ಮಡಿಕೇರಿ, ನ. ೧: ಜಿಲ್ಲಾಡಳಿತದ ಮೂಲಕ ನಡೆಯುವ ರಾಜ್ಯೋತ್ಸವ ಸಮಾರಂಭದಲ್ಲಿ ಶಿಷ್ಟಾಚಾರದಂತೆ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸಿ ರಾಜ್ಯೋತ್ಸವದ ಸಂದೇಶ ನೀಡಬೇಕಾಗಿತ್ತು. ಆದರೆ, ಈ ಬಾರಿಯ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಅವರು ಪಾಲ್ಗೊಂಡಿರಲಿಲ್ಲ. ಇವರ ಬದಲಾಗಿ ಜಿಲ್ಲಾಧಿಕಾರಿ ಡಾ|| ಬಿ.ಸಿ. ಸತೀಶ ಅವರು ಧ್ವಜಾರೋಹಣ ಮಾಡಿದರು. ರಾಜಧಾನಿ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖಾ ಸಚಿವರೂ ಆಗಿರುವ ಬಿ.ಸಿ. ನಾಗೇಶ್ ಅವರು ಪಾಲ್ಗೊಳ್ಳಬೇಕಾಗಿದ್ದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.

(ಮೊದಲ ಪುಟದಿಂದ)

ಪೊನ್ನAಪೇಟೆಯಲ್ಲಿ ಶಿರಸ್ತೆದಾರ್...

ಕೊಡಗಿನಲ್ಲಿ ಕುಶಾಲನಗರದೊಂದಿಗೆ ಮತ್ತೊಂದು ತಾಲೂಕಾಗಿರುವ ಪೊನ್ನಂಪೇಟೆಯಲ್ಲಿ ಕೂಡ ಶಿಷ್ಟಾಚಾರದಂತೆ ತಹಶೀಲ್ದಾರ್ ಧ್ವಜಾರೋಹಣ ಮಾಡಬೇಕಾಗಿತ್ತು. ಆದರೆ, ಪ್ರಸ್ತುತ ತಾಲೂಕು ತಹಶೀಲ್ದಾರ್ ಆಗಿರುವ ಪ್ರಶಾಂತ್ ಅವರು ರಜೆಯಲ್ಲಿದ್ದಾರೆ. ವೀರಾಜಪೇಟೆ ತಹಶೀಲ್ದಾರ್ ಅರ್ಚನಾಭಟ್ ಪ್ರಭಾರವಾಗಿ ಅಧಿಕಾರದಲ್ಲಿದ್ದಾರೆ. ಆದರೆ ಅರ್ಚನಾಭಟ್ ಅವರು ವೀರಾಜಪೇಟೆಯಲ್ಲಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಾರಣ ಪೊನ್ನಂಪೇಟೆಯಲ್ಲಿ ಶಿರಸ್ತೆದಾರ್ ಜನಾರ್ಧನ್ ಧ್ವಜಾರೋಹಣ ಮಾಡಿದರು.