ಮಡಿಕೇರಿ, ನ. ೨: ನಗರದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಬಡಾವಣೆಗೆ ಈ ವಿಭಾಗದ ನಗರಸಭಾ ಸದಸ್ಯರಾದ ಅಮೀನ್ ಮೊಹಿಸಿನ್ ಭೇಟಿಯಿತ್ತು, ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸಿದರು.

ಬಡಾವಣೆಯ ಮೂರೂ ಹಂತಗಳಲ್ಲಿರುವ ಬಹುತೇಕ ನಿವಾಸಿಗಳನ್ನು ಖುದ್ದಾಗಿ ಭೇಟಿಯಾಗಿ ಬಡಾವಣೆಯ ಕುಂದು - ಕೊರತೆಗಳನ್ನು ಆಲಿಸಿದರಲ್ಲದೆ, ಕೂಡಲೇ ಪರಿಹರಿಸಿಕೊಡುವುದಾಗಿ ಭರವಸೆ ನೀಡಿದರು.

ಈ ವಿಭಾಗದಲ್ಲಿ ಕಂಡುಬAದಿರುವ ಬೀದಿನಾಯಿಗಳ ಉಪಟಳದ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ವ್ಯವಸ್ಥೆ ಮಾಡುವುದಾಗಿ ಈ ಸಂದರ್ಭ ಅಮೀನ್ ಮೊಹಿಸಿನ್ ಆಶ್ವಾಸನೆ ನೀಡಿದರು.

ಬಡಾವಣೆಯ ಸೌಹಾರ್ದ ಸಮಿತಿಯ ಅಧ್ಯಕ್ಷ ಎಂ.ಎ. ಸಾಧು, ಉಪಾಧ್ಯಕ್ಷರಾದ ಜೀವನ್, ಪಾಡೆಯಂಡ ಮಣಿ ಮೇದಪ್ಪ, ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಾದ ಕೌಸರ್, ನಾಸಿರ್, ಪ್ರಧಾನ ಕಾರ್ಯದರ್ಶಿ ಬೈ.ಶ್ರೀ. ಪ್ರಕಾಶ್ ಮುಂತಾದವರು ಹಾಜರಿದ್ದು, ಸಮಸ್ಯೆಗಳ ಕುರಿತಂತೆ ಮಾಹಿತಿ ನೀಡಿದರು.