ಕುಶಾಲನಗರ, ನ.೧: ಕುಶಾಲನಗರ ಕೊಪ್ಪಗಡಿ ಭಾಗದ ಸೇತುವೆ ಕೆಳಭಾಗದ ಬಂಡೆ ಮೇಲೆ ಭಾರೀಗಾತ್ರದ ಮೊಸಳೆಯೊಂದು ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ವಾಹನಗಳು ಮತ್ತು ಜನ ಸಂಚಾರ ವ್ಯವಸ್ಥೆ ಏರುಪೇರಾದ ಘಟನೆ ಮಂಗಳವಾರ ನಡೆದಿದೆ.

ಅಂದಾಜು ೧೨ ಅಡಿಗಳಿಗಿಂತಲೂ ಉದ್ದದ ಮೊಸಳೆ ಬೆಳಗ್ಗೆ ೧೧ ಗಂಟೆಗೆ ಬಂಡೆ ಮೇಲೆ ಪ್ರತ್ಯಕ್ಷವಾಗಿದ್ದು, ಇದನ್ನು ವಾಹನ ಸವಾರರು ತಮ್ಮ ವಾಹನವನ್ನು ರಸ್ತೆಯಲ್ಲಿಯೇ ನಿಲ್ಲಿಸಿ ಮೊಸಳೆಯನ್ನು ವೀಕ್ಷಿಸುತ್ತಿದ್ದ ದೃಶ್ಯ ಕಂಡುಬAತು.

ಸೇತುವೆಯ ಎರಡು ಭಾಗಗಳಲ್ಲಿ ವಾಹನಗಳು ನಿಲುಗಡೆಗೊಂಡ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ತಾಸುಗಟ್ಟಲೇ ವಾಹನ ಸಂಚಾರಕ್ಕೆ ತೊಡಕುಂಟಾಯಿತು. ಸರ್ಕಾರಿ ರಜೆ ಮತ್ತು ಕುಶಾಲನಗರದ ವಾರದ ಸಂತೆ ದಿನವಾದ ಹಿನ್ನೆಲೆಯಲ್ಲಿ ಪ್ರವಾಸಿಗರ ಓಡಾಟ ಸೇರಿದಂತೆ ವಾಹನ ದಟ್ಟಣೆ ಕೂಡ ಹೆಚ್ಚಳವಾಗಿದ್ದು, ವಾಹನ ಸಾಲುಗಟ್ಟಲೇ ನಿಂತ ದೃಶ್ಯ ಗೋಚರಿಸಿತು.

-ಚಂದ್ರಮೋಹನ್