ಕೂಡಿಗೆ, ನ. ೨: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ಕುಶಾಲನಗರ ಹಾರಂಗಿ ಮತ್ತು ಕೂಡುಮಂಗಳೂರು ಗ್ರಾಮಗಳಿಗೆ ತೆರಳುವ ಚಿಕ್ಕತ್ತೂರು ಗ್ರಾಮದ ವೃತ್ತದಲ್ಲಿ ರಾಜ್ಯೋತ್ಸವದ ದಿನದಂದು ಗ್ರಾಮದ ವಿನಾಯಕ ಯುವಕ ಸಂಘದ ವತಿಯಿಂದ ಡಾ. ಪುನಿತ್ ರಾಜಕುಮಾರ್ ಅವರ ಪುತ್ಥಳಿiÀÄನ್ನು ಕಣಿವೆಯ ಸಾಹಿತಿ ಭಾರಧ್ವಾಜ್ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಕೂಡುಮಂಗಳೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ರಮೇಶ್, ಉಪಾಧ್ಯಕ್ಷ ಭಾಸ್ಕರ್ ನಾಯಕ್, ಸದಸ್ಯರಾದ ದಿನೇಶ್, ಪಾರ್ವತಮ್ಮ, ಹಾರಂಗಿ ಮಣಿಕಂಠ, ಭಾಗ್ಯಮ್ಮ ಖತೀಜ್, ತಾ.ಪಂ. ಮಾಜಿ ಸದಸ್ಯ ಗಣೇಶ್, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಸಿ.ಸಿ. ಸ್ವಾಮಿ, ಮಾಜಿ ಸದಸ್ಯ ಕುಮಾರಸ್ವಾಮಿ, ಯುವಕ ಸಂಘದ ಉಪಾಧ್ಯಕ್ಷ ಗಣೇಶ್, ಕಾರ್ಯದರ್ಶಿ ಕೃಷ್ಣ ಕಾಂತ್, ಖಚಾಂಚಿ ಶ್ರೀನಿವಾಸ ಸೇರಿದಂತೆ ಯುವಕ ಸಂಘದ ಸರ್ವ ಸದಸ್ಯರು ಹಾಗೂ ಚಿಕ್ಕತ್ತೂರು, ದೊಡ್ಡತ್ತೂರು ಕೂಡುಮಂಗಳೂರು ಗ್ರಾಮ ವ್ಯಾಪ್ತಿಯ ಗ್ರಾಮಸ್ಥರು, ಸಾರ್ವಜನಿಕರು ಹಾಜರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿನಾಯಕ ಯುವಕ ಸಂಘದ ಅಧ್ಯಕ್ಷ ಸುನಿಲ್ ವಹಿಸಿದರು.