ಭೇಟಿ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಲಕ್ಷಿö್ಮನಾಗರಾಜು ಶನಿವಾರಸಂತೆ ಲಯನ್ಸ್ ಕ್ಲಬ್‌ನ ಪದಾಧಿಕಾರಿಗ ಳೊಂದಿಗೆ ಚರ್ಚಿಸಿ ಕ್ಲಬ್‌ನ ಅಭಿವೃದ್ಧಿ ಕೈಗೊಳಲು ದಾನಿಗಳಿಂದ ಹಣ ಪಡೆಯಬೇಕಾದರೆ ಟ್ರೆಸ್ಟ್ವೊಂದನ್ನು ನೋಂದಾಯಿಸಿ ಕೊಳ್ಳಬೇಕೆಂದು ಮಾರ್ಗದರ್ಶನ ನೀಡಿದರು.

ಈ ಸಂದರ್ಭ ಮೈಸೂರು ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳಾದ ಸತ್ಯ, ನಾಗರಾಜು, ಶನಿವಾರಸಂತೆ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಎನ್.ಕೆ. ಅಪ್ಪಸ್ವಾಮಿ, ಖಜಾಂಜಿ ಬಿ.ಕೆ. ಚಿಣ್ಣಪ್ಪ, ಸದಸ್ಯರುಗಳು ಉಪಸ್ಥಿತರಿದ್ದರು. ಬಿ.ಕೆ. ಚಿಣ್ಣಪ್ಪ ಸ್ವಾಗತಿಸಿ, ಡಿ.ಪಿ. ಬೋಜಪ್ಪ ವಂದಿಸಿದರು.