ಮಡಿಕೇರಿ, ನ. ೨ : ಜಿಲ್ಲೆಯ ಪ್ರಮುಖ ಪಟ್ಟಣಗಳಾದ ವೀರಾಜಪೇಟೆ ಹಾಗೂ ಸಿದ್ದಾಪುರ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯು ದಾರುಣ ಸ್ಥಿತಿಯಲ್ಲಿದೆ. ಕಳೆದ ಹಲವಾರು ವರ್ಷಗಳಿಂದ ಈ ರಸ್ತೆಯ ಸೂಕ್ತ ಕಾಮಗಾರಿಗಾಗಿ ಬೇಡಿಕೆ ವ್ಯಕ್ತವಾಗಿದ್ದರು ಸಂಬAಧಪಟ್ಟ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸದಿರುವುದು ಜನಸಾಮಾನ್ಯರನ್ನು ಹತಾಶೆಗೆ ಒಳಗಾಗುವಂತೆ ಮಾಡಿದೆ.
ಕಳೆದ ಕೆಲವು ತಿಂಗಳ ಹಿಂದೆ ಕಾವಾಡಿ ಸಮೀಪದಲ್ಲಿ ರಸ್ತೆ ಕಾಮಗಾರಿ ನಡೆದಿದ್ದು ಅದೇ ಹೊಂಡಗಳು ಮತ್ತೆ ಬಾಯಿಬಿಟ್ಟಿರುವುದು ಅಧಿಕಾರಿಗಳ ನಿರ್ಲಕ್ಷö್ಯವನ್ನು ಎತ್ತಿ ತೋರಿಸುತ್ತಿದೆ.
ದಿನನಿತ್ಯ ಸಾವಿರಾರು ವಿದ್ಯಾರ್ಥಿಗಳು ಸಿದ್ದಾಪುರ, ಮಾಲ್ದಾರೆ, ನೆಲ್ಲಿಹುದಿಕೇರಿ, ಅಮ್ಮತ್ತಿ, ಪಾಲಿಬೆಟ್ಟ, ಇಂಜಿಲಗೆರೆಯಿAದ ವೀರಾಜಪೇಟೆಗೆ ಸಾಗುತ್ತಿದ್ದರು ವಿದ್ಯಾರ್ಥಿಗಳ ಜೀವಕ್ಕೆ ಅಪಾಯ ತರುವ ಮಟ್ಟಿಗೆ ರಸ್ತೆಗಳು ಗುಂಡಿ ಬಿದ್ದಿವೆ.
(ಮೊದಲ ಪುಟದಿಂದ) ಸಂತ ಅನ್ನಮ್ಮ ಶಾಲೆ ಮತ್ತು ಕಾಲೇಜು, ಕಾವೇರಿ ಕಾಲೇಜು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಗುಡ್ ಶಫರ್ಡ್, ನೇತಾಜಿ ಶಾಲೆ, ಪ್ರಗತಿ ಶಾಲೆ, ರೋಟರಿ ಶಾಲೆ ಹೀಗೆ ಹಲವಾರು ವಿದ್ಯಾ ಸಂಸ್ಥೆಗಳಿಗೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ದಿನನಿತ್ಯ ಈ ಮಾರ್ಗವಾಗಿ ಸಂಚರಿಸಬೇಕಾಗಿದೆ. ಹಲವಾರು ವಿದ್ಯಾರ್ಥಿಗಳು ಸ್ವಂತ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತಿದ್ದಾರೆ.
ಪ್ರಮುಖ ವಾಣಿಜ್ಯ ಪಟ್ಟಣಗಳಲ್ಲೊಂದಾದ ವೀರಾಜಪೇಟೆಗೆ ದಿನನಿತ್ಯ ಹಲವಾರು ಜನಸಾಮಾನ್ಯರು ಸ್ವಂತ ವಾಹನದಲ್ಲೂ ಅಲ್ಲದೆಯು ಸಂಚರಿಸಬೇಕಾಗಿ ಬರುತ್ತದೆ ಹಾಗೂ ತಾಲೂಕು ಕಚೇರಿ, ತಹಶೀಲ್ದಾರ್ ಕಚೇರಿಗೆ ಈ ಮಾರ್ಗವಾಗಿಯೇ ಇಲ್ಲಿಯ ಜನರು ಸಾಗಬೇಕಾಗಿ ಬರುತ್ತದೆ.
ಒಂದು ಹೊಂಡವನ್ನು ತಪ್ಪಿಸಿದರೆ ಮತ್ತೊಂದರಲ್ಲಿ ಬೀಳುವುದು ಖಚಿತವಾಗಿರುವ ಮಟ್ಟಿಗೆ ರಸ್ತೆಗಳು ಗುಂಡಿ ಬಿದ್ದಿವೆ.
ವೀರಾಜಪೇಟೆ ವಿಧಾನಸಭಾ ವ್ಯಾಪ್ತಿಯ ರಸ್ತೆಗಳು ಇಲ್ಲಿಯ ಶಾಸಕರ ಜವಾಬ್ದಾರಿಯನ್ನು ಎತ್ತಿ ತೋರಿಸುತ್ತಿದೆ. ಸರಕಾರದ ವೈಫಲ್ಯತೆಗಳ ಪಟ್ಟಿಯಲ್ಲಿ ಗುಂಡಿ ಬಿದ್ದಿರುವ ರಸ್ತೆಗಳು ಪ್ರಮುಖವಾದದ್ದು. -ವರದಿ: ತೌಸೀಫ್ ಅಹ್ಮದ್